ಕೊಪ್ಪ ಉತ್ಸವಕ್ಕೆ ಇಂದು ಅನುಶ್ರೀ ಆಗಮನ!
– ಸಾಂಸ್ಕೃತಿಕ ಕಾರ್ಯಕ್ರಮ: ಸಾವಿರಾರು ಜನರು ಭೇಟಿ
– ಜಾತ್ರೆಯ ವಾತಾವರಣ ಸೃಷ್ಟಿ ಮಾಡಿದ ಕೊಪ್ಪ ಉತ್ಸವ
– ರಾಜೇಗೌಡ, ನವೀನ್ ಕುಮಾರ್, ಅಶ್ವಥ್ ಸೇರಿದಂತೆ ಅನೇಕರ ಉಪಸ್ಥಿತಿ
NAMMUR EXPRESS NEWS
ಕೊಪ್ಪ: ಕೊಪ್ಪದಲ್ಲಿ ಕೊಪ್ಪ ಉತ್ಸವದ ರಂಗು ಹೆಚ್ಚಿದ್ದು,ಇದೀಗ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲನೇ ದಿನದಂದು ಸಾವಿರಾರು ಜನರು ಆಗಮಿಸಿದ್ದು ಮನರಂಜನೆಯ ಕಾರ್ಯಕ್ರಮಕ್ಕೆ ಅನೇಕರು ಮನಸೋತಿದ್ದಾರೆ. ವಿವಿಧ ಮಳಿಗೆಗಳು, ಪುಸ್ತಕ ಮಳಿಗೆಗಳು, ಫುಡ್, ವಿವಿಧ ಆಟ, ಜಾಯಿಂಟ್ ವೀಲ್ ಇತರೆ ನೂರಾರು ಅವಕಾಶಗಳಿವೆ. ಬಡವರ ಬಂಧು ಪತ್ರಿಕಾ ಆಶ್ರಯದಲ್ಲಿ 10ನೇ ವರ್ಷದ ಅದ್ಧೂರಿ ಕೊಪ್ಪ ಉತ್ಸವ ಐದು ದಿನಗಳ ಕಾಲ ನಡೆಯಲಿದ್ದು, ಇದೀಗ ಮೊದಲ ದಿನ ಮುಗಿದು ಎರಡನೇ ದಿನದ ರಂಗು ಹೆಚ್ಚಾಗಿದೆ.
ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಸೇರಿ ಬೇರೆ ಬೇರೆ ಊರುಗಳಿಂದೆಲ್ಲ ಜನರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಉತ್ಸವದಲ್ಲಿ ಹಾಕಿರುವ ಅಂಗಡಿಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ,ಮಕ್ಕಳು ಆಟಿಕೆಗಳಲ್ಲಿ ಆಡಿ, ವಿವಿಧ ಬಗೆಯ ಖಾದ್ಯವನ್ನು ಸವಿದು ಸಂತಸ ವ್ಯಕ್ತಪಡಿಸಿದ್ದಾರೆ. ಜಯಪುರ ರಸ್ತೆಯ ಅನ್ನಪೂರ್ಣೇಶ್ವರಿ ಲೇ ಔಟ್ ತುಂಬೆಲ್ಲಾ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಬೃಹತ್ ಎಲ್.ಇ.ಡಿ. ಪರದೆ, ಹ್ಯಾಂಗಿಂಗ್ ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ.
ಅನುಶ್ರೀ ಕಾರ್ಯಕ್ರಮಕ್ಕೆ ಕ್ಷಣಗಣನೆ
ಜ.18ಕ್ಕೆ ಖ್ಯಾತ ಆಂಕರ್ ಅನುಶ್ರೀ ಅವರು ಕೊಪ್ಪಗೆ ಆಗಮಿಸಿ ರಾತ್ರಿ ಕಾರ್ಯಕ್ರಮ ನೀಡಲಿದ್ದಾರೆ, ಎರಡನೇ ದಿನವಾದ ಇಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ. ಅನುಶ್ರೀ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಖ್ಯಾತ ಗಣ್ಯರ ಆಗಮನ
ಖ್ಯಾತ ನಟಿ ಅನುಶ್ರೀ, ಶಾಸಕ ರಾಜೇಗೌಡ, ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್, ಅನ್ನಪೂರ್ಣೇಶ್ವರಿ ಸೇಲ್ಸ್ ಮಾಲೀಕ ನವೀನ್ ಕುಮಾರ್ ಸೇರಿ ಅನೇಕ ಗಣ್ಯರು ಆಗಮಿಸಲಿದ್ದಾರೆ.