ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಗೆ ಪ್ರಶಸ್ತಿ
– ಚಿಕ್ಕಮಗಳೂರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ
– 10 ವರ್ಷದಲ್ಲಿ 6ನೇ ಬಾರಿಗೆ ಆಯ್ಕೆಯಾದ ಶಾಲೆ
NAMMUR EXPRESS NEWS
ಕೊಪ್ಪ: ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕೊಪ್ಪ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಭಂಡಿಗಡಿ ಶಾಲೆಯ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೆಪಿಎಸ್ ಶಾಲೆ ಕಳಸದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಅದ್ದೂರಿ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಭಂಡಿಗಡಿ ಶಾಲೆಯ ಕುಮಾರಿ ನಿತ್ಯಶ್ರೀ ಮತ್ತು ತಂಡ ಜಾನಪದ ನೃತ್ಯದಲ್ಲಿ ಕೊಪ್ಪ ತಾಲೂಕನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ಜಿಲ್ಲಾಮಟ್ಟದ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ನಿತ್ಯಶ್ರೀ, ಶ್ರೇಯ, ಚಿನ್ಮಯಿ, ಸೌಜನ್ಯ, ತ್ರಿಶ, ಉಜ್ವಲ್, ಅವೆಜ್, ಸೂಫಿಯಾನ್, ಸುಶ್ಮಿತಾ, ಹಾಗೂ ಸೌರವ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 6ನೇ ಬಾರಿ ರಾಜ್ಯಮಟ್ಟಕ್ಕೆ ಜಾನಪದ ನೃತ್ಯದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದು ಶಾಲೆಯ ಹೆಮ್ಮೆಯಾಗಿದೆ. ಕಳೆದ ವರ್ಷ ರಾಜ್ಯಮಟ್ಟದಲ್ಲಿ 5ನೇ ಸ್ಥಾನವನ್ನು ಶಾಲೆ ಪಡೆದಿತ್ತು. ಶಿಕ್ಷಣದ ಜತೆಗೆ ಸಾಂಸ್ಕೃತಿಕ, ಕ್ರೀಡೆಯಲ್ಲಿ ಕೂಡ ಶಾಲೆ ಸಾಧನೆ ಮಾಡುತ್ತಿದೆ.
ಶಾಲಾ ಶಿಕ್ಷಕರು, ಎಸ್.ಡಿ. ಎಂ.ಸಿ, ಹಳೆಯ ವಿದ್ಯಾರ್ಥಿ, ಗ್ರಾಮಸ್ಥರ ಸಹಕಾರ
ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಹಾಗೂ ಶಾಲೆಯ ಇಂಗ್ಲಿಷ್ ಶಿಕ್ಷಕರಾದ ಅನಿಲ್ ಕುಮಾರ್ ಅವರ ಕಠಿಣ ಪರಿಶ್ರಮ ಹಾಗೂ ಅತ್ಯುತ್ತಮ ತರಬೇತಿಯಿಂದ ಹಿಂದಿನ ಹತ್ತು ವರ್ಷಗಳಲ್ಲಿ 6 ನೇ ಬಾರಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಭಂಡಿಗಡಿ ಜಾನಪದ ನೃತ್ಯದಲ್ಲಿ ರಾಜ್ಯಮಟ್ಟವನ್ನು ಪ್ರವೇಶಿಸಿ ಕಳೆದ ವರ್ಷ ರಾಜ್ಯಮಟ್ಟದ 5ನೇ ಸ್ಥಾನ ಪಡೆದಿರುವುದು ಕೊಪ್ಪ ತಾಲೂಕಿಗೆ ಹಾಗೂ ಭಂಡಿಗಡಿ ಊರಿಗೆ ಹೆಮ್ಮೆಯ ಸಂಗತಿಯಾಗಿದೆ.