Categories
ಮಲ್ನಾಡ್

ಮಲೆನಾಡಿನಲ್ಲಿ ಅಡಿಕೆ ಕೊಯ್ಲಿನ ಚಟುವಟಿಕೆ!

ಮಲೆನಾಡಿನಲ್ಲಿ ಅಡಿಕೆ ಕೊಯ್ಲಿನ ಚಟುವಟಿಕೆ!
– ಹಣ್ಣಾಗಿ ಉದುರುತ್ತಿರುವ ಅಡಿಕೆ ಕಾಯಿಗಳು
– ಕೊಯ್ಲು ಮಾಡಲಾಗದೆ ಬೆಳೆಗಾರರ ಪರದಾಟ
– ವಿ ಟೆಕ್ ಅಡಿಕೆ ಸುಲಿಯುವ ಯಂತ್ರಗಳಿಗೆ ಡಿಮ್ಯಾಂಡ್

NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಅಂದರೆ ಅಕ್ಟೋಬರ್ ನಿಂದ ಅಡಿಕೆ ಕೊಯ್ಲು ಶುರುವಾಗುತ್ತದೆ. ರೈತರ ಮನೆ ಅಂಗಳದಲ್ಲಿ ಅಡಿಕೆ ಸುಲಿಯುತ್ತಿರುವುದು ಹಾಗೂ ಚಪ್ಪರ ಹಾಕಿ ಅಡಿಕೆಯನ್ನು ಬೇಯಿಸಿ ಒಣಗಿಸಿರುತ್ತಾರೆ. ಒಟ್ಟಿನಲ್ಲಿ ಅಡಿಕೆ ಕೊಯ್ಲಿನಲ್ಲಿ ಮಲೆನಾಡಿನ ಮನೆಗಳಲ್ಲಿ ಅಡಿಕೆಯದೇ ದರ್ಬಾರು. ಒಣಗಿಸಲು ಹಾಕಿದ ಗೋಟು ಬಿಸಿಲಿಗೆ ಬಾಡಿ ಮುತ್ತಜ್ಜಿ ಮುಖವಾದರೆ ಇತ್ತ ಹಸಿ ಅಡಿಕೆ ಸುಲಿದು ಬೇಯಿಸಿ ಒಣಗಿಸಿದ ಅಡಿಕೆ ಚೊಗರಿನ ಬಣ್ಣದಲ್ಲಿ ಮಿರಿ ಮಿರಿ ಮಿಂಚುತ್ತಾ ಚಪ್ಪರದ ಮೇಲೆ ರಾರಾಜಿಸುತ್ತಿರುತ್ತದೆ.

ಇನ್ನೂ ಈ ಬಾರಿ ಸರಿಯಾಗಿ ಮಳೆ ಬಾರದ ಕಾರಣ ಅಡಿಕೆಗಳು ಬೀಳುತ್ತಿದ್ದು ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
ಮಲೆನಾಡು ಭಾಗದಲ್ಲಿ ಅಡಿಕೆ ವಾಡಿಕೆಗಿಂತ ಬಲು ಬೇಗ ಹಣ್ಣಾಗಿದ್ದು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಡಿಕೆ ಕೊಯ್ಲು ಮಾಡಬೇಕೆಂದು ಬೆಳೆಗಾರರು ತರಾತುರಿಯಲ್ಲಿದ್ದು, ಇದೀಗ ಅಡಿಕೆ ಉದುರುತ್ತಿರುವುದು ರೈತರಿಗೆ ಆತಂಕ ಉಂಟು ಮಾಡಿದೆ.

ವಿ ಟೆಕ್ ಅಡಿಕೆ ಸುಲಿಯುವ ಯಂತ್ರಗಳಿಗೆ ಡಿಮ್ಯಾಂಡ್

ಮಲೆನಾಡು, ಬಯಲುಸೀಮೆ ಭಾಗದಲ್ಲಿ ಅತೀ ಹೆಚ್ಚು ಖರೀದಿ ಮಾಡುವ ವಿ ಟೆಕ್ ಸಂಸ್ಥೆಯ ಯಂತ್ರಗಳ ಮೇಲೆ ಮ್ಯಾಮ್ ಕೋಸ್ ಷೇರುದಾರರಿಗೆ ಸಬ್ಸಿಡಿ ಮತ್ತು ಭಾರೀ ಆಫರ್ ಸಿಗಲಿದೆ. ಎಲ್ಲಾ ರೈತರಿಗೂ ವಿಶೇಷ ಆಫರ್ ಇದೆ. ಈಗಾಗಲೇ ಪ್ರತಿ ತಾಲೂಕಲ್ಲಿ ಮಾರಾಟ ಆಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.