-ದಬ್ಬಣಗದ್ದೆ, ಗುಡ್ಡೆಕೊಪ್ಪ ಶಾಲೆಯಲ್ಲಿ ಮಕ್ಕಳ ಸಂತೆ!
– ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಕಾರ್ಯಕ್ರಮ: ಸ್ಥಳೀಯರು ಹಾಜರ್
– ಮಕ್ಕಳ ಟ್ಯಾಲೆಂಟ್ ನೋಡಿ ಬೆರಗಾದ ಪೋಷಕರು!
NAMMUR EXPRESS NEWS
ತೀರ್ಥಹಳ್ಳಿ: ಮಕ್ಕಳ ಸಂತೆಯಲ್ಲಿ ಮಕ್ಕಳ ಪ್ರತಿಭೆ ಪ್ರದರ್ಶನವಾಗುತ್ತಿದೆ. ಅಂತೆಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಬ್ಬಣಗದ್ದೆಹಾಗೂ ಗುಡ್ಡೆಕೊಪ್ಪ ಶಾಲೆಯಲ್ಲಿ ಯಲ್ಲಿ ಮಕ್ಕಳ ಸಂತೆ ಮೇಳ ಹಮ್ಮಿಕೊಳ್ಳಲಾಗಿದ್ದು, ಮಕ್ಕಳ ಟ್ಯಾಲೆಂಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ದಬ್ಬಣಗದ್ದೆಯಲ್ಲಿ ಮಕ್ಕಳ ಕಲರವ!
ದಬ್ಬಣಗದ್ದೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಧುರ ಉಪಾಧ್ಯಕ್ಷರಾದ ಸುನೀಲ್ ಹಾಗೂ ಎಸ್. ಡಿ. ಎಂ. ಸಿ ಸದಸ್ಯರು, ಗ್ರಾಮಸ್ಥರು ಟೇಪ್ ಕಟ್ಟ್ ಮಾಡುವುದರ ಮೂಲಕ ಮಾಡಿದರು. ಕಾರ್ಯಕ್ರಮದ ಮಹತ್ವದ ಬಗ್ಗೆ ಸಿ. ಆರ್. ಪಿ ಯೋಗೇಶ್ ಮಕ್ಕಳಿಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಶಾಂತ್ ದಬ್ಬಣಗದ್ದೆ, ಕೋಟೆಕೊಪ್ಪ ಶಶಿಧರ್ ಗೌಡ, ಹಿರಿಯರಾದ ಜಯರಾಂ ಗೌಡ, ಚಂದಯ್ಯಪೂಜಾರಿ, ಸುಬ್ಬಯ್ಯಗೌಡ ಹಾಗೂ ಇಲಾಖಾ ಅಧಿಕಾರಿಗಳಾದ ಜ್ಯೋತಿ ಮಂಡಗದ್ದೆ, ಬಿ ಆರ್ ಪಿ ಜಯಕುಮಾರ ಹಾಗೂ ದಬ್ಬಣಗದ್ದೆ ಗ್ರಾಮದ ಸಮಸ್ತ ಗ್ರಾಮಸ್ಥರು, ಹಿರಿಯ ವಿಧ್ಯಾರ್ಥಿಗಳು, ಸ.ಕಿ.ಪ್ರಾ.ಶಾಲೆಯ ಮು.ಶಿ.ಶ್ರೀಮತಿ ಜಯಂತಿ ಹಾಗೂ ಶಾಲಾ ಶಿಕ್ಷಕ ವೃಂದ ಅಡುಗೆ ಸಿಬ್ಬಂದಿ, ಶಾಲಾ ಮಕ್ಕಳುಪೋಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಸರ್ವರಿಗೂ ಅನಂತ ಅನಂತ ಧನ್ಯವಾದಗಳು.
ಗುಡ್ಡೆಕೊಪ್ಪ ಶಾಲೆಯಲ್ಲಿ ಮಕ್ಕಳ ಸಂತೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೆಕೊಪ್ಪ ಸಂತೆ ಮೇಳ ಹಾಗೂ ಮೆಟ್ರಿಕ್ ಮೇಳ ಅತ್ಯಂತ ಸುಂದರವಾಗಿ ನಡೆಯಿತು. ಶಾಸಕರಾದ ಜ್ಞಾನೇಂದ್ರ, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದಂತ ರಾಘವೇಂದ್ರ ಪವಾರ್, ಸತೀಶ್, ಲಕ್ಷ್ಮಣ್ ಜಿಹೆಚ್, ಎಸ್ ಡಿ ಎಮ್ ಸಿ ಎಲ್ಲಾ ಸದಸ್ಯರು, ಊರಿನವರು ಪೋಷಕ ಶಿಕ್ಷಕ ವೃಂದ ಹಾಜರಿದ್ದರು.