ಮಾಳ ಶ್ರೀ ಗುರುಕುಲ ಶಾಲೆಯಲ್ಲಿ ಪರಿಸರ ದಿನ ಆಚರಣೆ
– ಅರಣ್ಯ ಇಲಾಖೆ ಮತ್ತು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ವಲಯ ಹಾಗೂ ಮಾಳ ಗ್ರಾಮ ಪಂಚಾಯತ್ ಸಹಯೋಗ
– ಶ್ರೀ ಗುರುಕುಲ ಮಾಳ ಶಾಲೆ ಪ್ರಾರಂಭೋತ್ಸವ ಸಂಭ್ರಮ
NAMMUR EXPRESS NEWS
ಕಾರ್ಕಳ: ಅರಣ್ಯ ಇಲಾಖೆ ಮತ್ತು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ವಲಯ ಹಾಗೂ ಮಾಳ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮಾಳ ಇಲ್ಲಿನ ಪಿಡಿಒ ಶ್ರೀನಿವಾಸ್ ಇವರು ಗಿಡ ನೆಡುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಉಪ ವಲಯ ಅರಣ್ಯಾಧಿಕಾರಿ ಅಜಿತ್ ಕುಮಾರ್ ಇವರು ಅರಣ್ಯ ಸಂರಕ್ಷಿಸುವುದರ ಬಗ್ಗೆ ಮತ್ತು ಗಿಡಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದರು ಈ ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ರಾಜು ಎಲ್ ಜೆ ಅರಣ್ಯ ವೀಕ್ಷಕರಾದ ಗುರುರಾಜ್ ಉದಯ್ ಕುಮಾರ್ ದಾಮೋದರ್ ಹಾಗೂ ಶ್ರೀ ವಿದ್ಯಾವರ್ಧಕ ಸಂಘ ಮಾಳ ಇದರ ಕಾರ್ಯದರ್ಶಿಯಾದ ಗೀತಾ ಸೇರಿಗಾರ್ ಹಾಗೂ ಪೋಷಕರು ಉಪಸ್ಥಿತರಿದ್ದರು ಶಿಕ್ಷಕಿ ಶೋಭಾ ಸ್ವಾಗತಿಸಿ ಶಿಕ್ಷಕಿ ಜ್ಯೋತಿ ವಂದಿಸಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರೀ ಗುರುಕುಲ ಮಾಳ ಶಾಲೆ ಪ್ರಾರಂಭೋತ್ಸವ
2025 26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಹೂ ಕೊಟ್ಟು ಸ್ವಾಗತಿಸುವ ಮೂಲಕ ಪ್ರಾರಂಭ ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಮರಾಠೆ ಇವರು ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಅತಿಥಿಗಳಾಗಿ ವಿದ್ಯಾವರ್ಧಕ ಸಂಘದ ಸದಸ್ಯರಾದ ರಾಮ ಸೇರಿಗಾರ ರವೀಂದ್ರನಾಥ ಜೋಶಿ ಉಪಸ್ಥಿತರಿದ್ದು ಶಾಲಾ ಪ್ರಾರಂಭೋತ್ಸವಕ್ಕೆ ಶುಭ ಕೋರಿದರು ನಂತರ ಸರಸ್ವತಿ ದೇವಿಗೆ ದೀಪ ಬೆಳಗಿಸಿ ಹೊಸತಾಗಿ ಸೇರ್ಪಡೆಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಆರತಿ ಬೆಳಗಿಸಿ ಸ್ವಾಗತ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಇಲಾಖೆ ವತಿಯಿಂದ ವಿತರಿಸಿದ ಉಚಿತ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಮಕ್ಕಳಿಗೆ ನೀಡಲಾಯಿತು ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು ಸಹ ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕಿ ಸುನೀತಾ ಧನ್ಯವಾದ ನೀಡಿದರು ನಂತರ ಆಗಮಿಸಿದ ಎಲ್ಲರಿಗೂ ಕೂಡ ಸಿಹಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು
