Categories
ಕಾರ್ಕಳ

ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ.

ಹೆಬ್ರಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ. 

ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಆಚರಣೆಯನ್ನು ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ಮಾಡಲಾಯಿತು.
ದೇವತಾ ಪ್ರಾರ್ಥನೆಯೊಂದಿಗೆ ಸಂಸ್ಥೆಯ ಮಾತೃ ಮಂಡಳಿಯ ಸದಸ್ಯರೊಂದಿಗೆ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಕೃತ ಶಿಕ್ಷಕ, ವೇದಾಂತ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆಯನ್ನು ನೆರವೇರಿಸಿ, ” ಮಾತೃದೇವೋ ಭವ ” ಎಂಬ ಉಪನಿಷತ್ತಿನ ಮಾತಿನಂತೆ ಭಾರತದೇಶವು ಎಲ್ಲರನ್ನೂ ಗೌರವದಿಂದ ಕಾಣುವ ನಾಡಾಗಿದೆ. ಈ ನಾಡಿನಲ್ಲಿ ಜನ್ಮತಾಳುವುದು ಕೋಟಿ ಜನ್ಮದ ಪುಣ್ಯದ ಫಲವಾಗಿದೆ. ಜಗತ್ತಿನ ಇತರ ಪ್ರದೇಶಕ್ಕಿಂತ ಶೀಘ್ರ ದೇವತಾನುಗ್ರಹವಾಗುವ ಪುಣ್ಯಭೂಮಿಯಾಗಿದ್ದು, ದೇವತೆಗಳು ಅವತರಿಸಿದ ಪರ್ವಕಾಲದಲ್ಲಿ ವಿಶೇಷ ಆರಾಧನೆಯನ್ನು ಎಲ್ಲರೂ ಭಕ್ತಿಯಿಂದ ಮಾಡಬೇಕು. ಹೀಗೆ ಸರ್ವ ಸಂಪತ್ತಿನ ಅಧಿದೇವತೆಯಾದ ವರಮಹಾಲಕ್ಷ್ಮಿಯ ಆರಾಧನೆಯಿಂದ ಲೋಕಕಲ್ಯಾಣವಾಗುತ್ತದೆ ಎಂದು ಪೂಜೆಯ ಮಹತ್ವವನ್ನು ತಿಳಿಸಿದರು.
ಮಾತೆಯರು ಸ್ತೋತ್ರ, ಭಜನೆ, ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತೃ ಮಂಡಳಿಯ ಶ್ರುತಿ, ಮಮತಾ ಹಾಗೂ ಸದಸ್ಯರು, ಸಂಸ್ಥೆಯ ಸಂಸ್ಕಾರ ಪ್ರಮುಖ್ ಮೀನಾಕ್ಷಿ , ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಕುಮಾರ್, ಅಪರ್ಣಾ ಆಚಾರ್, ಅನಿತಾ, ಶಕುಂತಲಾ, ಸಂಸ್ಥೆಯ ಮೇಲ್ವಿಚಾರಕರಾದ ರಾಘವೇಂದ್ರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.