Categories
ಕರಾವಳಿ

ಉಡುಪಿ: ಮಹಿಳೆಯ ಲಕ್ಷ ಲಕ್ಷ ಹಣ ದೋಚಿದ ಸೈಬರ್ ಕಳ್ಳರು!

ಕರಾವಳಿ ಟಾಪ್ ನ್ಯೂಸ್

* ಉಡುಪಿ: ಮಹಿಳೆಯ ಲಕ್ಷ ಲಕ್ಷ ಹಣ ದೋಚಿದ ಸೈಬರ್ ಕಳ್ಳರು!
* ಕಾಪು: ಫೈನಾನ್ಸ್ ಆಫೀಸರ್ ಆತ್ಮಹತ್ಯೆ
* ಮೂಡಬಿದರೆ: ಗಾಂಜಾ ಮಾರಾಟ ಮಾಡುತ್ತಿದ್ದವ ಅರೆಸ್ಟ್!
* ಬೈಂದೂರು: ಅಕ್ರಮ ಜಾನುವಾರು ಸಾಗಾಟ: ಮತ್ತೆ ಇಬ್ಬರ ಬಂಧನ
* ಕುಂದಾಪುರ: ಕಾರು ಸ್ಕೂಟರ್ ನಡುವೆ ಭೀಕರ ಅಪಘಾತ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಲಿಯೋಲಾ ಎಂಬ ಮಹಿಳೆಗೆ ಜುಲೈ 22 ರಂದು ಟೆಲಿಕಾಂ ರೆಗ್ಯುಲೇಟರ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ, ಮಹಿಳೆಯ ಸಿಮ್ ಕಾರ್ಡ್ ನಲ್ಲಿ ಕಿರುಕುಳ ಮತ್ತು ಸುಳ್ಳು ಜಾಹೀರಾತು ಬಂದಿದ್ದು, ಹಲವಾರು ದೂರುಗಳು ದಾಖಲಾಗಿವೆ ಎಂದು ವಾಟ್ಸಾಪ್ ಕರೆ ಮಾಡಿ ಹೇಳಿದ್ದಾರೆ. ಜೊತೆಗೆ ಮುಂಬೈ ಪೊಲೀಸರಿಗೆ ಕರೆಯನ್ನು ವರ್ಗಾವಣೆ ಮಾಡುತ್ತೇವೆ, ಅವರೊಂದಿಗೆ ಮಾತನಾಡಿ ಎಂದು ತಿಳಿಸಿದ್ದಾರೆ. ಮಧ್ಯಾಹ್ನ ಪುನಃ ವಾಟ್ಸಪ್ ಕರೆ ಬಂದಿದ್ದು, ನಿಮ್ಮ ಆಧಾರ್ ಕಾರ್ಡ್ ಮನಿ ಲಾಂಡ್ರಿಂಗ್ ಕೇಸ್ ನಲ್ಲಿದೆ, ನಿಮ್ಮ ವಾರೆಂಟ್ ಮೇಲೆ ದಸ್ತಗಿರಿ ಮಾಡುತ್ತೇವೆ. ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಕಾಲ ವಾಟ್ಸಪ್ ಕಾಲ್ ನಲ್ಲೇ ಇರಬೇಕು, ಮೊಬೈಲ್ ಡಾಟಾ ಆಫ್ ಮಾಡಿ ಎಲ್ಲಿಗೂ ಹೋಗಬಾರದು. ನಿಯಮವನ್ನು ಉಲ್ಲಂಘಿಸಿದರೆ ನಿಮ್ಮನ್ನು ಬಂಧಿಸುತ್ತೇವೆ‌ ಎಂದು ಮಹಿಳೆಗೆ ಬೆದರಿಕೆ ಒಡ್ಡಿದ್ದಾರೆ. ಇಪ್ಪತ್ತೈದರಂದು ಮಹಿಳೆಯಿಂದ ತಮ್ಮ ಬ್ಯಾಂಕ್ ಖಾತೆಗೆ ನಾಲ್ಕು ಲಕ್ಷ ರೂಪಾಯಿಯನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸಂಭವಿಸಿದ ಈ ಪ್ರಕರಣವು ಸೆನ್ ಠಾಣೆಯಲ್ಲಿ ದಾಖಲಾಗಿದೆ.

•ಕಾಪು: ಫೈನಾನ್ಸ್ ಆಫೀಸರ್ ಆತ್ಮಹತ್ಯೆ

ಕಾಪು: ರಾಜೇಶ್ ನಾಯ್ಕ ಎನ್ನುವವರು ಬೆಳ್ಮಣ್ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳ ಕಾಲ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಫೈನಾನ್ಸ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ. ಮೂಲತಃ ಕಾಪು ತಾಲ್ಲೂಕಿನವರಾದ ರಾಜೇಶ್ ಅವರ ಆತ್ಮಹತ್ಯೆಗೆ ಕಾರಣ ಏನೆನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮೂಡಬಿದರೆ: ಗಾಂಜಾ ಮಾರಾಟ ಮಾಡುತ್ತಿದ್ದ ವಾಹನ ಪೊಲೀಸರ ವಶಕ್ಕೆ

ಮೂಡಬಿದರೆ: ಎರಡು ವಾಹನಗಳಲ್ಲಿ ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿಗಳನ್ನು ಮೂಡಬಿದರೆಯ ಬೆಳುವಾಯಿಯ ಕಾಂತಾವರ ಕ್ರಾಸ್ ನ ಮಠದ ಕೆರೆ ಎಂಬಲ್ಲಿ ಪತ್ತೆ ಹಚ್ಚಿದ್ದು, ಇದು ಸಿಸಿಬಿ ಪೊಲೀಸ್ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಾಟ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆಯ ಭಾಗವಾಗಿದೆ ಎಂದು ಹೇಳಲಾಗಿದೆ. ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ 123 ಕೆ.ಜಿ ಗಾಂಜಾ, ಎರಡು ವಾಹನಗಳು, ಐದು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ತೆಗೆದುಕೊಂಡ ವಸ್ತುಗಳ ಮೌಲ್ಯ ಸುಮಾರು 46.20.000 ಇರಬಹುದು ಎಂದು ಅಂದಾಜಿಸಲಾಗಿದೆ. ಸೆರೆಸಿಕ್ಕ ಆರೋಪಿಗಳನ್ನು ಕಾಸರಗೋಡು ಮೂಲದ ಮಸೂದ್ ಎಂಕೆ, ಮೊಹಮ್ಮದ್ ಆಶಿಕ್ ಮತ್ತು ಸುಬೇರ್ ಎಂದು ಗುರುತಿಸಲಾಗಿದೆ.‌ ಅಪರಾಧಕ್ಕೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೈಂದೂರು: ಅಕ್ರಮ ಜಾನುವಾರು ಸಾಗಾಟ ಮತ್ತೆ ಇಬ್ಬರ ಬಂಧನ

ಬೈಂದೂರು: ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್ ಅವರ ನೇತೃತ್ವದಲ್ಲಿ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅಕ್ರಮವಾಗಿ ಜಾನುವಾರುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಹೇರೂರಿನ ಗುಂಜನಗುಡ್ಡೆ ಬಳಿ ವಾಹನದ ಮೇಲೆ ದಾಳಿ ನಡೆಸಿದ್ದಾರೆ.‌ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಹಸುಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ಹಸುಗಳನ್ನು ರಕ್ಷಿಸಿ, ಆರೋಪಿಗಳನ್ನು ವಾಹನದ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಬೈಂದೂರಿನ ರಮೇಶ್ ಮೊಗವೀರ ಮತ್ತು ಅಬ್ದುಲ್ ಖಯೂಮ್ ಎಂದು ಗುರುತಿಸಲಾಗಿದೆ.

* ಕುಂದಾಪುರ: ಕಾರು ಸ್ಕೂಟರ್ ನಡುವೆ ಭೀಕರ ಅಪಘಾತ.

ಕುಂದಾಪುರ: ದುರ್ಗಾಂಬ ಬಸ್ ಡಿಪೋ ಸಮೀಪದ ಹೆದ್ದಾರಿಯಲ್ಲಿ ಎದುರುಬದುರಾಗಿ ಬರುತ್ತಿದ್ದ ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟರ್ ನಲ್ಲಿದ್ದ ಸಾಸ್ತಾನ ಮೂಲದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.