Categories
ಕೊಪ್ಪ

ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ಅದ್ದೂರಿ ಬ್ರಹ್ಮೋತ್ಸವ

ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ಅದ್ದೂರಿ ಬ್ರಹ್ಮೋತ್ಸವ

* ಐದು ದಿನಗಳು ವಿವಿಧ ಅದ್ದೂರಿ ಕಾರ್ಯಕ್ರಮಗಳು
* ಕೃಷಿಮೇಳ,ಆಹಾರ ಮೇಳ ಆಯೋಜನೆ,ಹಲವು ಗಣ್ಯರು

NAMMUR EXPRESS NEWS
ಕೊಪ್ಪ:ದಿವ್ಯಕ್ಷೇತ್ರ ಹರಿಹರಪುರದಲ್ಲಿ ಏ.8 ರಿಂದ ಏ.12 ರವರೆಗೆ ಐದು ದಿನಗಳ ಕಾಲ ಅದ್ದೂರಿ ಬ್ರಹ್ಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭವ್ಯ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು,ಹಲವು ಗಣ್ಯರು ಭಾಗವಹಿಸಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಕೃಷಿ ಮೇಳ,ಆಹಾರ ಮೇಳಗಳನ್ನು ಆಯೋಜಿಸಿದ್ದು, ಪ್ರತಿ ದಿನ ಬೆಳಿಗ್ಗೆ 8 ರಿಂದ ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು,ಹೋಮ ಹವನ,ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ,ಸಂಗೀತ ಕಾರ್ಯಕ್ರಮವೂ ಕೂಡ ಪ್ರಾರಂಭಗೊಳ್ಳುತ್ತಿದೆ.
ಏ.8 ರಂದು ಹರಿಹರಪುರ ಶ್ರೀಗಳಿಂದ ಕೃಷಿ ಮೇಳಕ್ಕೆ ಅಧಿಕೃತ ಚಾಲನೆ ದೊರೆತಿದೆ. ನಂತರ ಧಾರ್ಮಿಕ ಸಭೆಗಳು ನಡೆಯಿತು, ಕೃಷಿಮೇಳದ ಜೊತೆಗೆ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಪ್ರಾರಂಭಗೊಂಡಿದೆ.ದೋಸೆ,ವಿವಿಧ ಖಾದ್ಯ,ತಿನಿಸುಗಳನ್ನು ಒಳಗೊಂಡ ಆಹಾರ ಮೇಳಕ್ಕೂ ಚಾಲನೆ ದೊರೆತಿದೆ. ಒಟ್ಟಾರೆ ಒಂದು ಅದ್ದೂರಿ ಬೃಹತ್ ಕಾರ್ಯಕ್ರಮದ ಆಯೋಜನೆಯೊಂದಿಗೆ ಮತ್ತೊಂದು ಐತಿಹಾಸಿಕ ಕ್ಷಣಗಳಿಗೆ ಹರಿಹರಪುರ ದಿವ್ಯಕ್ಷೇತ್ರ ಸಾಕ್ಷಿಯಾಗಲಿದೆ.
ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ರಾಜೇಗೌಡ,ಮಾಜಿ ಶಾಸಕ ಡಿ.ಎನ್ ಜೀವರಾಜ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ,ಸಂಸದ ಡಾ.ಮಂಜುನಾಥ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.