Categories
ಬೆಂಗಳೂರು

ಚಿಕನ್ ಪ್ರಿಯರಿಗೆ ಆಘಾತ: ಕೋಳಿಗೂ ಇಂಜೆಕ್ಷನ್!

ಚಿಕನ್ ಪ್ರಿಯರಿಗೆ ಆಘಾತ: ಕೋಳಿಗೂ ಇಂಜೆಕ್ಷನ್!
– ಬೆಂಗಳೂರು ಸೇರಿ ಎಲ್ಲೆಡೆ ನಕಲಿ ಕೋಳಿ ಮಾಫಿಯಾ
– ಅರೋಗ್ಯಕ್ಕೆ ಇದು ಒಳ್ಳೆಯದಲ್ಲ…!.. ಏನಿದು ಸ್ಟೋರಿ…!

NAMMUR EXPRESS NEWS
ಬೆಂಗಳೂರು: ಎಲ್ಲಾ ಈಗ ಕಲಬೆರಕೆ ಹಾಗೆಯೇ ಕೋಳಿ ಕೂಡ ಈಗ ವಿಷಕಾರಿ ಎನ್ನುವ ವರದಿಯೊಂದು ಬಂದಿದೆ. ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಅನಾರೋಗ್ಯಕರ ಕೋಳಿಗಳ ಮಾರಾಟವಾಗುತ್ತಿದ್ದು, ಚಿಕನ್ ಪ್ರಿಯರಲ್ಲಿ ಆತಂಕ ಮೂಡಿಸಿದೆ.
ಆರೋಗ್ಯ ಸುರಕ್ಷಿತಾ ಇಲಾಖೆಯು ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಕೋಳಿ ಮಾಂಸವನ್ನು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಿ, ಮೈಕ್ರೊ ಬಯೋಲಾಜಿಕಲ್ ಟೆಸ್ಟ್ ಗೆ ಒಳಪಡಿಸಿದ್ದು, ಅದರಲ್ಲಿ ವಿಷಕಾರಿ ಅಂಶ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ.
‌ಕೋಳಿಯ ದೇಹ ದಪ್ಪವಾಗಿ ಕಾಣಲೆಂದು ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ಗಳನ್ನು ನೀಡಲಾಗುತ್ತಿದ್ದು, ಇಂಜೆಕ್ಷನ್ ನೀಡಿದ ಏಳರಿಂದ ಎಂಟು ದಿನಗಳ ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದರ ಮಾಂಸವನ್ನು ಸೇವಿಸುವುದರಿಂದ‌ ಮನುಷ್ಯನ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮಗಳು ಬೀರುತ್ತಿದೆ ಎನ್ನಲಾಗಿದೆ.
‌‌‌
ಅರೋಗ್ಯಕ್ಕೆ ಇದು ಒಳ್ಳೆಯದಲ್ಲ…!

ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ನಲ್ಲಿ ವಿಷಕಾರಿ ಅಂಶವಿರುವ ಕಾರಣ ಈ ಇಂಜೆಕ್ಷನ್ ನೀಡಿದ ಕೋಳಿಯ ಮಾಂಸವನ್ನು ಸೇವಿಸುವುದರಿಂದ ಮಾನವನ ದೇಹದಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ನಾಶವಾಗಿ, ಕೆಟ್ಟ ಬ್ಯಾಕ್ಟೀರಿಯಾಗಳು ಸೇರ್ಪಡೆಗೊಳ್ಳುತ್ತದೆ. ಅಲ್ಲದೆ ಹೊಟ್ಟೆ ನೋವು, ಅಲ್ಸರ್, ಅಲರ್ಜಿ, ತುರಿಕೆ, ದೇಹದ ತೂಕದ ಹೆಚ್ಚಳವಾಗಿ ಮಧುಮೇಹಕ್ಕೆ ದಾರಿ, ಕಲಬೆರಕೆ ಆಹಾರ ಸೇವನೆಯಿಂದ ಒತ್ತಡ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯು ಚಿಕನ್ ಪ್ರಿಯರಿಗೆ ಎಚ್ಚರಿಕೆ ನೀಡಿದೆ. ಇಂತಹ ಕೋಳಿಗಳನ್ನು ಮತ್ತು ಅದರ ಮಾಂಸವನ್ನು ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.