Categories
ಕೊಪ್ಪ

ಕೊಪ್ಪದ ಹುಲ್ಲುಮಕ್ಕಿಯಲ್ಲಿ ಜಾತ್ರಾ ರಂಗು!

ಕೊಪ್ಪದ ಹುಲ್ಲುಮಕ್ಕಿಯಲ್ಲಿ ಜಾತ್ರಾ ರಂಗು!
– ಶ್ರೀ ದುರ್ಗಾಪರಮೇಶ್ವರಿ ಶ್ರೀ ಗುತ್ಯಮ್ಮ, ದೇವಿಯ ವಿಜೃಂಭಣೆಯ ಜಾತ್ರಾ ಮಹೋತ್ಸವ
– ದೇವಿ ಜಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರು ಜನ

NAMMUR EXPRESS NEWS
ಕೊಪ್ಪ: ನೂರಾರು ವರ್ಷಗಳ ಪುರಾಣ ಪ್ರಸಿದ್ಧ ದೇವಾಲಯ ಎಂದು ಕೀರ್ತಿ ಇರುವ ಕೊಪ್ಪ ಪಟ್ಟಣ ಸಮೀಪದ ಹುಲ್ಲುಮಕ್ಕಿಯ ಶ್ರೀ ದುರ್ಗಾಪರಮೇಶ್ವರಿ ಶ್ರೀ ಗುತ್ಯಮ್ಮ ಹಾಗೂ ಮಾರಿಯಮ್ಮ ಮತ್ತು ಪರಿವಾರ ದೇವತೆಗಳ ದೇವಸ್ಥಾನದಲ್ಲಿ ಜಾತ್ರೆ ಸಂಭ್ರಮದಿಂದ ನಡೆಯಿತು.
ಬುಧವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಮಧ್ಯಾಹ್ನ 12:30 ಕ್ಕೆ ಶ್ರೀ ಅಮ್ಮನವರ ರಥೋತ್ಸವ ಅದ್ದೂರಿಯಾಗಿ ಜರುಗಿತು. ಕೊಪ್ಪ ತಾಲೂಕಿನ ಭಕ್ತ ಜನ ಸಾಗರವೇ ತುಂಬಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಶ್ರೀ ದೇವಿಯನ್ನು ಕೂರಿಸಿದ ತೇರನ್ನು ಎಳೆದು ಶ್ರೀದೇವಿಗೆ ಹಣ್ಣು ಕಾಯಿ, ಮಂಗಳಾರತಿ ವಿವಿಧ ಸೇವೆಗಳನ್ನು ಸಮರ್ಪಿಸಿದರು. ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಸ್ಥಳೀಯರು, ದೇವಸ್ಥಾನ ಸಮಿತಿ ಈ ಜಾತ್ರೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ರಾತ್ರಿಯ ಸಹ ರಥೋತ್ಸವ ನೆರವೇರಿದ್ದು ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಇಡೀ ದೇವಾಲಯ ಅಲಂಕಾರ ಮಾಡಲಾಗಿತ್ತು. ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಸೀತೂರು, ಇವರಿಂದ ಯಕ್ಷಗಾನ ರಾತ್ರಿ ಯಕ್ಷಗಾನ ನಡೆಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕೌರಿ ಪ್ರಕಾಶ್, ಹಾಗೂ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಹಾಗೂ ಭಕ್ತಾದಿಗಳ ಸೇವೆಯಿಂದ ಜಾತ್ರೆ ಸಂಪನ್ನಗೊಂಡಿತು.
ಕೊಪ್ಪದ ಎಲ್ಲಾ ಸುದ್ದಿಗಳಿಗಾಗಿ ನಮ್ಮೂರ್ ಎಕ್ಸ್ ಪ್ರೆಸ್ ವೀಕ್ಷಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.