ಕ್ರೈಸ್ಟ್ ಕಿಂಗ್ ಟೇಬಲ್ ಟೆನ್ನಿಸ್‌ನಲ್ಲಿ ಏಳು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
– ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ನಡೆದ ಟೇಬಲ್ ಟೆನ್ನಿಸ್ ಪಂದ್ಯಾಟ
– ಕಾರ್ಕಳ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ
NAMMUR EXPRESS NEWS
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಏಳು ವಿದ್ಯಾರ್ಥಿಗಳು ತಮ್ಮ ಕ್ರೀಡಾಪಟುತನದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಪ್ರಾಥಮಿಕ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಮುಂದಿನ ಹಂತಕ್ಕೆ ಲಾಭ ಪಡೆದುಕೊಂಡಿದೆ. ಈ ತಂಡದಲ್ಲಿ ಎಂಟನೇ ತರಗತಿಯ ಅದ್ವಿತ್ ಡಿ.ವಿ, ಏಳನೇ ತರಗತಿಯ ಮೊಹಮ್ಮದ್ ಅಯಾನ್ ಹಾಗೂ ಶೇಖ್ ಮೊಹಮ್ಮದ್ ಶಿಫಾನ್ ತಂಡವನ್ನು ಪ್ರತಿನಿಧಿಸಿದರು. ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಎಂಟನೇ ತರಗತಿಯ ಐಶ್ವರ್ಯ ಮತ್ತು ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದ್ದು, ಹತ್ತನೇ ತರಗತಿಯ ಅಮೃತ್ ಶೆಟ್ಟಿಗಾರ್ ಮತ್ತು ಒಂಬತ್ತನೇ ತರಗತಿಯ ತನ್ಮಯ್ ಶೆಟ್ಟಿ ಅವರು ತಂಡವನ್ನು ಪ್ರತಿನಿಧಿಸಿದರು.
ಇನ್ನು ಏಳನೇ ತರಗತಿಯ ಅನ್ವಿಶ್ ಪೂಜಾರಿ ಮತ್ತು ಆರನೇ ತರಗತಿಯ ಮಿಲನ್ ಡಿ’ಸೋಜ ಅವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದಲ್ಲಿ ಗಮನ ಸೆಳೆದರು. ಇದೇ ವೇಳೆ ಏಳನೇ ತರಗತಿಯ ರಿಯಾ ಸಿಕ್ವೇರಾ, ಆರನೇ ತರಗತಿಯ ಸಾಚಿ ಸುವರ್ಣ ಹಾಗೂ ಸೃಷ್ಟಿ, ಹತ್ತನೇ ತರಗತಿಯ ಅನುಷ್ ಶೆಟ್ಟಿ, ಒಂಬತ್ತನೇ ತರಗತಿಯ ಶಾನ್ ಡಿ’ಸೋಜ ಮತ್ತು ಅಶ್ವಿನ್ ಅವರು ದ್ವಿತೀಯ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
