Categories
ಮಲ್ನಾಡ್

ಹೊಸ ನಗರದಲ್ಲಿ ಗೋ ಶಾಲೆ: ತೀರ್ಥಹಳ್ಳಿಗೆ ಯಾವಾಗ?

  • ಬೆಸಗೆ ಗ್ರಾಮದಲ್ಲಿ ಆರಗ, ಹಾಲಪ್ಪ ಶಂಕು ಸ್ಥಾಪನೆ
  • 10 ಎಕರೆ ಜಾಗದಲ್ಲಿ ಗೋ ಶಾಲೆ ನಿರ್ಮಾಣ

NAMMUR EXPRESS NEWS
ತೀರ್ಥಹಳ್ಳಿ/ ಹೊಸನಗರ: ಐತಿಹಾಸಿಕ ಸರ್ಕಾರಿ ಗೋ ಶಾಲೆಯನ್ನು ಹೊಸನಗರ ತಾಲೂಕಿನ ಬೆಸಗೆ ಪಂಚಾಯತ್ ಗೊರಗೋಡಿನ 10 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ ಭಾನುವಾರ ಗೋಶಾಲೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು ಜಿಲ್ಲೆಗೆ ಒಂದು ಗೋ ಶಾಲೆ ನಿರ್ಮಾಣವಾಗಲಿದ್ದು, ಹೊಸ ನಗರದಲ್ಲಿ ಚಾಲನೆ ಸಿಕ್ಕಿದೆ.

ತೀರ್ಥಹಳ್ಳಿಯಲ್ಲಿ ಯಾವಾಗ ಗೋ ಶಾಲೆ?
ತೀರ್ಥಹಳ್ಳಿ ತಾಲೂಕಲ್ಲಿ ದಿನ ನಿತ್ಯ ರಸ್ತೆಗಳಲ್ಲಿ ಜಾನುವಾರುಗಳು ವಾಹನಗಳಿಗೆ ಬಲಿಯಾಗುತ್ತಿವೆ. ಆದರೆ ಇನ್ನು ತೀರ್ಥಹಳ್ಳಿಯಲ್ಲಿ ಗೋ ಶಾಲೆ ನಿರ್ಮಾಣವಾಗಿಲ್ಲ. ಈ ಹಿಂದೆ ಭಜರಂಗ ದಳ, ಹಿಂದೂ ಪರ ಸಂಘಟನೆಗಳು ಗೋ ಶಾಲೆಗೆ ಪಟ್ಟು ಹಿಡಿದಿದ್ದವು. ತೀರ್ಥಹಳ್ಳಿಯ ಪ್ರಸಿದ್ದ ಭೀಮನಕಟ್ಟೆ ಶ್ರೀಗಳು ಗೋ ಶಾಲೆಗೆ ಜಾಗ ಒದಗಿಸುವುದಾಗಿ ಹೇಳಿಕೆ ಕೂಡ ನೀಡಿದ್ದರು. ಇದೀಗ ಗೃಹ ಮಂತ್ರಿಗಳು ಹೊಸನಗರ ತಾಲೂಕಿನ ಗೋ ಶಾಲೆಗೆ ಚಾಲನೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲೂ ತಕ್ಷಣ ಗೋ ಶಾಲೆ ನಿರ್ಮಾಣ ಮಾಡಬೇಕಿದೆ.

ಏನಿದು ಯೋಜನೆ?ಜಿಲ್ಲೆಗೊಂದು ಗೋಶಾಲೆ

ಶಿವಮೊಗ್ಗ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ, ಶಿವಮೊಗ್ಗ ಹಾಗೂ ಗ್ರಾಮ ಪಂಚಾಯ್ತಿ ಮೇಲಿನಬೆಸಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹೊಸನಗರ ತಾಲ್ಲೂಕು ಹುಂಚ ಹೋಬಳಿ, ಮೇಲಿನಬೆಸಿಗೆ ಗ್ರಾ.ಪಂನ ಗೊರಗೋಡು ಗ್ರಾಮದಲ್ಲಿ ಸರ್ಕಾರದ ವತಿಯಿಂದ ‘ಜಿಲ್ಲೆಗೊಂದು ಗೋಶಾಲೆ’ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭ ನಡೆದಿದೆ. ಸರ್ಕಾರದ ಈ ಯೋಜನೆ ಮಹತ್ವ ಪಡೆದಿದೆ.

ನಮ್ಮೂರ್ ಆಂದೋಲನ ಶುರು

ತೀರ್ಥಹಳ್ಳಿಯಲ್ಲಿ ಗೋ ಶಾಲೆ ನಿರ್ಮಾಣ ಹೋರಾಟಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಹೊಸ ಆಂದೋಲನ ಹಮ್ಮಿಕೊಳ್ಳಲಿದೆ. ಪ್ರತಿ ದಿನ ರಸ್ತೆ ಮೇಲೆ ಗೋವುಗಳು ಹೆಣವಾಗುತ್ತಿವೆ. ರಸ್ತೆ ಮೇಲೆ ಗೋವುಗಳು ಇರುವುದರಿಂದ ಕಳ್ಳರಿಗೆ ಅನುಕೂಲ ಆಗುತ್ತದೆ. ಹೀಗಾಗಿ
ಗೋ ಶಾಲೆ ಬೇಕೇ ಬೇಕು..!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.