ಕೊಪ್ಪದ ಓಣಿತೋಟ ರತ್ನಾಕರ್ ಅವರಿಗೆ ಮಹತ್ವದ ಹುದ್ದೆ!
– ಚಿಕ್ಕಮಗಳೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ
NAMMUR EXPRESS NEWS
ಚಿಕ್ಕಮಗಳೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾಗಿ ಕೊಪ್ಪದ ಓಣಿತೋಟ ರತ್ನಾಕರ್ ಅವರನ್ನು ರಾಜ್ಯಧ್ಯಕ್ಷ ಡಾ. ಎಸ್.ಬಾಲಾಜಿ ಆಯ್ಕೆ ಮಾಡಿದ್ದಾರೆ. ಕೊಪ್ಪದ ಎ. ಪಿ. ಎಂ. ಸಿ.ಮಾಜಿ ಅಧ್ಯಕ್ಷ, ತಾಲ್ಲೂಕು ಕನ್ನಡ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಓಣಿತೋಟ ರತ್ನಾಕರ್ ಅವರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಸಂಘಟನೆ, ಕನ್ನಡ, ಜಾನಪದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರತ್ನಾಕರ್ ಅವರು ಮತ್ತಷ್ಟು ಸೇವೆ ಮಾಡಲು ಅವಕಾಶ ಸಿಕ್ಕಿದೆ.