Categories
ಮಂಗಳೂರು

ಮಂಗಳೂರು ಹೋಟೆಲ್ ಕಾರ್ಮಿಕರ ಸಂಘದ ಸೇವಾ ಹೆಜ್ಜೆ

ಮಂಗಳೂರು ಹೋಟೆಲ್ ಕಾರ್ಮಿಕರ ಸಂಘದ ಸೇವಾ ಹೆಜ್ಜೆ
– ಸಂಘದ ಸದಸ್ಯರಿಗೆ ಯನೋಪೊಯಾ ಫೆಸಿಲಿಟಿ ಹಾಸ್ಪಿಟಲ್ ಸೇವೆ ನೀಡಲು ಮನವಿ
– ಘಟಕದ ಸದಸ್ಯರಿಗೆ ಆರೋಗ್ಯ ಕಾರ್ಡ್ ಸೌಲಭ್ಯ

NAMMUR EXPRESS NEWS
ಮಂಗಳೂರು: ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘ ಮಂಗಳೂರು ಘಟಕದ ಪದಾಧಿಕಾರಿಗಳು ಯನೋಪೊಯಾ ಫೆಸಿಲಿಟಿ ಹಾಸ್ಪಿಟಲ್ ಮಂಗಳೂರು ಇದರ ಮುಖ್ಯಸ್ಥರು ಡಾ. ನಾಗರಾಜ್ ಶೇಟ್ ಹಾಗೂ ಆರೋಗ್ಯ ಕಾರ್ಡ್ ಮೇಲಾಧಿಕಾರಿಗಳು ವಿಜಯಾನಂದ ಶೆಟ್ಟಿ ಅವರನ್ನು ಭೇಟಿ ಮಾಡಿ ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ಸದಸ್ಯತ್ವ ಹೊಂದಿರುವ ಸದಸ್ಯರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಲಾಯಿತು
ಮನವಿಗೆ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಮಂಗಳೂರು ಘಟಕದ ಸದಸ್ಯರಿಗೆ ಆರೋಗ್ಯ ಕಾರ್ಡ್ ಸೌಲಭ್ಯ ನೀಡುವುದರ ಬಗ್ಗೆ ಆಶ್ವಾಸನೆ ನೀಡಿದರು. ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವುದರ ಬಗ್ಗೆಯೂ ಸಹ ಚರ್ಚಿಸಲಾಯಿತು
ಮಂಗಳೂರು ಘಟಕದ ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಮೋಹನ್ ಟಿ ಹೆಚ್, ಜಯಾನಂದ ಭಂಡಾರಿ, ಚಿನ್ನಯ್ಯ, ಶೈಲೇಶ,ಗಂಗಾಧರ್, ಕಿರಣ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.