ಮಲ್ನಾಡ್ ಟಾಪ್ 3 ನ್ಯೂಸ್
ಶಿವಮೊಗ್ಗ : ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು, ತಾಯಿ ನೇಣಿಗೆ ಶರಣು..!!
– ಶಿವಮೊಗ್ಗ : ಮನೆಯಲ್ಲಿಯೇ ಮಹಿಳೆಯ ಭೀಕರ ಹತ್ಯೆ!
– ಸಾಗರ: ಮಿನಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ..!!
NAMMUR EXPRESS NEWS
ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಕ್ವಾಟ್ರಸ್‌ನಲ್ಲಿ ನಡೆದ ದಾರುಣ ಘಟನೆ ಮಲೆನಾಡನ್ನು ಬೆಚ್ಚಿಬೀಳಿಸುವಂತಿದೆ. ಸ್ವಂತ ತಾಯಿಯೇ ತನ್ನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆರನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಪೂರ್ವಿಕಾಳ(12) ತಲೆಗೆ ತಾಯಿ ಶೃತಿ (38) ಮಚ್ಚಿನಿಂದ ಹೊಡೆದು ಕೊಲೆಮಾಡಿದ್ದಾರೆ. ಬಳಿಕ ಮಗಳ ಶವವನ್ನು ಪ್ಯಾನ್ ಕೆಳಗೆ ಎಳೆದು ತಂದು ಅದೇ ಶವದ ಮೇಲೆ ನಿಂತು ಪ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೃತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬುದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಘಟನೆಯ ಸಮಯದಲ್ಲಿ ಗಂಡ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಕರ್ತವ್ಯದಲ್ಲಿದ್ದು, ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ವಿಷಯ ತಿಳಿದುಬಂದಿದೆ. ಈ ಘಟನೆ ಮೆಗ್ಗಾನ್ ಕ್ವಾಟ್ರಸ್ ಮಾತ್ರವಲ್ಲ, ಸಂಪೂರ್ಣ ಶಿವಮೊಗ್ಗದ ಹೃದಯವನ್ನು ನಡುಗಿಸಿದೆ. ಬದುಕಿನ ಒತ್ತಡ, ಮಾನಸಿಕ ನೋವು ಹೇಗೆ ಜೀವಗಳನ್ನು ಕಸಿದುಕೊಳ್ಳುತ್ತದೆ ಎಂಬುದಕ್ಕೆ ಇದು ಕರುಣಾಜನಕ ಸಾಕ್ಷಿಯಾಗಿದೆ.
– ಶಿವಮೊಗ್ಗ : ಮನೆಯಲ್ಲಿಯೇ ಮಹಿಳೆಯ ಭೀಕರ ಹತ್ಯೆ!
ಶಿವಮೊಗ್ಗ : ತಾಲೂಕು ಕುಂಸಿಯಲ್ಲಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯಲ್ಲಿ 65 ವರ್ಷದ ವೃದ್ಧೆ ಬಸಮ್ಮ ಎಂಬವರನ್ನ ಇರಿದು ಹತ್ಯೆ ಮಾಡಲಾಗಿದೆ. ಕುನ್ಸಿಯ ರಥಬೀದಿಯಲ್ಲಿನ ಮನೆಯಲ್ಲಿ ಘಟನೆ ನಡೆದಿದೆ. ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಗುರುವಾರ ಇವರ ಪುತ್ರ ಮನೆಗೆ ಬಂದ ಸಂದರ್ಭದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದೆ.
– ಸಾಗರ: ಮಿನಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿ..!!
ಸಾಗರ: ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು, ಆನಂದಪುರ ಬಳಿ ಇರುವ ಗುತ್ಯಮ್ಮ ದೇವಸ್ಥಾನದ ಮುಂಭಾಗ ಹೊಂದಿದ್ದ ಮಿನಿ ಬಸ್ ಮತ್ತು ಸಾರಿಗೆ ಬಸ್ ನಡುವೆ ಡಿಕ್ಕಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ. ಮಿನಿ ಬಸ್ ಡಿಕ್ಕಿ
ತರೀಕೆರೆಯಿಂದ ಸಿಗಂದೂರು ಪ್ರವಾಸಕ್ಕೆ ತೆರಳುತ್ತಿದ್ದ ಮಿನಿ ಬಸ್, ಶಿವಮೊಗ್ಗದಿಂದ ಸಾಗರ ಹೋಗುತ್ತಿದ್ದ ಗಜಾನನ ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ನ ಮುಂಭಾಗ ಜಖಂಗೊಡಿದೆ. ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಬಚಾವ್ ಆಗಿದ್ದಾರೆ.