Categories
ತೀರ್ಥಹಳ್ಳಿ

ಯಡೂರು ಕ್ರಿಕೆಟ್ ಹಬ್ಬದ ರಂಗು!

ಯಡೂರು ಕ್ರಿಕೆಟ್ ಹಬ್ಬದ ರಂಗು!

– ಯಡೂರು ಕ್ರಿಕೆಟ್ ಲೀಗ್ ಸೀಸನ್ – 7 ಸೂಪರ್
– ರಾಜ್ಯಕ್ಕೆ ಬೆಳಕು ನೀಡಿದ ವರಾಹಿ ಮುಳುಗಡೆ ಸಂತ್ರಸ್ಥರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ
– ಕ್ರಿಕೆಟ್ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಹಬ್ಬ

NAMMUR EXPRESS NEWS
ತೀರ್ಥಹಳ್ಳಿ/ ಯಡೂರು: ತೀರ್ಥಹಳ್ಳಿ ಹೊಸನಗರ ಗಡಿ ಭಾಗ ಯಡೂರಲ್ಲಿ ಯಡೂರು ಕ್ರಿಕೆಟ್ ಲೀಗ್ ಸೀಸನ್ – 7 ವಿ.ಟಿ. ಗ್ರಂಡ್, ಸುಳುಗೋಡು-ಯಡೂರಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.
ಏ.12 ಶನಿವಾರ ಮತ್ತು13 ಭಾನುವಾರ ಅದ್ದೂರಿಯಾಗಿ ಆಯೋಜಿಸಲಾಗಿದೆ. ಈ ಟೂರ್ನಿ ಪ್ರತಿ ವರ್ಷ ಒಂದಲ್ಲ ಒಂದಲ್ಲ ರೀತಿಯಾಗಿ ಬರೀ ಕ್ರಿಕೆಟ್ ಟೂರ್ನಮೆಂಟ್ ಆಗದೇ ಸಾಮಾಜಿಕವಾಗಿ ಊರನ್ನು ಸಂಘಟನೆ ಮಾಡುವ ದಿಕ್ಕಿನಲ್ಲಿ ಸೇವೆ ಸಲ್ಲಿಸುತ್ತಿದೆ.
ಕತ್ತಲೆಯಲ್ಲಿದ್ದ ರಾಜ್ಯಕ್ಕೆ ಬೆಳಕು ನೀಡಿದ ವರಾಹಿ ಮುಳುಗಡೆ ಸಂತ್ರಸ್ಥರಿಗೆ ಈ ಪಂದ್ಯಾವಳಿ ಗೌರವ ಸಮರ್ಪಣೆ ಮಾಡಲಿದ್ದು, ಯಡೂರು ಕ್ರಿಕೆಟ್ ಹಬ್ಬ ರಂಗೇರಿದೆ.

– ಕ್ರಿಕೆಟ್ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳ ಪಟ್ಟಿ ಹೀಗಿದೆ!

1). ವರಾಹಿ ಟೈಗರ್
ಮಾಲೀಕರು : ವೈ.ಕೆ. ವೆಂಕಟೇಶ್ ಹೆಗ್ಡೆ
2). ಹೆಗ್ಡೆ ಬುಲ್ಸ್
ಮಾಲೀಕರು : ಸಂದೀಪ್ ಹೆಗ್ಡೆ
3). ಕೆ. ಯು. ಜಿ ಕ್ರಿಕೆಟರ‍್ಸ್
ಮಾಲೀಕರು: ವಾಸುದೇವ ಮತ್ತು ಅಣ್ಣಪ್ಪ
4). ಯಡೂರು ಲಯನ್
ಮಾಲೀಕರು : ಮಹೇಶ್ ಬಂಕರಬೀಡು
5).ಹನಿ ಸ್ಟ್ರೈಕರ‍್ಸ್
ಮಾಲೀಕರು : ಇಬ್ರಾಹಿಂ ಬ್ರದರ್ ಮತ್ತು ರಶೀದ್
6). ಮಲ್ನಾಡ್ ಫಾರ್ಮರ‍್ಸ್
ಮಾಲೀಕರು:ಅಂಬರೀಶ್, ಉಳುಕೊಪ್ಪ
7). ಲಚ್ಚಿ ಬ್ರದರ್ಸ್
ಮಾಲೀಕರು: ದಿನೇಶ್ ಪೂಜಾರಿ ಮತ್ತು ಶಶಿಕುಮಾರ್, ಗೌಠಾಣಿ
8)ಆರ್. ಸಿ. ಬಿ ಯಡೂರು
ಮಾಲೀಕರು: ಅರುಣ್ ಮೊಗವೀರ ಮತ್ತು ಮಂಜು ಸಿ.. ಗೌಠಾಣಿ
9). ನಿಮ್ದೇ ಟೀಮ್
ಮಾಲೀಕರು : ಚಿದಾನಂದ, ಯಡೂರು ಮತ್ತು ಅರುಣ್, ಶೆಟ್ಟಿಕೊಪ್ಪ
10). ವೃಷಭ ಫೈಟರ‍್ಸ್
ಮಾಲೀಕರು : ಶ್ರೀ ಆದರ್ಶ ಮತ್ತು ಶ್ರೀ ದೀಕ್ಷಿತ್, ಉಳುಕೊಪ್ಪ

ಕಾರ್ಯಕ್ರಮದ ವಿವರಣೆ ಹೀಗಿದೆ!

ವಿನೂತನ ಮಾದರಿಯಲ್ಲಿ ಉದ್ಘಾಟನಾ ಸಮಾರಂಭಏ. 12-04-2025, ಶನಿವಾರ ಬೆಳಗ್ಗೆ 9-00 ಗಂಟೆಗೆ ನಡೆದಿದೆ.
2025 ರ ಯಡೂರು ಕ್ರಿಕೆಟ್ ಲೀಗ್ ಸೀಸನ್ – 7 ಪಂದ್ಯಾವಳಿಯು M SPORTS U-TUBE ಚಾನಲ್‌ನಲ್ಲಿ ನೇರ ಪ್ರಸಾರವಿರಲಿದೆ.
ಮಲೆನಾಡಿನ ಎಲ್ಲಾ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಏ. 13ಕ್ಕೆ ಬಹುಮಾನ ವಿತರಣೆ ಮತ್ತು ಸನ್ಮಾನ ಸಮಾರಂಭ!

ಬಹುಮಾನ ವಿತರಣೆ ಮತ್ತು ಸನ್ಮಾನ ಸಮಾರಂಭ ಏ. 13ರಂದು ಭಾನುವಾರ ಸಂಜೆ 6:00ಗಂಟೆಗೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಸಾಹಿತಿಗಳು, ನಿರ್ದೇಶಕರು ಹಾಗೂ ನಿರ್ಮಾಪಕರು ಕವಿರಾಜ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ಶಮಿತಾ ಮಲ್ನಾಡ್ ಹಾಗೂ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.
YCL SEASON-7ಗೆ ಸಹಕರಿಸುತ್ತಿರುವ ಎಲ್ಲಾ ಮಹನೀಯರುಗಳಿಗೆ ಯಡೂರು ಕ್ರಿಕೇಟ್ ಲೀಗ್ ಅಭಾರಿಯಾಗಿರುತ್ತದೆ. ಎಂದು ಈ ಮೂಲಕ ತಿಳಿಸಿದೆ. ಈ ಎಲ್ಲಾ ಕಾರ್ಯಕ್ರಮಕ್ಕೂ YCL SEASON-7-2025 ಪ್ರೇಮ್ ಯಡೂರು ಮತ್ತು ಸುಂದ್ರೇಶ್ ಯಡೂರು ವಿನಯ್ ಯಡೂರು, ಟೀಮ್ ವೈಸಿಎಲ್ ಸಮಸ್ತ ಯಡೂರು-ಸುಳುಗೋಡು ಗ್ರಾಮಸ್ಥರು ಈ ಮೂಲಕ ಸರ್ವರಿಗೂ ಆದರದ ಸುಸ್ವಾಗತ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.