- ನ.7ರ ಬೆಳಿಗ್ಗೆ ಬಿದರಗೋಡಿನಿಂದ ಪಾದಯಾತ್ರೆ
- ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸ ಸಂಚಲನ!
ತೀರ್ಥಹಳ್ಳಿ: ಸಾವಿರಾರು ಮಲೆನಾಡಿಗರ ಬದುಕನ್ನು ಆತಂಕದಲ್ಲಿಟ್ಟಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಸಹಕಾರ ನಾಯಕ ಡಾ.ಮಂಜುನಾಥ ಗೌಡ ಸಾರಥ್ಯದಲ್ಲಿ ಹಮ್ಮಿಕೊಂಡಿರುವ ಕಲ್ಯಾಣ ನಡಿಗೆಗೆ ಕ್ಷಣಗಣನೆ ಆರಂಭವಾಗಿದೆ.
ನ.7ರ ಬೆಳಗ್ಗೆ 8ರಿಂದ ಪಾದಯಾತ್ರೆ ಬಿದರಗೋಡು ಶ್ರೀರಾಮ ಮಂದಿರದಿಂದ ಶುರುವಾಗಲಿದೆ. ನ.8 ಮತ್ತು 9ರಂದು ಪಾದಯಾತ್ರೆ ನಡೆದು ನ.9ರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿದೆ. ಸುಮಾರು 42 ಕಿ.ಮೀ ಪಾದಯಾತ್ರೆಯಲ್ಲಿ ಜೆಡಿಎಸ್, ಕಾಂಗ್ರೆಸ್, ರೈತ ಸಂಘ ಸೇರಿ ಪಕ್ಷಾತೀತವಾಗಿ ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಈಗಾಗಲೇ ಸಿದ್ಧತೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣ ಸೇರಿ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ ನಡೆದಿದೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟನೆ ಮಾಡಲಿದ್ದಾರೆ. ಯುವ ನಾಯಕ ಮಧು ಬಂಗಾರಪ್ಪ, ಯುವ ನಾಯಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ.
ಮಲೆನಾಡಿನ ಬಹು ದೊಡ್ಡ ಹೋರಾಟಕ್ಕೆ ಇದು ವೇದಿಕೆಯಾಗಲಿದೆ.
ಜೊತೆಗೆ ಮಂಜುನಾಥ ಗೌಡರ ರಾಜಕೀಯ ಜೀವನಕ್ಕೆ ಹೊಸ ರೂಪ ಸಿಗಲಿದೆ ಎನ್ನಲಾಗಿದೆ.