ಕೊರಡಿಹಿತ್ಲುವಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
* ಎ ಎಲ್ ಎನ್ ರಾವ್ ಮೆಮೋರಿಯಲ್ ಚಾರಿಟೇಬಲ್ ಆಸ್ಪತ್ರೆ ಇವರಿಂದ ಶಿಬಿರ ಆಯೋಜನೆ
* ಅಗತ್ಯವಿದ್ದವರಿಗೆ ಶಿಬಿರದಲ್ಲಿ ರಿಯಾಯಿತಿ ದರದಲ್ಲಿ ಕನ್ನಡಗಳು ಲಭ್ಯ
NAMMMUR EXPRESS NEWS
ಕೊಪ್ಪ: ನವಚೈತ್ರ ಆರೋಗ್ಯ ಕಾಳಜಿ ಶಿಬಿರ 197 ರ ಅಂಗವಾಗಿ ಎ ಎಲ್ ಎನ್ ರಾವ್ ಮೆಮೋರಿಯಲ್ ಚಾರಿಟೇಬಲ್ ಆಸ್ಪತ್ರೆ ಕೊರಡಿಹಿತ್ಲು, ಸ್ಟುಡೆಂಟ್ ಕ್ಲಬ್,ಎ ಎಲ್ ಎನ್ ರಾವ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಕೊಪ್ಪ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಚಿಕ್ಕಮಗಳೂರು ಇವರ ಸಹಯೋಗದೊಂದಿಗೆ ಆ. 03 ರ ಭಾನುವಾರ ಬೆಳಿಗ್ಗೆ ಫಂಟೆ 9-00 ರಿಂದ ಮಧ್ಯಾಹ್ನ 1-00 ವರೆಗೆ ಎ.ಎಲ್.ಎನ್.ರಾವ್ ಮೆಮೋರಿಯಲ್ ಚಾರಿಟೇಬಲ್ ಆಸ್ಪತ್ರೆ, ಕೊರಡಿಹಿತ್ಲುವಿನಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಉಚಿತ ರಕ್ತದ ಒತ್ತಡ (ಬಿ.ಪಿ.) ಜಿ.ಆರ್.ಬಿ.ಎಸ್. (ಮಧುಮೇಹ) ತಪಾಸಣೆ ಲಭ್ಯವಿರುತ್ತದೆ. ಶಿಬಿರದಲ್ಲಿ ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳು ಲಭ್ಯವಿರಲಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.
* ಶಿಬಿರದ ಕೆಲ ಸೂಚನೆಗಳು ಇಂತಿವೆ
1. ಕಣ್ಣಿನ ಪೊರೆ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ತಪಾಸಣಾ ದಿನದಂದೇ ಉಡುಪಿಯ ಪ್ರಸಾದ್ ಆಸ್ಪತ್ರೆಗೆ ಕರೆದೊಯ್ದು ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ನಂತರ ಶಿಬಿರ ನಡೆದ ಸ್ಥಳಕ್ಕೆ ಉಚಿತವಾಗಿ ಕರೆತಂದು ಬಿಡಲಾಗುವುದು.
2. ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಸಾರಿಗೆ ಮತ್ತು ವಸತಿ ಸೌಲಭ್ಯಗಳನ್ನು ನೀಡಲಾಗುವುದು.
3. ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್ ಅಥವಾ ಭಾವಚಿತ್ರ ಇರುವ ಯಾವುದಾದರೊಂದು ಗುರುತಿನ ಚೀಟಿಯನ್ನು ತರುವುದು.
4. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ವೈದ್ಯರು ಸೂಚಿಸಿದ ದಿನದಂದು ಶಿಬಿರ ನಡೆದ ಸ್ಥಳಕ್ಕೆ ಕಡ್ಡಾಯವಾಗಿ ಮರು ಪರೀಕ್ಷೆಗೆ ಬರತಕ್ಕದ್ದು. ತಪಾಸಣೆಗೆ ಬರುವಾಗ ಈ ಹಿಂದೆ ತಪಾಸಣೆಗೊಳಗಾಗಿದ್ದಲ್ಲಿ ವೈದ್ಯಕೀಯ ದಾಖಲೆಗಳಿದ್ದಲ್ಲಿ ತರುವುದು.
* ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹಮೀದ್, ಅಧ್ಯಕ್ಷರು, ನವಚೈತ್ರ ಸಾಂಸ್ಕೃತಿಕ ವೇದಿಕೆ, ಕೊಪ್ಪ – 7795144239, ಪ್ರಕಾಶ್ ಸಿ.ಹೆಚ್ ಎ.ಎಲ್.ಎನ್. ರಾವ್ ಕಾಲೇಜು ಕೊಪ್ಪ- 9448156947, ಕೊರಡಿಹಿತ್ತು ಆಸ್ಪತ್ರೆ- 6361865945
