ಮಲೆನಾಡಲ್ಲಿ ದನ ಕಳ್ಳತನ: ಗೋಮಾಂಸ ದಂಧೆ!
– ತೀರ್ಥಹಳ್ಳಿಯಲ್ಲಿ ಬಿಜೆಪಿ ವತಿಯಿಂದ ಭಾರೀ ಹೋರಾಟ
– ಗೋ ಕಳ್ಳರ ಹಿಡಿದ ತೀರ್ಥಹಳ್ಳಿ ಪೊಲೀಸರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಪದೇ ಪದೇ ಗೋ ಕಳ್ಳತನ ಪ್ರಕರಣ ವರದಿ ಆಗುತ್ತಿದ್ದು ಇದೀಗ ಗೋ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಮಲೆನಾಡು ಭಾಗದಲ್ಲಿ ಗೋ ಕಳ್ಳತನ ಮಿತಿ ಮೀರಿದ್ದು ಪೊಲೀಸ್ ಇಲಾಖೆ ಅಲರ್ಟ್ ಆಗಬೇಕಿದೆ.
ಕಳೆದ 15 ದಿನಗಳಿಂದ ತೀರ್ಥಹಳ್ಳಿ ಪಶು ಪಾಲನಾ ಇಲಾಖೆಯು ಬೇಕಾಬಿಟ್ಟಿ ಜಾನುವಾರು ಸಾಗಾಣಿಕೆಗೆ ಪರವಾನಿಗೆ ನೀಡಿದ್ದರ ಪರಿಣಾಮ ಶಿವಮೊಗ್ಗ-ಭದ್ರಾವತಿಗೆ ಜಾನುವಾರು ಕಳ್ಳಸಾಗಣೆಯಾಗಿದೆ. ಇಲ್ಲಿನ ಪಶು ಇಲಾಖೆ ಒಂದೇ ದಿನ ಒಂದೇ ವಾಹನಕ್ಕೆ ಬೆಳಗ್ಗೆ ಸಂಜೆ ಜಾನುವಾರು ಸಾಗಾಣಿಕೆಗೆ ಪರವಾನಿಗೆ ನೀಡಿದ್ದಾರೆ. ಎಲ್ಲಾ ದಿನಗಳಲ್ಲೂ ಒಂದೇ ವಾಹನದಲ್ಲಿ ಜಾನುವಾರು ಸಾಗಣೆಯಾಗಿದೆ ಎಂದು ಆರೋಪಿಸಿ ತೀರ್ಥಹಳ್ಳಿಯಲ್ಲಿ ಸೆ.15ರಂದು ತೀರ್ಥಹಳ್ಳಿ ತಹಶೀಲ್ದಾರರ ಕಛೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಆ ಬಳಿಕ ಮತ್ತೆ ಎರಡು ಪ್ರಕರಣ ವರದಿ ಆಗಿದ್ದವು.
* ಲಕ್ಷ್ಯುರಿ ಕಾರಿನಲ್ಲಿ ಗೋ ಕಳ್ಳತನ: ಕ್ಯಾಮರಾದಲ್ಲಿ ಸೆರೆ
ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನಲ್ಲಿ ರಾತ್ರೋರಾತ್ರಿ ಖದೀಮರ ಗ್ಯಾಂಗ್ ಗೋವುಗಳನ್ನು ಹಿಡಿಯುವ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಕ್ಷ್ಯುರಿ ಕಾರಿನಲ್ಲೇ ಬರುವ ಗೋಕಳ್ಳರು ರಸ್ತೆಯಲ್ಲಿ ನಿಂತಿರುವ ಅಥವಾ ಮಲಗಿರುವ ಗೋವುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ. ಈ ರೀತಿ ಹಲವು ಘಟನೆ ಈ ಹಿಂದೆ ಕೂಡ ನಡೆದಿದೆ.
ತೀರ್ಥಹಳ್ಳಿ ಬೆಟ್ಟಮಕ್ಕಿಯಲ್ಲಿ ದನ ಕಳ್ಳತನ ಪ್ರಕರಣ ಸಂಬಂಧ ಶಿವಮೊಗ್ಗದ ಓರ್ವ ಹಾಗೂ ಲಿಂಗಾಪುರದ ಇಬ್ಬರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತಿ ನಿತ್ಯ ಗೋ ಕಳ್ಳತನ ಮಾಡಿ ಗೋ ಸಾಗಾಟ ಮಾಡಲಾಗುತ್ತಿತ್ತು. ಇದರಿಂದ ಜಾಗೃತಗೊಂಡ ಪೊಲೀಸ್ ತಂಡ ಇಂದು ಮೂವರನ್ನು ಬಂಧಿಸಿದೆ. ಬೆಟ್ಟಮಕ್ಕಿ ಬಳಿ ಓಮಿನಿ ಕಾರಿನ ಮೂಲಕ ಗೋ ಕಳ್ಳತನ ಮಾಡಲು ಬಂದಾಗಲೇ ಪೋಲೀಸರ ಕೈಗೆ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಾದ ಮೌಸಿನ್ ಖಾನ್, ಮಹಮದ್ ಮುಸ್ತಾಕ್, ಶಿರಾಜ್ ಉದ್ದಿನ್ ಎಂಬ ಮೂವರನ್ನು ಬಂಧಿಸಲಾಗಿದೆ.
ಮನೆ ಮುಂದೆಯೇ ಗೋ ಕಳ್ಳತನ!
ಮನೆ ಮುಂದೆ ಇದ್ದಂತಹ ಹಸುವನ್ನು ದುಷ್ಕರ್ಮಿಗಳು ರಾತ್ರಿ ಕಳ್ಳತನ ಮಾಡಿದ್ದಾರೆ ಎಂಬ ದೂರೊಂದು ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಗಬಡಿ ಕೂಡಿಗೆ ಗ್ರಾಮದಲ್ಲಿ ಸುನಿಲ್ ಎಂಬುವವರಿಗೆ ಸೇರಿದ ಹಸು ಕಳ್ಳತನವಾಗಿದ್ದು ಹಸು ರಾತ್ರಿ ಮನೆಯ ಎದುರಿಗೆ ಇದ್ದ ವೇಳೆ ಈ ಘಟನೆ ನಡೆದಿದೆ.. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಹಸು ಕೂಗಿದ ಶಬ್ದವಾಗಿದ್ದು ಸುನಿಲ್ ಹೊರಗೆ ಬಂದು ನೋಡುವಷ್ಟರಲ್ಲಿ ಮೂವರು ವ್ಯಕ್ತಿಗಳು ಕಾರಿನಲ್ಲಿ ಹಸುವನ್ನು ಕದ್ದು ತೆಗೆದುಕೊಂಡು ಹೋಗಿರುವುದಾಗಿ ಹೇಳಿದ್ದಾರೆ.
