ಅ.29 ರಂದು ಕೊಪ್ಪದಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್‌ನಿಂದ ಪ್ರತಿಭಟನೆ
* ಶೃಂಗೇರಿ ಕ್ಷೇತ್ರದಲ್ಲಿ ಗುಂಡಿ ಬಿದ್ದ ರಸ್ತೆಗಳು, ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು
* ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿಯಿಂದ ಪ್ರತಿಭಟನೆಗೆ ಕರೆ
NAMMMUR EXPRESS NEWS
ಕೊಪ್ಪ: ಶೃಂಗೇರಿ ಕ್ಷೇತ್ರದಾದ್ಯಂತ ಗುಂಡಿಬಿದ್ದ ರಸ್ತೆಗಳು,ಹಕ್ಕು ಪತ್ರ ಸಮಸ್ಯೆ,ರೈತರ ವಿರುದ್ಧ ಎಸ್‌ಐಟಿ ರಚನೆ ಹಾಗೂ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿರುವುದನ್ನು ಖಂಡಿಸಿ ಅ.29ರಂದು ಕೊಪ್ಪದಲ್ಲಿ ಜೆಡಿಎಸ್‌ನಿಂದ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಶೃಂಗೇರಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿದ್ದು,ಕ್ಷೇತ್ರದಲ್ಲಿ ರಸ್ತೆಗಳು ಗುಂಡಿಮಯವಾಗಿದೆ,ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡುತ್ತಿಲ್ಲ,ರೈತರ ವಿರುದ್ಧ ಸರ್ಕಾರ ಎಸ್‌ಐಟಿ ರಚಿಸಿ ಒತ್ತುವರಿ ತೆರವು ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಕಸಿದುಕೊಳ್ಳತ್ತಿರುವುದನ್ನ ವಿರೋಧಿಸಿ ಹಾಗೂ ಈ ಬಗ್ಗೆ ಸರ್ಕಾರ ಹಾಗೂ ಶಾಸಕರನ್ನು ಎಚ್ಚರಿಸಲು ನಾಳೆ ಪ್ರತಿಭಟನೆಗೆ ಕರೆಕೊಡಲಾಗಿದ್ದು,ಕೊಪ್ಪದ ಕುವೆಂಪು ವೃತ್ತದಿಂದ ಮುಖ್ಯ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ನಂತರ ಮುಖ್ತ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಎಲ್ಲಾ ರೈತರು,ಸಾರ್ವಜನಿಕರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಿ ಸರ್ಕಾರದ ಗಮನಸೆಳೆಯುವಲ್ಲಿ ಸಹಕರಿಸುವಂತೆ ಕೋರಿದ್ದಾರೆ.
