Categories
ಕೊಪ್ಪ ಚಿಕ್ಕಮಗಳೂರು ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ ಶೃಂಗೇರಿ

ತೀರ್ಥಹಳ್ಳಿ ಪಟ್ಟಣ ಸಮೀಪ ಬಂದ 2 ಕಾಡಾನೆ!

ತೀರ್ಥಹಳ್ಳಿ ಪಟ್ಟಣ ಸಮೀಪ ಬಂದ 2 ಕಾಡಾನೆ!
– ಎಲ್ಲಿ ಆನೆ ಇದೆಯೋ ಎಂಬ ಭಯದಲ್ಲಿ ಜನ
– ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಎನ್. ಆರ್. ಪುರದಲ್ಲಿ ಆನೆ ಹಾವಳಿ

NAMMUR EXPRESS NEWS
ತೀರ್ಥಹಳ್ಳಿ/ ಕೊಪ್ಪ: ಮೃಗವಧೆ ಬಳಿ ಇದ್ದ ಎರಡು ಕಾಡು ಆನೆಗಳು ಶನಿವಾರ ಬೆಳಗ್ಗೆ ತೀರ್ಥಹಳ್ಳಿ ಪಟ್ಟಣ ಸಮೀಪಕ್ಕೆ ಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಕುರುವಳ್ಳಿಯ ಹೊರಣೇಬೈಲಿನಲ್ಲಿ ವಿಶ್ರಾಂತಿ ಪಡೆದ ಆನೆಗಳನ್ನು ಪಟಾಕಿ ಸಿಡಿಸಿ ಅರಣ್ಯ ಸಿಬ್ಬಂದಿಗಳು ಓಡಿಸುತ್ತಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆಯಲ್ಲಿ ಕಾಣಿಸಿಕೊಂಡಿದ್ದ ಎರಡು ಕಾಡಾನೆ ರಾತ್ರಿ ಸಂಚಾರ ಶುರು ಮಾಡಿದೆ. ಹೊರಬೈಲು ಮಾರ್ಗವಾಗಿ ಕುರುವಳ್ಳಿಯ ಕಡೆಗೆ ಓಡಾಟ ನಡೆಸುತ್ತಿದೆ. ರಸ್ತೆಯ ಮಾರ್ಗವಾಗಿ ಪುತ್ತಿಗೆ ಮಠದ ತೋಟದ ಕಡೆಗೆ ಓಡಾಟ ನಡೆಸುತ್ತಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಯನ್ನು ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನದಲ್ಲಿದ್ದಾರೆ. ಎರಡು ಕಾಡಾನೆಗಳು ರಾತ್ರಿ ಬುಕ್ಲಾಪುರ, ಹೊರಬೈಲಿನಲ್ಲಿ ಓಡಾಟ ಮಾಡಿವೆ. ತುಂಗಾ ನದಿ ದಾಟಿ ದಬ್ಬಣಗದ್ದೆ ಪ್ರವೇಶಿಸಿದ ಆನೆಗಳು ಪುನಃ ಬುಕ್ಲಾಪುರಕ್ಕೆ ಹೋಗಿದ್ದು ಇದೀಗ ಶೆಣೈ ಅವರ ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿವೆ.

ಮಲೆನಾಡಿನಲ್ಲಿ ಆನೆ ಕಾಟ: ಜನರಿಗೆ ಜೀವ ಭಯ!

ಮಲೆನಾಡಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗಿದೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ, ಎನ್. ಆರ್. ಪುರದಲ್ಲಿ ಆನೆ ಪ್ರತ್ಯಕ್ಷವಾಗಿ ಜನರನ್ನು ಭಯ ಭೀತಿಗೊಳಿಸಿದೆ. ಈಗಾಗಲೇ ಮಲೆನಾಡಲ್ಲಿ ಸುಮಾರು 5ಕ್ಕೂ ಹೆಚ್ಚು ಮಂದಿಯನ್ನು ಆನೆ ಬಲಿ ಪಡೆದಿದೆ. ಎಲ್ಲಿ ನೋಡಿದರೂ ಕಾಡು ಆನೆ ಭಯ ಮೂಡಿದೆ.
ಕಾಡು, ತೋಟ, ರಸ್ತೆ ಎಲ್ಲಾ ಕಡೆ ಆನೆ ಓಡಾಡಿದ ವಿಡಿಯೋ ವೈರಲ್ ಆಗುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಮಾಯಕರ ಬಲಿ ಪಡೆಯುತ್ತಿರುವ ಆನೆ ಕಾಟಕ್ಕೆ ಪರಿಹಾರ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ

ಆನೆ ಸಮಸ್ಯೆಯೋ..ಜನರ ಸಮಸ್ಯೆಯೋ..?

ಆನೆ ಸಮಸ್ಯೆಯೋ..ಜನರ ಸಮಸ್ಯೆಯೋ..? ಎಂಬ ಪ್ರಶ್ನೆ ಇದೀಗ ಎದ್ದಿದೆ. ಆನೆ ತನ್ನ ಹಳೆ ದಾರಿಯಲ್ಲಿ ಓಡಾಡುತ್ತಿದೆ ಎನ್ನುವ ಅರಣ್ಯ ಇಲಾಖೆ ಮಾತು ರೈತರ ಸಿಟ್ಟಿಗೆ ಕಾರಣವಾಗಿದೆ. ಏನೇ ಇರಲಿ. ಆನೆ ಬಗ್ಗೆ ಜನ ಎಚ್ಚರ ವಹಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.