4×100 ಮೀ ರಿಲೇ, ಸ್ನೇಹ ಎಸ್.ಎಸ್ ತಂಡಕ್ಕೆ ದ್ವಿತೀಯ ಸ್ಥಾನ
* ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಿಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್
* ಶೃಂಗೇರಿ ತಾಲೂಕಿನ ತೊರೆಹಡ್ಲು ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿ ಸ್ನೇಹ
NAMMMUR EXPRESS NEWS
ಕೊಪ್ಪ/ಶೃಂಗೇರಿ: ದಕ್ಷಿಣ ಕೊರಿಯಾದಲ್ಲಿ ನಡೆದ ಏಷಿಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನ 4× 100ಮೀ. ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದ ಸ್ನೇಹ ಎಸ್.ಎಸ್ ರವರ ತಂಡವು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದೆ. ಮೇ 24 ರಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಸ್ನೇಹ ಎಸ್.ಎಸ್.
ಸ್ನೇಹ ಶೃಂಗೇರಿ ತಾಲೂಕಿನ ತೊರೆಹಡ್ಲು ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಇದೇ ಪ್ರಥಮ ಬಾರಿಗೆ ರಿಲೇ ತಂಡದ ಸ್ಪರ್ಧಿಯಾಗಿ ಶೃಂಗೇರಿ ತಾಲೂಕಿನಿಂದ ಸ್ಪರ್ಧಿಸುತ್ತಿದ್ದರು.
ಇವರ ಈ ಸಾಧನೆಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಪ್ರೌಢಶಾಲೆ ತೊರೆಹಡ್ಲು ಹಾಗೂ ಗ್ರಾಮಸ್ಥರು ಮತ್ತು ಶಾನುವಳ್ಳಿಯ ಗ್ರಾಮಸ್ಥರು ಅಭಿನಂದಿಸಿ ಶುಭಕೋರಿದ್ದಾರೆ.
