Categories
ತೀರ್ಥಹಳ್ಳಿ

ಶರ್ಮಿತಾ ಈ ಸಾವು ನ್ಯಾಯವೇ…?

ಶರ್ಮಿತಾ ಈ ಸಾವು ನ್ಯಾಯವೇ…?
– ಥೈರಾಯಿಡ್ ಸಮಸ್ಯೆಯಿಂದ ನೊಂದು ಆತ್ಮಹತ್ಯೆ
– ಸಮಸ್ಯೆ ಸಾವಿರ ಇರಲಿ: ಧೈರ್ಯದಿಂದ ಎದುರಿಸಿ..!

NAMMUR EXPRESS NEWS
ತೀರ್ಥಹಳ್ಳಿ: ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನವ ವಿವಾಹಿತೆ ಶರ್ಮಿತಾ ಬಿ.ಯು. (24) ಸಾವು ಈಗ ಇಡೀ ತಾಲೂಕಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ಯುವ ಸಮುದಾಯದ ಮನಸ್ಥಿತಿಯನ್ನು ಪ್ರತಿನಿಧಿಸಿರುವ ಈ ಸಾವು ಎರಡು ಕುಟುಂಬದ ನೋವಿಗೆ ಕಾರಣವಾಗಿದೆ. ಕಷ್ಟ, ಅರೋಗ್ಯ ಸಮಸ್ಯೆ, ಒತ್ತಡ ಎಲ್ಲವೂ ಪ್ರತಿಯೊಬ್ಬರಲ್ಲೂ ಕಾಮನ್. ಆದರೆ ಆತ್ಮಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ. ಥೈರಾಯಿಡ್ ಸಮಸ್ಯೆ ಇತ್ತು ಎನ್ನಲಾಗಿದೆ. ಆದರೆ ಅದು ದೊಡ್ಡ ಸಮಸ್ಯೆ ಅಲ್ಲ. ಇಂದು ಎಲ್ಲಾ ಚಿಕಿತ್ಸೆ ಇದೆ.

ಏನಿದು ಘಟನೆ…?

ಬಿಜ್ಜಳ ಗ್ರಾಮದ ಶರ್ಮಿತಾ 2023ರ ಮಾರ್ಚ್‌ ತಿಂಗಳಿನಲ್ಲಿ ದಾಸನಕೊಡಿಗೆ ಗ್ರಾಮದ ವಿದ್ಯಾರ್ಥ್‌ ಎಂಬ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಸೋಮೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ರಾತ್ರಿ ಪಾಳಿಯ ಕೆಲಕ್ಕೆ ಪತಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪತಿಯ ಮನೆಯಲ್ಲಿ ಅತ್ತೆ, ಮಾವ ಇದ್ದರು. ರಾತ್ರಿ ಮಲಗಲು ಮನೆಯ ಉಪ್ಪರಿಗೆ ಕೊಠಡಿಗೆ ತೆರಳಿದ್ದ ಶರ್ಮಿತಾ ಬೆಳಿಗ್ಗೆ ಬಾಗಿಲು ತೆರೆದಿರಲಿಲ್ಲ. ಅನುಮಾನದಿಂದ ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಯುವತಿಯ ಪಾಲಕರಿಗೆ ವಿಷಯ ತಿಳಿಸಿದ್ದಾರೆ.

ಶರ್ಮಿತಾ ಪಾಲಕರು ಬಂದ ನಂತರ ಕೊಠಡಿಯ ಬಾಗಿಲು ಒಡೆಯಲಾಗಿದೆ. ಮೃತದೇಹದ ಬಳಿ ಮರಣಪತ್ರ ಲಭ್ಯವಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಸಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು. ತಹಶೀಲ್ದಾರ್‌ ಜಕ್ಕನಗೌಡರ್‌ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.