Categories
ಮಲ್ನಾಡ್

ಲಂಚ ಸ್ವೀಕರಿಸುತ್ತಿದ್ದ ವಿಎ ಅರೆಸ್ಟ್!

  • ಹೊಸನಗರ ತಾಲೂಕಿನ ರಿಪ್ಪಿನಪೇಟೆಯಲ್ಲಿ ಘಟನೆ
  • ಖಾತೆ ಬದಲಾವಣೆಗೆ 1000 ರೂ.ಲಂಚ!

ರಿಪ್ಪನ್‌ಪೇಟೆ(ಹೊಸನಗರ): ಕರೋನಾ ಸಂಕಷ್ಟದಲ್ಲಿ ಜನರ ಬದುಕು ಬೀದಿಗೆ ಬಂದಿದೆ. ಈ ನಡುವೆ ಅಧಿಕಾರಿಗಳ ಲಂಚದ ದಾಹ ಜನರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಿದೆ.
ಈ ನಡುವೆ ರಿಪ್ಪಿನಪೇಟೆ ನಾಡ ಕಛೇರಿಯಲ್ಲಿ ಖಾತೆ ಬದಲಾವಣೆ ಮಾಡಿಕೊಡಲು ಗ್ರಾಮ ಲೆಕ್ಕಿಗನಾಗಿ (ವಿಎ) ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎಂಬಾತ ಒಂದು ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆಂದು ರಿಪ್ಪನ್‌ಪೇಟೆಯ ಕೆರೆಹಳ್ಳಿ ಗ್ರಾಮದ ನಿವಾಸಿ ಜೋಸೆಫ್ ಚಾಕೋ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ರಾಘವೇಂದ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಗ್ರಾಮ ಲೆಕ್ಕಿಗ ರಾಘವೇಂದ್ರ ರಿಪ್ಪನ್‌ಪೇಟೆ ನಾಡ ಕಛೇರಿಯಲ್ಲಿ ಒಂದು ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ ಲೋಕೇಶ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಎನ್. ವೀರೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಯವರಾದ ವಸಂತ, ನಾಗರಾಜ, ಸುರೇಂದ್ರ, ರಘುನಾಯ್ಕ, ಯೋಗೇಶ್ವರಪ್ಪ, ಹರೀಶ್, ಶ್ರೀನಿವಾಸ, ಇವರುಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ನಿಮ್ಮ ಊರಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ ಕೆಲಸ ಮಾಡಿಕೊಡದಿದ್ದರೆ ತಕ್ಷಣ ದೂರು ನೀಡಿರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.