ಬಂಟ್ವಾಳ ಹತ್ಯೆ ಪ್ರಕರಣ ಶೃಂಗೇರಿ ಬಜರಂಗದಳ ಕಾರ್ಯಕರ್ತ ಅರೆಸ್ಟ್
* ಬಂಟ್ವಾಳ ಹತ್ಯೆ ಪ್ರಕರಣ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ
* ಶೃಂಗೇರಿ ಬಜರಂಗದಳ ಕಾರ್ಯಕರ್ತ ರವಿ ಸಂಜಯ್ ಪೂಜಾರಿ ಬಂಧನ
NAMMMUR EXPRESS NEWS
ಶೃಂಗೇರಿ: ಬಂಟ್ವಾಳದ ಕೊಳ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಶೃಂಗೇರಿ ಬಜರಂಗದಳ ಕಾರ್ಯಕರ್ತ ರವಿ ಸಂಜಯ್ ಪೂಜಾರಿ ಬಂಧನವಾಗಿದೆ. ರವಿ ಸಂಜಯ್ನನ್ನು ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದಿದು ಬಂಟ್ವಾಳಕ್ಕೆ ಕರೆದೊಯ್ದಿದ್ದಾರೆ.
ನಿನ್ನೆ ಮಧ್ಯಾಹ್ನದ ಸುಮಾರಿಗೆ ಬಾಡಿಗೆ ಇನ್ನೊವಾ ಕಾರಿನಲ್ಲಿ ಬಂದ ಮಂಗಳೂರಿನ ವಿಶೇಷ ಪೊಲೀಸರ ತಂಡ, ಶೃಂಗೇರಿಯ ಗಾಂಧಿ ಮೈದಾನದ ತನ್ನ ಅಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ರವಿ ಸಂಜಯ್ನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ರವಿ ಸಂಜಯ್ ಪೂಜಾರಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿ,ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ.