Categories
ಕಾರ್ಕಳ

ಜೋಡುರಸ್ತೆಯಲ್ಲಿ ಲಯನ್ಸ್‌ ಸಿಟಿ ವತಿಯಿಂದ ಉಚಿತ ಯೋಗ ತರಬೇತಿ ಉದ್ಘಾಟನೆ

ಜೋಡುರಸ್ತೆಯಲ್ಲಿ ಲಯನ್ಸ್‌ ಸಿಟಿ ವತಿಯಿಂದ ಉಚಿತ ಯೋಗ ತರಬೇತಿ ಉದ್ಘಾಟನೆ

ಮೂಲಭೂತ ಉಸಿರಾಟದ ಅರಿವಿನೊಂದಿಗೆ ಯೋಗ ಅಭ್ಯಾಸ ಮಾಡಿ : ಡಾ. ಸತೀಶ್‌ ಶೆಟ್ಟಿ

ಕಾರ್ಕಳ : ಯೋಗದ ಭೌತಿಕ ಅಂಶಗಳು ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಸೌಮ್ಯ ರೂಪವಾಗಿ ಭಾರಿ ಜನಪ್ರಿಯತೆಯನ್ನು ಗಳಿಸಿವೆ. ಯೋಗವು ಸಾವಿರಾರು ವರ್ಷಗಳ ಹಿಂದಿನ ಭಾರತೀಯ ತತ್ವಶಾಸ್ತ್ರವಾಗಿದೆ ಎಂದು ಖ್ಯಾತ ದಂತ ತಜ್ಞ, ಭಾರತೀಯ ದಂತ ವೈದ್ಯಕೀಯ ಸಂಘದ ಉಡುಪಿ ಜಿಲ್ಲೆಯ ಮಾಜಿ ಅಧ್ಯಕ್ಷರು ಆಗಿರುವ ಡಾ. ಸತೀಶ್‌ ಶೆಟ್ಟಿ ತಿಳಿಸಿದರು. ಅವರು ಆ. 1 ರಂದು ಶ್ರೀನಿಧಿ ಕಟ್ಟಡದಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯು ಆಯೋಜಿಸಿದ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯೋಗದಲ್ಲಿ ವಿಭಿನ್ನ ವಿಧಗಳಿವೆ ಹಾಗೂ ಪ್ರತಿಯೊಂದನ್ನು ಮೂಲಭೂತವಾಗಿ ಉಸಿರಾಟದ ಅರಿವಿನೊಂದಿಗೆ ಅಭ್ಯಾಸ ಮಾಡುವ ಎಂದು ತಿಳಿಸಿದರು. ಕಾರ್ಕಳ ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಾತನಾಡಿ, ಯೋಗದ ನಿಯಮಿತ ಅಭ್ಯಾಸವು ಹೃದಯರಕ್ತನಾಳದ ಫಿಟ್ನೆಸ್‌ ಹೆಚ್ಚಿಸುವುದಲ್ಲದೆ, ಸ್ನಾಯುಗಳ ಬಲವನ್ನು ವೃದ್ಧಿಸುವುದು. ರಕ್ತದೊತ್ತಡ ಕಡಿಮೆ ಮಾಡುವುದಲ್ಲದೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ದಿನಾಲೂ ಯೋಗ ಮಾಡುವುದರಿಂದ ಪಡೆಯಬಹುದು ಎಂದರು.

ಕಾರ್ಕಳ ತಾಲೂಕು ಪಂಚಾಯತ್‌ ಮಾಜಿ ಉಪಾಧ್ಯಕ್ಷರು ರವೀಂದ್ರಕುಮಾರ್‌ ಮಾತನಾಡಿ, ಯೋಗವು ದೇಹ ಮತ್ತು ಮನಸ್ಸನ್ನು ಒಟ್ಟಿಗೆ ತುತ್ತದೆ. ನಿಯಮಿತ ಧ್ಯಾನ ಮಾಡುವುದರಿಂದ ದೇಹದ ಸಮತೋಲನ ಮತ್ತು ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದರು. ಈ ಸಂದರ್ಭದಲ್ಲಿ ಲಯನ್ಸ್‌ ಜಿಲ್ಲೆಯ ಪ್ರಾಂತೀಯ ಅಧ್ಯಕ್ಷರಾದ ಗುರುಪ್ರಸಾದ್‌ ಶೆಟ್ಟಿ, ಕಾರ್ಯದರ್ಶಿ ಸುರೇಶ್‌ ಶೆಟ್ಟಿ, ವಲಯಾಧ್ಯಕ್ಷರಾದ ದಿನೇಶ್‌ ಶೆಟ್ಟಿ, ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್‌ ಮತ್ತು ಯೋಗ ಗುರು ಮಂಜುನಾಥ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಲಯನ್ಸ್‌ ಸಿಟಿ ಅಧ್ಯಕ್ಷರಾದ ಗೋಪಾಲ್‌ ಅಂಚನ್‌ ಅಧ್ಯಕ್ಷತೆ ವಹಿಸಿದ್ದು, ಆಗಮಿಸಿರುವ ಎಲ್ಲರನ್ನು ಸ್ವಾಗತಿಸಿದರು. ಸದಸ್ಯೆ ಅಕ್ಷತಾ ನಾಯಕ್‌ ಪ್ರಾರ್ಥಿಸಿ, ಕಾರ್ಯದರ್ಶಿ ನಿಹಾಲ್‌ ಶೆಟ್ಟಿ ಜಕ್ಕನ್‌ಮಕ್ಕಿ ನಿರೂಪಿಸಿದರು. ಕೋಶಾಧಿಕಾರಿ ಶಾಲಿನಿ ಸುವರ್ಣ ವಂದಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಟಿ.ಕೆ. ರಘುವೀರ್‌, ರಘುನಾಥ್‌ ಕೆ.ಎಸ್.‌, ಪೂರ್ಣಿಮಾ ಶೆಣೈ, ಸುಜಾತ ಮಂಜುನಾಥ್‌, ಕುಂಭಶ್ರೀ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ಕಾರ್ಯಾನಿರ್ವಾಹಕರು ಹೃದಯ್‌ ಕುಲಾಲ್‌ ಮತ್ತು ಯೋಗ ತರಬೇತಿಯ ಪ್ರಯೋಜನ ಪಡೆಯಲು ಬಂದಿರುವ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.