ಕಾರ್ಕಳ ಶ್ರೀ ದುರ್ಗಾಪರಮೇಶ್ವರಿ ವಿ. ಸ ಸಂಘವು ಲಾಭದತ್ತ!!
– ಆರ್ಥಿಕ ಸಾಲಿನಲ್ಲಿ ರೂ.60.66 ಲಕ್ಷ ನಿವ್ವಳ ಲಾಭ!
– ಕಳೆದ ಸಾಲಿಗಿಂತ ಶೇ. 19.16 ಏರಿಕೆ: ಅಧ್ಯಕ್ಷರು ಸಂತೋಷ್ ರಾವ್
NAMMUR EXPRESS NEWS
ಕಾರ್ಕಳ: ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಪ್ರಸ್ತುತ ಸಾಲಿನಲ್ಲಿ 60.66 ಲಕ್ಷ ರೂ. ಲಾಭ ಗಳಿಸಿದೆ. 175.33 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು ಕಳೆದ ಸಾಲಿಗಿಂತ ಶೇ. 19.16 ಏರಿಕೆ ಕಂಡಿದೆ.
ಎಂದು ಸಂಘದ ಅಧ್ಯಕ್ಷರಾದ ಸಂತೋಷ್ ರಾವ್ ಇವರು ತಿಳಿಸಿದ್ದಾರೆ.
24 ವರ್ಷಗಳಿಂದ ಸೇವೆ ನೀಡುತ್ತಿರುವ ಸಹಕಾರ ಸಂಘವು 2024-25ರ ಆರ್ಥಿಕ ವರ್ಷಾಂತ್ಯಕ್ಕೆ 14,957 ಸದಸ್ಯರಿಂದ 33.03 ಲಕ್ಷ ರೂ ಬಂಡವಾಳ ಹೊಂದಿದೆ ಎಂದು ಸಂಘದ ಅಧ್ಯಕ್ಷರು ಈ ಮೂಲಕ ಮಾಹಿತಿ ನೀಡಿದರು.
ಸಂಘವು ಒಟ್ಟು 38.45 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು ಕಳೆದ ಸಾಲಿಗಿಂತ ಶೇ. 30.01 ಏರಿಕೆ ಕಂಡಿದೆ. ಸದಸ್ಯರಿಗೆ ಎಲ್ಲಾ ರೀತಿಯ ಸಾಲ ವಿತರಿಸುತ್ತಿದ್ದು, 31.82 ಕೋಟಿ ರೂ. ಸಾಲ (ಹೊರ ಬಾಕಿ) ನೀಡಲಾಗಿದೆ. ಕಳೆದ ಸಾಲಿಗಿಂತ ಶೇ. 24.43 ಏರಿಕೆ ಕಂಡಿದೆ. 3.18 ಕೋಟಿ ರೂ. ನಿಧಿಗಳು 5.50 ಕೋಟಿ ರೂ. ಹೂಡಿಕೆಗಳಿದ್ದು 44.13 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು ಕಳೆದ ಸಾಲಿಗಿಂತ ಶೇ. 27.43 ಏರಿಕೆ ಕಂಡಿದೆ. ಒಟ್ಟು 8 ಶಾಖೆಗಳನ್ನು ಹೊಂದಿದ್ದು ಈ ಪೈಕಿ ಕೇಂದ್ರ ಕಛೇರಿ ಮತ್ತು ಮುಖ್ಯ ಶಾಖೆ ಸ್ವಂತ ಕಛೇರಿ ಹೊಂದಿದ್ದು ವಾರ್ಷಿಕ ಸುಮಾರು 3 ಲಕ್ಷ ರೂ ಗಳಷ್ಟು ಹಣವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾತ್ತಿದೆ ಎಂದು ತಿಳಿಸಿದ್ದಾರೆ.
