Categories
ತೀರ್ಥಹಳ್ಳಿ ಮಲ್ನಾಡ್

ಕ್ಯಾನ್ಸರ್ ಜಾಗೃತಿ ಮೂಡಿಸಿದ ಪುಸ್ತಕ ಬಿಡುಗಡೆ!

ಕ್ಯಾನ್ಸರ್ ಜಾಗೃತಿ ಮೂಡಿಸಿದ ಪುಸ್ತಕ ಬಿಡುಗಡೆ!
– ಗಾಯತ್ರಿ ಶೇಷಗಿರಿ ಅವರ ‘ಜೋಪಾನ ಸಖಿ ಜೋಪಾನ’ ಪುಸ್ತಕ ಬಿಡುಗಡೆ
– ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಒಡಲಾಳದ ಚಿತ್ರಣವನ್ನು ಅಕ್ಷರ ರೂಪಕ್ಕೆ ತಂದ ಕೃತಿ

NAMMUR EXPRESS NEWS
ತೀರ್ಥಹಳ್ಳಿ: ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದು ಸಾವಿರಾರು ಜನರ ಬದುಕಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿ ಹೊರ ಹೊಮ್ಮಿದ ಅಪರೂಪದ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ ಸಾಕ್ಷಿ ಆಯಿತು.
ಅ. 26 ರಂದು ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಯತ್ರಿ ಶೇಷಗಿರಿ ಅವರ ‘ಜೋಪಾನ ಸಖಿ ಜೋಪಾನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಜತೆಗೆ ಕ್ಯಾನ್ಸರ್ ಎಂಬ ಮಹಾಮಾರಿ ಆತಂಕದ ಮಾಹಿತಿ ನೀಡುವ, ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಿಹೊರ ಹೊಮ್ಮಿತು.

ನಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು, ಭಾವ ತೀವ್ರತೆಯನ್ನು ಯಥಾ ರೂಪದಲ್ಲಿ ದಾಖಲಿಸುವುದೇ ಬಲು ಕಷ್ಟ. ಅಂತದರಲ್ಲಿ ಇನ್ನೊಬ್ಬರು ಅನುಭವಿಸುವ ನೋವಿಗೆ ಅಕ್ಷರ ರೂಪಕೊಟ್ಟು ಬರವಣಿಗೆಗೆ ನ್ಯಾಯ ಒದಗಿಸುವುದು ಅತ್ಯಂತ ಕ್ಲಿಷ್ಟಕರ ಸಂಗತಿ. ಈ ವಿಚಾರದಲ್ಲಿ ತೀರ್ಥಹಳ್ಳಿಯ ಲೇಖಕಿ ಗಾಯತ್ರಿ ಶೇಷಗಿರಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದ್ದಾರೆ ಎಂದು ಖ್ಯಾತ ಸಾಹಿತಿಗಳೂ, ವಿಶ್ರಾಂತ ಪ್ರಾಧ್ಯಾಪಕರೂ ಆದ ಡಾ|ಸಣ್ಣರಾಮ ಅಭಿನಂದಿಸಿದರು. ವೇದಿಕೆಯಲ್ಲಿ ಗಾಯತ್ರಿ ಶೇಷಗಿರಿ, ಮೆಡಿಕಲ್ ಅಂಕಾಲಜಿಸ್ಟ್ ಡಾ||ಅಪರ್ಣ ಶ್ರೀವತ್ಸ, ಸಾಹಿತಿ ಡಾ||ಬಿ.ಗಣಪತಿ, ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಅನುಭವಿಸಿದ ತಾಯಂದಿರ ಒಡಲಾಳದ ಚಿತ್ರಣವನ್ನು ಲೇಖಕಿ ವಿಶಿಷ್ಟವಾಗಿ ಅಕ್ಷರ ರೂಪಕ್ಕೆ ತಂದ ಕೃತಿಯಿಂದಾಗಿದೆ. ನೋವುಂಡ ಹೆಣ್ಣಿನ ಬದುಕಿನ ನೋವುಗಳು ಮತ್ತೊಬ್ಬ ಹೆಣ್ಣಿಗೆ ಮಾತ್ರ ಗೊತ್ತಾಗಲು ಸಾಧ್ಯ. ಈ ಸಮಾಜಕ್ಕೆ ತಾಯಂದಿರು ನೀಡುವ ಕರುಳಿನ ಕರೆಯ ಚಿತ್ರಣವಿಲ್ಲಿದೆ ಎಂದರು.

ಸ್ತನ ಕ್ಯಾನ್ಸರ್ ಕುರಿತು ಶಿವಮೊಗ್ಗದ ಎನ್.ಹೆಚ್.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಂಕಾಲಜಿಸ್ಟ್ ಡಾ.ಅಪರ್ಣ ಶ್ರೀವತ್ಸ ಮಾತನಾಡಿ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರ ಧ್ವನಿಗಳ ಮೂಲಕ, ಜಾಗೃತಿ, ಸಹಾನುಭೂತಿ ಮತ್ತು ಸಮಯೋಚಿತ ಚಿಕಿತ್ಸೆ ಕೂಡ ಔಷಧಿಯಷ್ಟೇ ಮುಖ್ಯ ಎಂದರು. ಸಮಾರಂಭದಲ್ಲಿ ತೀರ್ಥಹಳ್ಳಿ ಕ.ಸಾ.ಪ.ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಅಧ್ಯಕ್ಷತೆವಹಿಸಿದ್ದ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಬಿ.ಗಣಪತಿ, ಲೇಖಕಿ ಗಾಯತ್ರಿ ಶೇಷಗಿರಿ ಉಪಸ್ಥಿತರಿದ್ದು ಮಾತನಾಡಿದರು. ಕ.ಸಾ.ಪ.ಪ್ರಮುಖ ಪ್ರಸನ್ನ ಸ್ವಾಗತಿಸಿ,ಗಾಯತ್ರಿ ಶೇಷಗಿರಿ ಪ್ರಾಸ್ತಾಪಿಸಿ, ನಾಗರಾಜ್ ಸೌಳಿ ವಂದಿಸಿ, ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಮಲೆನಾಡಿನ ಸಾಹಿತಿಗಳು, ಗಣ್ಯರು ಭಾಗವಹಿಸಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗಮಿಸಿ ರಂಗ ಮಂದಿರದ ಕೊನೆ ಕುರ್ಚಿಯಲ್ಲಿ ಸಾಮಾನ್ಯರಾಗಿಕುಳಿತು ಗಮನ ಸೆಳೆದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.