Categories
ಕೊಪ್ಪ ಚಿಕ್ಕಮಗಳೂರು

ಎನ್.ಆರ್ ಪುರ ರಸ್ತೆ ಅಭಿವೃದ್ಧಿಗೆ ಅನುದಾನ: ಸಿಎಂಗೆ ಧನ್ಯವಾದ

ಎನ್.ಆರ್ ಪುರ ರಸ್ತೆ ಅಭಿವೃದ್ಧಿಗೆ ಅನುದಾನ: ಸಿಎಂಗೆ ಧನ್ಯವಾದ
* ಅನುದಾನ ಕೊಟ್ಟ ಸಿ ಎಂ‌ಗೆ ಧನ್ಯವಾದ ಹೇಳಿದ ಎಂ.ಶ್ರೀನಿವಾಸ್
* 60 ಕೋಟಿ ಕಾಮಗಾರಿಗೆ ಅನುಮೋದನೆ ಕೊಡಿಸುವಲ್ಲಿ ಎಂ ಶ್ರೀನಿವಾಸ್ ಪಾತ್ರ ಪ್ರಮುಖ

– ಬಾಳೆಹೊನ್ನೂರು: ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳ ಚಕ್ಕರ್: ಆಡಳಿತ ಮಂಡಳಿಗೆ ಪೊಲೀಸರ ಪತ್ರ!
– ಕೊಪ್ಪ: ಬೆಳೆ ವಿಮೆಗೆ ದಾಖಲೆ ಸಂಕಷ್ಟ, ಅಧಿಕಾರಿಗಳ ದಾಖಲೆ ಎಡವಟ್ಟು: ರೈತರಿಗೆ ಇಕ್ಕಟ್ಟು

 

NAMMMUR EXPRESS NEWS
ಎನ್.ಆರ್ ಪುರ: ಜು.17 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರಕ್ಕೆ ಇಲ್ಲಿನ ಪಟ್ಟಣ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ 60 ಕೋಟಿ ರೂ.ಗಳ ಅನುಮೋದನೆ ದೊರಕಿದೆ. ಈ ಅನುದಾನ ತರುವಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮಲೆನಾಡು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್ ಶ್ರಮಿಸಿದ್ದು,ಇಂದು ಅವರು ಮುಖ್ಯಮಂತ್ರಿ ಸಿದ್ಧದಾಮಯ್ಯ‌ರವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು. ಈ ವೇಳೆ ಪ್ರಶಾಂತ್ ಶೆಟ್ಟಿ ಸೇರಿ ಅನೇಕರು ಇದ್ದರು.

ಕೊಪ್ಪ: ಬೆಳೆ ವಿಮೆಗೆ ದಾಖಲೆ ಸಂಕಷ್ಟ!
– ಜು. 31 ಅರ್ಜಿ ಹಾಕಲು ಕೊನೆ ದಿನ: ರೈತರಿಗೆ ಅನುಕೂಲ
– ಅಧಿಕಾರಿಗಳ ದಾಖಲೆ ಎಡವಟ್ಟು: ರೈತರಿಗೆ ಇಕ್ಕಟ್ಟು
– ದಾಖಲೆ ಸಮಸ್ಯೆ ಸರಿ ಮಾಡಲು ಅದಿತಿ ಶಾನುವಳ್ಳಿ ಅಗ್ರಹ

ಕೊಪ್ಪ: 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸಲು ಜು.31 ಕೊನೆ ದಿನಾಂಕವಾಗಿದೆ. ತಿಂಗಳ ಕೊನೆಯಲ್ಲಿ ಸರ್ವರ್ (ನೆಟ್ವರ್ಕ್) ಸಮಸ್ಯೆ ಆಗಬಹುದು. ಹಾಗಾಗಿ ರೈತರು ಆದಷ್ಟು ಮುಂಚಿತವಾಗಿ ತಮ್ಮ ಹತ್ತಿರದ ಪ್ರಾಥಮಿಕ ಕೃಷಿ ಪತ್ತಿ ಸಹಕಾರಿ ಸಂಘದಲ್ಲಿ ವಿಮೆಯನ್ನು ಪಾವತಿಸಿ ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿದೆ.

ರೈತರಿಗೆ ಸಮಸ್ಯೆ ಮಾಡಿದ ಇಲಾಖೆ ಸಿಬ್ಬಂದಿ!?

ಹೆಚ್ಚಿನ ರೈತರು ವಿಮೆ ಪಾವತಿಸಲು FID ಸಮಸ್ಯೆ ಎದ್ದು ಕಾಣುತ್ತಿದೆ. ಪಹಣಿಯಲ್ಲಿ ಸರಿಯಾದ ಬೆಳೆ ಇದೇ FIDಯಲ್ಲಿ ಬೇರೆ ಬೆಳೆ ಇದೆ.
ಕಳೆದ ವರ್ಷ ಸರಿಯಾಗಿದ್ದ FID ಅಲ್ಲಿ ಈ ವರ್ಷ ಬದಲಾವಣೆ ಆಗಿದೆ.
ಅಧಿಕಾರಿಗಳ ನಿರ್ಲಕ್ಷ ದಿಂದ ರೈತರಿಗೆ ಈ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅದಿತಿ ಶಾನುವಳ್ಳಿ, ನಿರ್ದೇಶಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಲುವಾಗಿಲು ಹಾಗೂ ಯುವ ಮುಖಂಡರು ಕೊಪ್ಪ ತಾಲ್ಲೂಕು ಇವರು ಮನವಿ ಮಾಡಿದ್ದಾರೆ.

ಶಾಲೆ, ಕಾಲೇಜಿಗೆ ವಿದ್ಯಾರ್ಥಿಗಳ ಚಕ್ಕರ್: ಆಡಳಿತ ಮಂಡಳಿಗೆ ಪೊಲೀಸರ ಪತ್ರ!

ಬಾಳೆಹೊನ್ನೂರು: ಶಾಲಾ / ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆ ಅಥವಾ ಕಾಲೇಜಿಗೆ ಹಾಜರಾಗದೆ ಬಸ್ ನಿಲ್ದಾಣದಲ್ಲಿ ಹಾಗೂ ಎಲ್ಲೆಂದರಲ್ಲಿ ಸುಖಾ ಸುಮ್ಮನೆ ಕಾಲಹರಣ ಮಾಡುತ್ತಿರುವ ಬಗ್ಗೆ ಇದೀಗ ಪೊಲೀಸರು ಶಾಲಾ ಆಡಳಿತ ಮಂಡಳಿಗಳಿಗೆ ಪತ್ರ ಬರೆದಿದ್ದು ಭಾರೀ ಕುತೂಹಲ ಮೂಡಿಸಿದೆ.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡದೆ ಬೇರೆ ಕಡೆ ಗಮನ ಕೊಡುವ ಸಾಧ್ಯತೆಯಿರುತ್ತದೆ. ಆದ್ದರಿಂದ ತಾವುಗಳು ತಮ್ಮ ಕಾಲೇಜು ಹಾಗೂ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮನೆಯಿಂದ ನೇರವಾಗಿ ಶಾಲೆಗೆ / ಕಾಲೇಜಿಗೆ ಬಂದು ಕಾಲೇಜು ಬಿಟ್ಟ ನಂತರ ಪಟ್ಟಣದಲ್ಲಿ ಕಾಲ ಹರಣ ಮಾಡದೆ ನೇರವಾಗಿ ಮನೆಗೆ ತೆರಳುವಂತೆ ಹಾಗೂ ಶಾಲೆ, ಕಾಲೇಜುಗಳು ನಡೆಯುವ ಸಮಯದಲ್ಲಿ ತರಗತಿಗೆ ಗೈರು ಹಾಜರಾದಲ್ಲಿ ಈ ವಿಚಾರವನ್ನು ಗೈರು ಹಾಜರಾದ ಪೋಷಕರ ಮೊಬೈಲ್ ಗೆ ವಾಟ್ಸ್ ಆಪ್ / ಎಸ್.ಎಂ.ಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ನೀಡುವಂತೆ ಕೋರಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.