ರಾಷ್ಟ್ರ ಮಟ್ಟದಲ್ಲಿ ಜನಮನ ಗೆದ್ದ ನಟ ಮಿತ್ರರು!
– ಗುಂಟೂರಿನಲ್ಲಿ ನಡೆದ ಅಂತರ ರಾಷ್ಟ್ರೀಯ ಭಾರತ ರಂಗಮಹೋತ್ಸವದಲ್ಲಿ ನಾಟಕ ಪ್ರದರ್ಶನ
– ತೀರ್ಥಹಳ್ಳಿ ತಂಡದ ನಾಟಕಕ್ಕೆ ಈಗ ಭಾರೀ ಬೇಡಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಂದ್ರಪ್ರದೇಶ: ವಿನಕೊಂಡದ ಶಾಸಕರೂ ಆಂಧ್ರಪ್ರದೇಶದ ವಿಧಾನಸಭೆಯ ಮುಖ್ಯ ಸಚೇತಕರೂ ಆದ ಬಿ.ಆಂಜನೇಯಲು ಭಾರತ ಸರ್ಕಾರದ ಸಂಸ್ಕ್ರತಿ ಸಚಿವಾಲಯ ಗುಂಟೂರಿನಲ್ಲಿ ಆಯೋಜಿಸಿದ ಅಂತರ ರಾಷ್ಟ್ರೀಯ ಭಾರತ ರಂಗಮಹೋತ್ಸವದಲ್ಲಿ ತೀರ್ಥಹಳ್ಳಿ ಹವ್ಯಾಸಿ ಕಲಾವಿದರ ತಂಡ ನಟ ಮಿತ್ರರು ಕಲಾವಿದರ ಅಭಿನಯದ “ಆ ಊರು ಈ ಊರು” ನಾಟಕ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಗುಂಟೂರು ವಿಜ್ಞಾನ ಕಲಾ ಮಂದಿರದಲ್ಲಿ ಫೆಬ್ರವರಿ 6 ರಿಂದ ಪ್ರಾರಂಭವಾದ ನಾಟಕೋತ್ಸವದಲ್ಲಿ ಈ ನಾಟಕವೂ ಸೇರಿ ವಿವಿಧ ದೇಶ ವಿದೇಶಗಳ ವಿವಿಧಭಾಷೆಗಳ 6 ನಾಟಕಗಳು ಪ್ರದರ್ಶನಗೊಂಡವು. ಪ್ರತೀ ದಿನವೂ ತುಂಬಿದ ಗೃಹ ದಲ್ಲಿ ಪ್ರದರ್ಶನಗಳು ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರ ಉತ್ಸಾಹ ಇಮ್ಮಡಿಗೊಳಿಸಿತು.
ರಾಷ್ಟ್ರ ಮಟ್ಟದಲ್ಲಿ ತೀರ್ಥಹಳ್ಳಿ ತಂಡ ರಾಜ್ಯದಲ್ಲೇ ವಿಭಿನ್ನ ಎಂಬಂತೆ ಪ್ರದರ್ಶನ ನೀಡಿತು.
ಕಲಾವಿದರು: ನಟ ಮಿತ್ರರು ತಂಡದ ಪ್ರಮುಖ ಸಂದೇಶ ಜವಳಿ , ಆಶಾ ಡೇನಿಯಲ್, ವಿಜಯೇಂದ್ರ ಅರ್ಚಕ್ (ಧಾರವಾಡ) , ಕೃಷ್ಣ ಎಂ ಜಾಧವ್, ನಿರಂಜನ ವಿ, ಚೇತನ್ ಜಿ, ರಾಹುಲ್ ಬಿ ಪಿ, ಆದಿತ್ಯ ಯು, ವಿಶ್ರಾಂತಿ ವಿ ಪೈ, ಸುಬ್ರಮಣ್ಯ ಜಿ ಆರ್, ಮನೋಜ್ ಬಿ ಬಿ, ಪೃಥ್ವಿ ಹೊಸಗದ್ದೆ, ಕ್ಷಿತಿಜ್, ವಿಜಯಕುಮಾರ್ (ಶಿವಾಜಿ), ಕಾರ್ತಿಕ್ ಕುಮಾರ್ ಟಿ ಆರ್, ಲಕ್ಷ್ಮೀ ರವಿಶಂಕರ್, ಧನ್ಯಶ್ರೀ, ಸೃಷ್ಠಿ ರೆಡ್ಡಿ, ಮನು ಟಿ ಜಿ, ಶ್ರೇಷ್ಠ, ದಿವ್ಯಶ್ರೀ ಅಭಿನಯ ಗಮನ ಸೆಳೆಯಿತು. ಈಗಾಗಲೇ ರಾಜ್ಯದಲ್ಲಿಅನೇಕ ಬೇಡಿಕೆ ನಾಟಕ ಇದಾಗಿದೆ.
