Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿ ಅದ್ದೂರಿ ಮೆರವಣಿಗೆಗೆ 10 ಸಾವಿರ ಜನ ಸಾಕ್ಷಿ!

ತೀರ್ಥಹಳ್ಳಿ ಅದ್ದೂರಿ ಮೆರವಣಿಗೆಗೆ 10 ಸಾವಿರ ಜನ ಸಾಕ್ಷಿ!
– ದೇವರ ಪಲ್ಲಕ್ಕಿ ಉತ್ಸವದಲ್ಲಿ ಗಮನ ಸೆಳೆದ ಸ್ತಬ್ಧ ಚಿತ್ರಗಳು
– ಕಲಾವಿದರ ಕಲೆ: ಇದೇ ಮೊದಲ ಬಾರಿಗೆ ವಿಭಿನ್ನ ದಸರಾ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ನಡೆದ ಶ್ರೀರಾಮೇಶ್ವರ ದೇವರ ದಸರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನ ಆವರಣದಿಂದ ಶುರುವಾದ ಮೆರವಣಿಗೆ ತೀರ್ಥಹಳ್ಳಿ ಪಟ್ಟಣದ ರಾಜ ಬೀದಿ ಉತ್ಸವದೊಂದಿಗೆ ಕುಶಾವತಿ ಪಾರ್ಕ್ ತೆರಳಿ ಅಲ್ಲಿ ಮುಕ್ತಾಯಗೊಳಿಸಲಾಯಿತು. ಬಳಿಕ ಬನ್ನಿಕಡಿಯುವ ಪೂಜೆ ನಡೆಯಿತು.
ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಲೆನಾಡು ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಮಂಜುನಾಥ ಗೌಡ, ತಹಸೀಲ್ದಾರ್ ರಂಜಿತ್, ದಸರಾ ಸಮಿತಿ ಸಂಚಾಲಕ ಸಂದೇಶ್ ಜವಳಿ, ಅಮರನಾಥ ಶೆಟ್ಟಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ದೇವಸ್ಥಾನ ಸಮಿತಿಯ ಸದಸ್ಯರು, ದಸರಾ ಸಮ್ಮುಖದಲ್ಲಿ ರಾಮೇಶ್ವರ ದೇವರಿಗೆ ಪೂಜೆಯನ್ನು ಸಲ್ಲಿಸಲಾಯಿತು.

ನಂತರ ಚಾಮುಂಡೇಶ್ವರಿ ಹಾಗೂ ರಾಮೇಶ್ವರ ದೇವರ ಪಲ್ಲಕ್ಕಿಯಲ್ಲಿ ಕೂರಿಸಿ ಚಾಮುಂಡೇಶ್ವರಿ ತಾಯಿಯನ್ನು ವಿಶೇಷವಾಗಿ ಅಲಂಕಾರ ಮಾಡಿ ರಾಜ ಬೀದಿ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಅದ್ದೂರಿ ಮೆರವಣಿಗೆಯಲ್ಲಿ ವಿಶೇಷವಾಗಿ ಕಣ್ಮನ ಸೆಳೆದ ಟ್ಯಾಬ್ಲೋಗಳು ಜನರರಿಗೆ ಸಾಕಷ್ಟು ಆಕರ್ಷಣೀಯವಾಗಿತ್ತು. ವಿವಿಧ ವೇಷ ಭೂಷಣಗಳು ಕೂಡ ಈ ದಸರಾ ಉತ್ಸವದಲ್ಲಿ ಎಲ್ಲಾರ ಗಮನ ಸೆಳೆಯಿತು. ಅನೇಕ ಜನರು ಈ ಸ್ತಬ್ಧ ಚಿತ್ರ ಅಥವಾ ಟ್ಯಾಬ್ಲೋಗಳನ್ನು ವೀಕ್ಷಣೆ ಮಾಡಲು ಹಳ್ಳಿಗಳಿಂದ ಜನ ಆಗಮಿಸಿದ್ದರು. ತೀರ್ಥಹಳ್ಳಿ ಪಟ್ಟಣದ ರಸ್ತೆ ಅಕ್ಕ ಪಕ್ಕ ಸಾವಿರಾರು ಜನ ಈ ಮೆರವಣಿಗೆ ವೀಕ್ಷಿಸಿದರು.
ಜಟಾಯು, ಆಪರೇಷನ್ ಸಿಂಧೂರ, ಮೃಗವದೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ನಾರಾಯಣ ಗುರು ಅವರ ಮೂಲಪೀಠದ ಸ್ತಬ್ಧ ಚಿತ್ರ ಸೇರಿ ಅನೇಕ ಸ್ತಬ್ಧ ಚಿತ್ರಗಳು ಕೂಡ ಮೆರವಣಿಗೆಯಲ್ಲಿ ಇದ್ದವು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.