ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಮತ್ತು ಪರಪು ಕಾಳಿಕಾಂಬಾ ಮಹಿಳಾ ಮಂಡಳಿಯಿಂದ ಶ್ರಾವಣ ಸಂಜೆ
ಪರಪು ಕಾಳಿಕಾಂಬಾ ಶಾಲೆಯಲ್ಲಿ ಶ್ರಾವಣ ಸಂಜೆ ಚೂಡಿ ಹೂವು ಅರಶಿನ ಕುಂಕುಮ ಕಾರ್ಯಕ್ರಮ ಪರಪು ಮಹಿಳಾ ಮಂಡಳಿ ಮತ್ತು ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ವತಿಯಿಂದ ಆಗಸ್ಟ್ 15ರಂದು ಸಂಜೆ ಜರುಗಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಳಿ ಅಧ್ಯಕ್ಷೆ ಗೀತಾ ಆಚಾರ್ಯ, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಮತ್ತು ಲಯನ್ಸ್ ಸಿಟಿಯ ಸ್ಥಾಪಕಧ್ಯಕ್ಷೆ ಲಯನ್ ಜ್ಯೋತಿ ರಮೇಶ್, ಕೋಶಾಧಿಕಾರಿ ಲಯನ್ ಶಾಲಿನಿ ಸುವರ್ಣ, ಸದಸ್ಯರು ಲಯನ್ ನಯನ ನಾಯಕ್, ಲಯನ್ ಕೆ. ಪಿ. ಪದ್ಮಾವತಿ ಮತ್ತು ಸಾಯಿ ಸಂಸ್ಥೆಯ ಸದಸ್ಯೆಯರು ಉಪಸ್ಥಿತರಿದ್ದರು.