Categories
ಕಾರ್ಕಳ

ಕಾರ್ಕಳ: ಮಕ್ಕಳ ಕುಡಿತದ ಚಟ ಸಹಿಸಲಾರದೇ ಜೀವಾಂತ್ಯಗೊಳಿಸಿದ ತಾಯಿ!

ಕಾರ್ಕಳ: ಮಕ್ಕಳ ಕುಡಿತದ ಚಟ ಸಹಿಸಲಾರದೇ ಜೀವಾಂತ್ಯಗೊಳಿಸಿದ ತಾಯಿ!
* ಮಕ್ಕಳ ಗೋಳಿಗೆ ಮನನೊಂದು ತಾಯಿ ಆತ್ಮಹತ್ಯೆ

ಆರ್‌ಸಿಬಿ ದುರಂತ, ಮುಲ್ಕಿಯ ಅಕ್ಷತಾ ಪೈ ಕೂಡ ಮೃತ್ಯು!
* ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡ ಮಂಗಳೂರು ಯುವತಿ

NAMMUR EXPRESS NEWS
ಕಾರ್ಕಳ: ತನ್ನ ಇಬ್ಬರು ಗಂಡು ಮಕ್ಕಳು ವಿಪರೀತ ಕುಡಿತದ ಚಟ ಹೊಂದಿದ್ದ ಕಾರಣದಿಂದಾಗಿ ಮನನೊಂದು ತಾಯಿಯೋರ್ವರು ನೇಣಿಗೆ ಶರಣಾಗಿ ಜೀವ ಕಳೆದುಕೊಂಡ ಕರುಳು ಹಿಂಡುವ ಘಟನೆ ಕಾರ್ಕಳದ ಬಾರಾಡಿಯಲ್ಲಿ ನಡೆದಿದೆ.
ಐವತ್ತೊಂಭತ್ತು ವರ್ಷದ ಗಿರಿಜಾ ಎಂಬವರು ಜೀವಾಂತ್ಯಗೊಳಿಸಿದ ಮಹಿಳೆ. ಇವರ ಗಂಡು ಮಕ್ಕಳಾದ ಅಶೋಕ ಮತ್ತು ಅಜಿತ್ ಎಂಬವರು ವಿಪರೀತ ಕುಡಿತದ ಚಟ ಹೊಂದಿದ್ದರು. ಒಂದೇ ಮನೆಯಲ್ಲಿದ್ದು ಕುಡಿದು ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದರು.
ಎರಡು ದಿನದ ಹಿಂದೆ ಕಲ್ಲಿನಿಂದ ಪರಸ್ಪರ ಹೊಡೆದಾಡಿಕೊಂಡು ಜಗಳವಾಡುತ್ತಿದ್ದಾಗ ತಾಯಿ ಗಿರಿಜಾ ಎಷ್ಟು ಹೇಳಿದರೂ ಕೇಳಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

* ಆರ್‌ಸಿಬಿ ದುರಂತ, ಮುಲ್ಕಿಯ ಅಕ್ಷತಾ ಪೈ ಕೂಡ ಮೃತ್ಯು!

ಮಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಟ್ರೋಫಿ ಗೆದ್ದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಒಟ್ಟು 11 ಮಂದಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ಮಂಗಳೂರು ತಾಲೂಕಿನ ಮುಲ್ಕಿಯ ಸಿಎ ಅಕ್ಷತಾ ಪೈ ಎಂಬವರು ಕೂಡ ಮೃತ ಪಟ್ಟಿದ್ದಾರೆ.
ಇವರು ಬೆಂಗಳೂರಿನಲ್ಲಿ ಸಿ ಎ ವೃತ್ತಿ ನಿರ್ವಹಿಸುತ್ತಿದ್ದು, ವೆಂಕಟರಮಣ ದೇವಸ್ಥಾನದ ಮುಲ್ಕಿ ಎದುರಡೆ ಇವರ ಮನೆಯಿದೆ. ಬೆಂಗಳೂರಿನಲ್ಲಿ ಆರ್‌ ಸಿ ಬಿಯ ವಿಜಯೋತ್ಸವಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮನೆ ಮಗಳನ್ನು ಕಳೆದುಕೊಂಡ ಮನೆಯವರ ಅಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.