Categories
ತೀರ್ಥಹಳ್ಳಿ ಮಲ್ನಾಡ್

ಮಲ್ನಾಡ್ ಕ್ಲಬ್ಬಲ್ಲಿ 38 ಗ್ರಾಮ ಪಂಚಾಯತಿಗೆ ಪುಸ್ತಕ ವಿತರಣೆ

ಮಲ್ನಾಡ್ ಕ್ಲಬ್ಬಲ್ಲಿ 38 ಗ್ರಾಮ ಪಂಚಾಯತಿಗೆ ಪುಸ್ತಕ ವಿತರಣೆ
– ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ಇಂದ ಮಾದರಿ ಕಾರ್ಯಕ್ರಮ
– ಸರ್ವರನ್ನು ಸ್ವಾಗತಿಸಿದ ಮಲ್ನಾಡ್ ಕ್ಲಬ್

NAMMUR EXPRESS NEWS
ತೀರ್ಥಹಳ್ಳಿ: ತಾಲ್ಲೂಕು ಪಂಚಾಯತ್ ತೀರ್ಥಹಳ್ಳಿ , ಮಲ್ನಾಡ್ ಕ್ಲಬ್ (ರಿ) ತೀರ್ಥಹಳ್ಳಿ, ಅಜಿಮ್ ಪ್ರೇಮ್ ಜಿ ಫೌಂಡೇಶನ್, ವಿಹಂಗಮ ಪರಿಸರ ಅಧ್ಯಯನ ಕೇಂದ್ರ, ಸಾಹಿತಿಗಳು, ಪ್ರಕಾಶಕರು ಹಾಗೂ ವಿವಿಧ ದಾನಿಗಳ ಸಹಯೋಗದಲ್ಲಿ ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಲೈಬ್ರರಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ವೃದ್ಧಿಸುವ ಹಾಗೂ ಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

ಅಂದಾಜು 7 ಲಕ್ಷಕ್ಕೂ ಹೆಚ್ಚಿನ ಮೊತ್ತದ ಪುಸ್ತಕಗಳನ್ನ ಗ್ರಾಮ ಪಂಚಾಯತ್ ನ ಲೈಬ್ರರಿಗಳಿಗೆ ವಿತರಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ, ಸಹಕಾರಿ ನಾಯಕ ಡಾ.ಆರ್.ಎಂ. ಮಂಜುನಾಥ್ ಗೌಡ, ಡಾ. ಜೆ. ಕೆ ರಮೇಶ್ ನಿವೃತ್ತ ಪ್ರಾಧ್ಯಪಕರು ಹಾಗೂ ಕಾರ್ಯ ನಿರ್ವಾಹಣಾಧಿಕಾರಿಗಳಾದ ಶೈಲಾ. ಎನ್ ಭಾಗವಹಿಸಲಿದ್ದಾರೆ. ಜೆ. ಟಿ ಸುಂದರೇಶ್ ಅಧ್ಯಕ್ಷರು ಮಲ್ನಾಡ್ ಕ್ಲಬ್ ತೀರ್ಥಹಳ್ಳಿ ಇವರ ಅಧ್ಯಕ್ಷತೆ ಯಲ್ಲಿ ನಡೆಯುವ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಸುಂದರೇಶ್, ಗೌರವ ಅಧ್ಯಕ್ಷರಾದ ಎಸ್.ರಾಘವೇಂದ್ರ ಸ್ವಾಗತಿಸಿದ್ದಾರೆ.

ದಿನಾಂಕ: 30.01.2024
ಸಮಯ: ಸಂಜೆ 5:00 ಗಂಟೆಗೆ
ಸ್ಥಳ: ಸಿಲ್ವರ್ ಜುಬಿಲಿ ಹಾಲ್ ಮಲ್ನಾಡ್ ಕ್ಲಬ್ (ರಿ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.