ಉದ್ಯಮ ಕ್ಷೇತ್ರದಲ್ಲಿ ಕರಾವಳಿಯೇ ಮೇಲುಗೈ!
– ದೇಶಕ್ಕೆ ಬಿಗ್ ಬ್ರಾಂಡ್ ಕೊಟ್ಟ ಕರಾವಳಿ!
– ನೂರಾರು ಕಂಪನಿ, ಸಂಸ್ಥೆಗಳ ಗ್ರಾಹಕ ಸ್ನೇಹಿ ಸೇವೆ
NAMMUR EXPRESS NEWS
ದೇಶ ಹಾಗೂ ರಾಜ್ಯದ ಜನಪ್ರಿಯ ಬ್ರಾಂಡ್‌ಗಳನ್ನು ಪರಿಚಯಿಸಿದ ಕರಾವಳಿಯ ಉದ್ಯಮಗಳು ನೂರಾರು. ಇಲ್ಲಿನ ಮೀನು ಉದ್ಯಮದಿಂದ ಹಿಡಿದು ಹೋಟೆಲ್ ಉದ್ಯಮ ವಿಶ್ವದಲ್ಲೇ ಪ್ರಸಿದ್ಧ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗವು ಶೈಕ್ಷಣಿಕವಾಗಿ ಅಥವಾ ಆರೋಗ್ಯ ಕ್ಷೇತ್ರದಲ್ಲಿ ಮಾತ್ರ ಗಮನಸೆಳೆದಿಲ್ಲ. ಜೊತೆಗೆ ಈಗ ಮಂಗಳೂರು ಅಥವಾ ಉಡುಪಿ ನಗರವು ರಾಜ್ಯದ ದ್ವಿತೀಯ ಹಂತದ ನಗರಗಳಾಗಿ ಉದ್ಯಮ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಮಂಗಳೂರು ಹಾಗೂ ಉಡುಪಿ ನಗರವು ಸಮುದ್ರಕ್ಕೆ ಹೊಂದಿಕೊಂಡಿರುವ ನಗರವಾಗಿರುವ ಕಾರಣ ಇಲ್ಲಿ ಸಹಜವಾಗಿಯೇ ಪ್ರವಾಸೋದ್ಯಮ ಒಂದು ಉದ್ಯಮವಾಗಿ, ಆರ್ಥಿಕ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ.
– ಸ್ಟಾರ್ಟ್ ಅಪ್ ಹಬ್ ಆಗುತ್ತಿದೆ ಕರಾವಳಿ!
ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಹತ್ತಾರು ಸ್ಟಾರ್ಟಪ್‌ಗಳು ಹುಟ್ಟಿಕೊಂಡಿದ್ದು, ಅದು ಈಗ ದೊಡ್ಡ ಉದ್ಯಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಆಹಾರ ಪದಾರ್ಥಗಳ ಕ್ಷೇತ್ರ ಇರಲಿ, ತಂಪು ಪಾನೀಯ ಉದ್ಯಮವಿರಲಿ, ಸಾಫ್ಟ್‌ವೇರ್ ಉದ್ಯಮ ಕ್ಷೇತ್ರವಿರಲಿ ಕರಾವಳಿಯ ಹತ್ತಾರು ಬ್ರಾಂಡ್‌ಗಳು ಇಂದು ದೇಶ- ವಿದೇಶದಲ್ಲಿ ಗಮನಸೆಳೆದಿವೆ. ಅಷ್ಟೇ ಅಲ್ಲ ರಿಲಯನ್ಸ್, ಟಾಟಾದಿಂದ ಹಿಡಿದು ಆಡಿ, ಬೆನ್ಸ್‌ವರೆಗೆ ವಿಶ್ವದ ಮುಂಚೂಣಿಯ ಬ್ರಾಂಡ್ ಮಳಿಗೆ-ಶೋರೂಂಗಳು ಮಂಗಳೂರು ಅಥವಾ ಉಡುಪಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
* ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಐಡಿಯಲ್, ಹ್ಯಾಂಗೋ, ನ್ಯಾಚುರಲ್ ಐಸ್‌ಕ್ರೀಂ
ಮಂಗಳೂರಿನಂಥ ನಗರಗಳಿಗೆ ಗಣ್ಯ ವ್ಯಕ್ತಿಗಳು ಅಥವಾ ಪ್ರವಾಸಿಗರು ಬಂದರೆ ಐಡಿಯಲ್ ಐಸ್‌ಕ್ರೀಂನ ರುಚಿಯನ್ನು ಸವಿಯದೆ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಮಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಐಡಿಯಲ್ ಐಸ್‌ಕ್ರೀಂ ಪ್ರಸ್ತುತ ಕರಾವಳಿ ಭಾಗ ಮಾತ್ರವಲ್ಲ ರಾಜ್ಯದೆಲ್ಲೆಡೆ ಮನೆಮಾತಾಗಿದೆ. ಐಡಿಯಲ್‌ಗೆ ಪ್ರತಿಸ್ಪರ್ಧಿಯಾಗಿ ಹ್ಯಾಂಗೋ ಐಸ್‌ಕ್ರೀಂ ಬ್ರಾಂಡ್ ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಅದರ ಹುಟ್ಟು ಕೂಡ ಮಂಗಳೂರು ಎನ್ನುವುದು ಕರಾವಳಿಗರಿಗೆ ಹೆಮ್ಮೆಯ ವಿಚಾರ.
ಈ ನಡುವೆ ಮುಂಬೈ, ಬೆಂಗಳೂರು ಸೇರಿದಂತೆ ಹಲವು ಮೆಟ್ರೋ ನಗರಗಳಲ್ಲಿ ಯುವಜನರನ್ನು ಆಕರ್ಷಿಸುತ್ತಿರುವ ಐಸ್‌ಕ್ರೀಂ ಬ್ರಾಂಡ್ ನ್ಯಾಚುರಲ್ಸ್. ಈ ನ್ಯಾಚುರಲ್ ಐಸ್‌ಕ್ರೀಂ ಬ್ರಾಂಡ್ ಕೂಡ ಮಂಗಳೂರಿನದ್ದು ಎನ್ನುವುದು ಹಲವರಿಗೆ ಗೊತ್ತಿಲ್ಲ.
– ಪುತ್ತೂರಿನ ಸಣ್ಣ ಹಳ್ಳಿಯ ಬಿಂದು ಬ್ರಾಂಡ್ ಈಗ ಫೇಮಸ್!
ತಂಪು ಪಾನೀಯಕ್ಕೆ ಬಂದರೆ ಸಣ್ಣ ಗ್ರಾಮವೊಂದರಲ್ಲಿ ಹುಟ್ಟಿ ಪ್ರಸ್ತುತ ಮುಕೇಶ್ ಅಂಬಾನಿಯಂಥವರ ನಿದ್ದೆಗೆಡಿಸಿರುವ ಬ್ರಾಂಡ್ ಪುತ್ತೂರಿನ ಬಿಂದು. ನೀರು ಮತ್ತು ಸ್ಥಳೀಯ ಬ್ರಾಂಡ್ ಆಗಿ ಹುಟ್ಟಿಕೊಂಡ ಬಿಂದು ತನ್ನ ‘ಜೀರಾ’ ಎನ್ನುವ ಹೆಸರಿನ ಒಂದು ಪಾನೀಯ ಪ್ರಸ್ತುತ ದೇಶದೆಲ್ಲೆಡೆ ತನ್ನ ಬ್ರಾಂಡ್ ಅನ್ನು ಪರಿಚಯಿಸುವ ಮೂಲಕ ದೇಶದ ಅತಿದೊಡ್ಡ ಬಿಸ್ಲೇರಿ ಬ್ರಾಂಡ್‌ಗೂ ಪೈಪೋಟಿ ನೀಡುತ್ತಿದೆ. ಅಂದರೆ ಈ ಸ್ಟಾರ್ಟಪ್ ಬೆಳೆದು ಬಂದ ಯಶೋಗಾಥೆಗೆ ಸಾಕ್ಷಿ.
– ಗೃಹ ಉದ್ಯಮದಲ್ಲಿ ಹೆಸರು ಮಾಡುತ್ತಿರುವ ಆ್ಯಪಲ್ ಪ್ರೈ ಬ್ರಾಂಡ್
ಆ್ಯಪಲ್ ಪ್ರೈ ಎನ್ನುವ ಪ್ರೈವುಡ್ ಕಂಪನಿ ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಎ.ಕೆ ಗ್ರೂಪ್ ಗೆ ಸೇರಿರುವ ಆ್ಯಪಲ್ ಪ್ರೈಯು 50ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಗ್ರಾಹಕರ ವಿಶ್ವಾಸರ್ಹತೆಯನ್ನು ಗಳಿಸಿಕೊಂಡಿದೆ. ಮಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಕಂಪನಿಯು ಭಾರತ ದೇಶದೆಲ್ಲೆಡೆ ಪ್ರೈವುಡ್ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ.
– ಹರ್ಷ, ಪೈ ಶೋ ರೂಂ ಹುಟ್ಟಿದ್ದೇ ಇಲ್ಲಿ!
ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಪೈಕಿ ಹರ್ಷ ಹಾಗೂ ಪೈ ಎಲೆಕ್ಟ್ರಾನಿಕ್ ಕಂಪನಿಗಳು ಹಲವು ಕಡೆ ಮಳಿಗೆಗಳನ್ನು ತೆರೆದು ಗ್ರಾಹಕರ ವಿಶ್ವಾಸತೆಯನ್ನು ಗಳಿಸಿಕೊಂಡಿದೆ.
– ಮೀನು ಉದ್ಯಮದಲ್ಲಿ ನಂ 1
ಮೀನು ಕರಾವಳಿಯ ವಾಣಿಜ್ಯ ವಸ್ತು. ಇಲ್ಲಿ ಮೀನುಗಾರಿಕೆಯೇ ಅನೇಕರ ಬದುಕು. ಸಮುದ್ರದಲ್ಲಿ ಹಿಡಿಯುವ ಮೀನುಗಳು ಕೊಲ್ಲಿ ರಾಷ್ಟ್ರಗಳು ಸೇರಿ ದೇಶ, ವಿದೇಶಕ್ಕೆ ರಫ್ತು ಆಗುತ್ತದೆ. ಇದು ಕೂಡ ಉದ್ಯಮದ ಒಂದು ಭಾಗ ಆಗಿದೆ. ನೂರಾರು ಫ್ರೀಜರ್, ಪ್ರೋಸೆಸ್ ಕಂಪನಿಗಳು ಇಲ್ಲಿವೆ.
– ಹೋಟೆಲ್ ಉದ್ಯಮದ ತವರು
ದೇಶ, ವಿದೇಶದ ಯಾವುದೇ ಭಾಗದಲ್ಲಿ ಹೋದರೂ ಕರಾವಳಿ ಹೋಟೆಲ್, ಬಾಣಸಿಗರು, ಅಡುಗೆಯವರು ಸಿಗುತ್ತಾರೆ. ಆತಿಥ್ಯ ಹಾಗೂ ಹೋಟೆಲ್ ಉದ್ಯಮದಲ್ಲಿ ಕರಾವಳಿಯದ್ದೇ ಸಿಂಹಪಾಲು.
ಬೆಂಗಳೂರು, ಮುಂಬೈ, ದುಬೈ ಸೇರಿ ಕೊಲ್ಲಿ ರಾಷ್ಟ್ರಗಳಲ್ಲಿ ನಮ್ಮ ಕರಾವಳಿಯವರೇ ದೊಡ್ಡ ದೊಡ್ಡ ಹೋಟೆಲ್ ಕಟ್ಟಿದವರು.
ಗೋಲ್ಡ್ ಪಿಂಚ್, ಉಜ್ವಲ್ ಗ್ರೂಪ್ಸ್, ವೈಟ್ ಲೋಟಸ್, ಒಸಿಯನ್ ಪರ್ಲ್, ಸಹನಾ ಗ್ರೂಪ್ಸ್, ಫಾರ್ಚುನ್ ಗ್ರೂಪ್, ಉಡುಪಿ ಉಪಾಹಾರ್, ಅಡಿಗಾಸ್ ಸೇರಿ ಸಾವಿರಾರು ಹೋಟೆಲ್ ಉದ್ಯಮಗಳು ಕರಾವಳಿ ಹೆಸರನ್ನು ಎಲ್ಲೆಡೆ ಬೆಳಗಿಸಿವೆ.
– ವಿಜಯ ಮಲ್ಯ ಊರು ಬಂಟ್ವಾಳ
ಮದ್ಯದ ದೊರೆ ಎಂಬ ಖ್ಯಾತಿ ಹೊಂದಿ ಇದೀಗ ಲಂಡನ್‌ನಲ್ಲಿರುವ ದೇಶದ ಖ್ಯಾತ ಹಾಗೂ ಕುಖ್ಯಾತ ಬ್ಯುಸಿನೆಸ್ ಮ್ಯಾನ್ ವಿಜಯ ಮಲ್ಯ ಊರು ಬಂಟ್ವಾಳ. ಇವರ ತಂದೆ ವಿಠಲ್ ಮಲ್ಯ ಮಂಗಳೂರಿನವರು.
