Categories
ಮಂಗಳೂರು

ಈ ಯುವತಿ 170 ಗಂಟೆ ನೃತ್ಯ ಮಾಡ್ತಾಳೆ!

ಈ ಯುವತಿ 170 ಗಂಟೆ ನೃತ್ಯ ಮಾಡ್ತಾಳೆ! 
– 170 ಗಂಟೆ ನೃತ್ಯ ಪ್ರದರ್ಶನ ದಾಖಲೆಯತ್ತ ರೆಮೋನಾ ಪಿರೇರಾ
– ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡಲ್ಲಿ ದಾಖಲೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕೇವಲ ನಾಲ್ಕರಿಂದ ಐದು ನಿಮಿಷಗಳ ಕಾಲ ನೃತ್ಯ ಮಾಡಿದರೂ ಸುಸ್ತಾಗಿ ಬಿಡುತ್ತಾರೆ. ಇಂತಹದರಲ್ಲಿ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯಾದ ರೆಮೋನಾ ಪಿರೇರಾ ಎಂಬ ಯುವತಿ ಸತತ ನೂರ ಎಪ್ಪತ್ತು ಗಂಟೆಗಳ ಕಾಲ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಬರೆಯುವ ತರಾತುರಿಯಲ್ಲಿದ್ದಾರೆ. ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ರೆಮೋನಾ ಪಿರೇರ ಅವರು ಜುಲೈ ಇಪ್ಪತ್ತೊಂದರಂದು ತಮ್ಮದೇ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್ ನಲ್ಲಿ ನೃತ್ಯವನ್ನು ಮಾಡಲು ಆರಂಭಿಸಿದ್ದು, ಇಪ್ಪತ್ತೆಂಟರಂದು ಮುಗಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ. ರೆಮೋನಾ ಅವರು ಸೌರಭ ಕಲಾ ಪರಿಷತ್ತಿನ ಡಾ. ಶ್ರೀ ವಿದ್ಯಾ ಅವರ ಬಳಿ ಭರತನಾಟ್ಯವನ್ನು ಅಭ್ಯಾಸಿಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ 2017 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದು, ಪ್ರಧಾನ ಮಂತ್ರಿಗಳಿಂದ ಅತ್ಯುನ್ನತ ಬಾಲ ಪುರಸ್ಕಾರವನ್ನು ಸಹ ಪಡೆದುಕೊಂಡಿರುತ್ತಾರೆ. ಪ್ರಸ್ತುತ ಅರವತ್ತೊಂದು ಹಾಡುಗಳನ್ನು ಒಂದರ ಹಿಂದೆ ಒಂದು ಜೋಡಿಸಿಟ್ಟುಕೊಂಡು, ಮೂರು ಮೂರು ಗಂಟೆಗಳ ಕಾಲ ನೃತ್ಯವನ್ನು ಮಾಡುವುದು ಮತ್ತು ಹದಿನೈದು ನಿಮಿಷ ವಿರಾಮ ತೆಗೆದುಕೊಳ್ಳುವುದು ಮಾಡುತ್ತಿದ್ದಾರೆ. ಬಹುದಿನಗಳ ಕಾಲ ಸತತ ನೃತ್ಯವನ್ನು ಪ್ರದರ್ಶಿಸಬೇಕಾಗಿರುವುದರಿಂದ ಲಘು ಉಪಹಾರವನ್ನು ಮಾತ್ರ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.