Categories
ತೀರ್ಥಹಳ್ಳಿ

ಶ್ರೀ ರಾಮೇಶ್ವರ ಅನ್ನದಾನಕ್ಕೆ 1 ವರ್ಷ..!

ಶ್ರೀ ರಾಮೇಶ್ವರ ಅನ್ನದಾನಕ್ಕೆ 1 ವರ್ಷ..!
– ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನಿತ್ಯ ಅನ್ನ ಸಂತರ್ಪಣೆ
– ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನಿತ್ಯ ಅನ್ನ ಸಂತರ್ಪಣಾ ಕಾರ್ಯ ಒಂದು ವರ್ಷ ಪೂರೈಸಿದೆ. ಈ ಮೂಲಕ ಧಾರ್ಮಿಕ ಕೆಲಸದ ಜತೆಗೆ ಪುಣ್ಯದ ಕೆಲಸ ಮಾಡಲಾಗುತ್ತಿದೆ. ಮೊದಲ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ ವತಿಯಿಂದ ನ.4ರ ಸೋಮವಾರದಂದು ಬೆಳಗ್ಗೆ 8 ಗಂಟೆಗೆ ಲೋಕ ಕಲ್ಯಾಣಾರ್ಥ ಭಕ್ತ ಜನರ ಶ್ರೇಯೋಭಿವೃದ್ಧಿಗಾಗಿ ಹಾಗೂ ಆರೋಗ್ಯ ಆಯುಷ್ಯ ಪ್ರಾಪ್ತಿಗಾಗಿ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ನವಗ್ರಹ ಶಾಂತಿ ಸಹಿತ ಮಹಾಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಮಹಾವಿಷ್ಣು ಮಂತ್ರ ಯಾಗವನ್ನು ನಡೆಸಲಾಗುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿ ಶ್ರೀರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಲು ಈ ಮೂಲಕ ಸಮಿತಿ ಕೋರಿರುತ್ತಾರೆ.

ನಿತ್ಯ ಅನ್ನ ಸಂತರ್ಪಣಾ ಸಮಿತಿಯ ನಡೆದು ಬಂದ ಹಾದಿ

14-11-2022ರ ಕಾರ್ತಿಕ ಸೋಮವಾರ ಶ್ರೀರಾಮೇಶ್ವರ ದೇವರ ಅನುಗ್ರಹದಿಂದ ನಿತ್ಯ ಅನ್ನ ಸಂತರ್ಪಣೆಯನ್ನು ಪೂಜ್ಯ ಭೀಮೇಶ್ವರ ಜೋಶಿ ಧರ್ಮಕರ್ತರು ಶ್ರೀ ಕ್ಷೇತ್ರ ಹೊರನಾಡು ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತ್ತು., ಈ ಸಂದರ್ಭದಲ್ಲಿ ಅಂದಿನ ಕರ್ನಾಟಕ ಸರ್ಕಾರದ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾರ್ ಹಾಗೂ ಸಹಕಾರಿ ನಾಯಕ ಮಂಜುನಾಥಗೌಡ, ತಹಶೀಲ್ದಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ನಾಡಿನ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನಿತ್ಯ ಅನ್ನ ಸಂತರ್ಪಣೆಗೆ ಚಾಲನೆ ದೊರೆಯಿತು.

65 ಸಾವಿರ ಮಂದಿಗೆ ಅನ್ನದಾನ..!

ಸುಮಾರು 65 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು (5 ದಿನದ ಎಳ್ಳಮವಾಸ್ಯೆ ಜಾತ್ರೆಯನ್ನು ಹೊರತುಪಡಿಸಿ ) ಅಂದಿನಿಂದ ನಿತ್ಯ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಈ ನಿತ್ಯ ಅನ್ನ ಸಂತರ್ಪಣೆ ಕಾರ್ಯಕ್ಕೆ ಭಕ್ತ ಜನರ ಸಹಕಾರದ ಹೊರತಾಗಿ ಸರ್ಕಾರದ ಅಥವಾ ಯಾವುದೇ ಇಲಾಖೆಯ ಹಣಕಾಸಿನ ನೆರವು ಇರುವುದಿಲ್ಲ.

ಒಂದು ವರ್ಷದ ಸಮಿತಿಯಿಂದ ಹಲವು ಕಾರ್ಯಕ್ರಮ

– ಶ್ರಾವಣ ಮಾಸದ ಮೂರನೇ ಸೋಮವಾರದಂದು ಲೋಕ ಕಲ್ಯಾಣಾರ್ಥ ಮತ್ತು ಭಕ್ತಾದಿಗಳ ಇಷ್ಟಾರ್ಥ ಸಿದ್ದಿಗಾಗಿ ಐವತ್ತಕ್ಕೂ ಹೆಚ್ಚು ಋತ್ವಿಜರಿಂದ ಸಹಸ್ರಕ್ಕೂ ಅಧಿಕ ರುದ್ರ ಪುನಶ್ಚರಣ ಹಾಗೂ ಸಾಯಂಕಾಲ ಶ್ರೀರಾಮೇಶ್ವರ ದೇವರಿಗೆ ಅತ್ಯಂತ ಪ್ರಿಯವಾದ ಭಸ್ಮಾಭಿಷೇಕವನ್ನು ವಿಜೃಂಭಣೆಯಿಂದ ಸಂಪನ್ನಗೊಳಿಸಲಾಯಿತು.

– ಅಡಿಕೆ ತೋಟಕ್ಕೆ ಬಾಧಿಸುತ್ತಿದ್ದ ಎಲೆಚುಕ್ಕಿ ರೋಗ ನಿವಾರಣೆಗಾಗಿ ಕೋಟಿ ಶಿವ ಪಂಚಾಕ್ಷರಿ ಓಂ ನಮಃ ಶಿವಾಯ ನಾಮ ಜಪ ಸಪ್ತಹ ಕಾರ್ಯಕ್ರಮವು ಒಂದು ವಾರ ನಿರಂತರವಾಗಿ ಭಕ್ತ ಜನರ ಹಾಗೂ ಭಜನಾ ತಂಡಗಳ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
– 2023ರ ಮೊದಲನೇ ಶ್ರಾವಣ ಸೋಮವಾರದಿಂದ ಶ್ರೀ ರಾಮೇಶ್ವರ ದೇವರ ಆವರಣದಲ್ಲಿ ಪ್ರತಿ ಸೋಮವಾರ ಸಂಜೆ ಭಜನಾ ಕಾರ್ಯಕ್ರಮ ನಡೆಸಲು ಚಾಲನೆ ನೀಡಲಾಗಿದೆ.

– ಭಕ್ತ ಜನರ ಮೂಲ ಸೌಕರ್ಯಕ್ಕಾಗಿ ಶಿಥಿಲಗೊಂಡಿದ್ದ ಶ್ರೀರಾಮೇಶ್ವರ ಸಭಾಭವನದ ಶೌಚಾಲಯವನ್ನು ಸುಮಾರು ರೂ 60000 ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ.

ಈ ಎಲ್ಲಾ ಸೇವಾ ಕಾರ್ಯಕ್ರಮವನ್ನು ಸಮಿತಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ಸಹ ಧಾರ್ಮಿಕ ಹಾಗೂ ನಿತ್ಯ ಅನ್ನಸಂತರ್ಪಣಾ ಕಾರ್ಯವನ್ನು ಇನ್ನು ಉತ್ತಮವಾಗಿ ನಡೆಸಲು ಸಾರ್ವಜನಿಕರಿಂದ ಹೆಚ್ಚಿನ ಸಹಕಾರ ಮತ್ತು ಆರ್ಥಿಕ ಬೆಂಬಲ ನೀಡಬೇಕೆಂದು ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.

ನಿತ್ಯ ಅನ್ನ ಸಂತರ್ಪಣೆಗೆ ಸೇವೆಗೆ ದೇಣಿಗೆ ನೀಡಲು..

ಬ್ಯಾಂಕ್ ಖಾತೆಯ ವಿವರ: ಶ್ರೀರಾಮೇಶ್ವರ ನಿತ್ಯ ಅನ್ನ ಸಂತರ್ಪಣಾ ಸೇವಾ ಸಮಿತಿ.
ಕೆನರಾ ಬ್ಯಾಂಕ್, ತೀರ್ಥಹಳ್ಳಿ ಶಾಖೆ
ಖಾತೆ ಸಂಖ್ಯೆ: 120002451892,
IFSC CODE: CNRB0000571

ಭಕ್ತರಿಗೆ ಸೇವಾ ವಿವರ

– ಧನ್ವಂತರಿ ಹೋಮ – 301 ರೂ.
– ಮೃತ್ಯುಂಜಯ ಹೋಮ – 301 ರೂ.
– ನವಗ್ರಹ ಶಾಂತಿ ಹೋಮ – 301 ರೂ.
– ಕಾರ್ತಿಕ ಮಾಸದ ಅನ್ನಸಂತರ್ಪಣಾ ಸೇವೆ – 201 ರೂ.
– ಸರ್ವ ಸೇವೆ – 1001 ರೂ.
– ಅನ್ನಸಂತರ್ಪಣೆ ಸಹಿತ ಸರ್ವ ಸೇವೆ – 3000 ರೂ.
ಈ ಸೇವೆಗಳನ್ನು ಮಾಡಲಿಚ್ಚಿಸುವ ಭಕ್ತಾದಿಗಳು ಡಿ.4ರಂದು ಬೆಳಗ್ಗೆ 8:00 ಗಂಟೆ ಯಿಂದ ಸಂಕಲ್ಪ ಮಾಡಿಸಲು ಕುಟುಂಬ ಸದಸ್ಯರ ರಾಶಿ ನಕ್ಷತ್ರಗಳೊಂದಿಗೆ ಬರಬೇಕಾಗಿ ವಿನಂತಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.