Categories
ಕಾರ್ಕಳ

ಪಿಯುಸಿ: ಕಾರ್ಕಳ ಕ್ರಿಯೇಟಿವ್ ಕಾಲೇಜು ರಾಜ್ಯಕ್ಕೆ ಬೆಸ್ಟ್!

ಪಿಯುಸಿ: ಕಾರ್ಕಳ ಕ್ರಿಯೇಟಿವ್ ಕಾಲೇಜು ರಾಜ್ಯಕ್ಕೆ ಬೆಸ್ಟ್!
– ಸತತ ನಾಲ್ಕನೇ ವರ್ಷ ಶೇಕಡ 100ರಷ್ಟು ಫಲಿತಾಂಶ
– ಹಲವು ಡಿಸ್ಟ್ರಿಕ್ಷನ್: ಎಲ್ಲಾ ಪರೀಕ್ಷೆಯಲ್ಲೂ ಸೈ

NAMMUR EXPRESS NEWS
ಕಾರ್ಕಳ / ಉಡುಪಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಈ ಫಲಿತಾಂಶದಲ್ಲಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕಾರ್ಕಳದ ಕ್ರಿಯೇಟಿವ್ ಕಾಲೇಜು ಸತತ 4ನೇ ವರ್ಷವೂ ಶೇ.100 ರಷ್ಟು ಫಲಿತಾಂಶ ದಾಖಲು ಮಾಡಿದೆ. ಜೊತೆಗೆ ಅತ್ಯುತ್ತಮ ದರ್ಜೆಯ ರ‍್ಯಾಂಕ್‌ ಗಳನ್ನು ಪಡೆಯುವ ಮೂಲಕ ರಾಜ್ಯದಲ್ಲೇ ಪ್ರತಿಷ್ಠಿತ ಸಂಸ್ಥೆಯಾಗಿ ಮತ್ತೊಮ್ಮೆ ಸಾಧನೆ ಮಾಡಿದೆ.
ಕ್ರಿಯೇಟಿವ್ ಪಿಯು ಕಾಲೇಜು ಕಳೆದ ವರ್ಷ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಅನ್ನು ಪಡೆದುಕೊಂಡಿತ್ತು. ವಿಜ್ಞಾನ ವಿಭಾಗದಲ್ಲಿ ಅನೇಕ ಟಾಪ್ -10 ರ‍್ಯಾಂಕ್‌ ಗಳ ಪಟ್ಟಿಯಲ್ಲಿ ಪಡೆದಿತ್ತು.
ಇನ್ನು ಪ್ರತಿ ವರ್ಷವೂ ಅತ್ಯುತ್ತಮ ರ‍್ಯಾಂಕ್‌ ಹಾಗೂ ಉತ್ತಮ ಫಲಿತಾಂಶದೊಂದಿಗೆ ರಾಜ್ಯದಲ್ಲಿ ದಾಖಲೆ ಮಾಡುತ್ತಿರುವ ಕ್ರಿಯೇಟಿವ್ ಪಿಯು ಕಾಲೇಜು ಈ ವರ್ಷವೂ ಕೂಡ ಸಾಧನೆಯ ಓಟವನ್ನು ಮುಂದುವರಿಸಿದೆ. ರಾಜ್ಯಕ್ಕೆ 6 ಮತ್ತು 9ನೇ ಸ್ಥಾನ ಕೂಡ ದಾಖಲಾಗಿದೆ.
ಸಿಇಟಿ, ನೀಟ್, ಜೆಇಇ, ನಾಟಾ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ದೇಶದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಮೂಲಕ ಕರಾವಳಿಯ ಶಿಕ್ಷಣ ಸಂಸ್ಥೆಗಳ ಸಾಲಿಗೆ ಸೇರುವ ಇರುವ ಕ್ರಿಯೇಟಿವ್ ಪಿಯು ಕಾಲೇಜು, ಇದೀಗ ದ್ವಿತೀಯ ಪಿಯುಸಿ ಫಲಿತಾಂಶದಲ್ಲೂ ಉತ್ತಮ ಸಾಧನೆ ಮಾಡಿದ್ದು, ಪೋಷಕರು ಅಭಿನಂದಿಸಿದ್ದಾರೆ. ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.