Categories
ಮಲ್ನಾಡ್

ಕ್ರಿಸ್ಮಸ್, ಹೊಸ ವರ್ಷದ ಸಡಗರ ಜೋರು!

ಕ್ರಿಸ್ಮಸ್, ಹೊಸ ವರ್ಷದ ಸಡಗರ ಜೋರು!
– ಮಲೆನಾಡಿನತ್ತ ಪ್ರವಾಸಿಗರ ದಂಡು
– ಹೋಟೆಲ್, ಹೋಂ ಸ್ಟೇ, ಲಾಡ್ಜ್ ಫುಲ್ -ಫುಲ್

NAMMUR EXPRESS NEWS
ಮಲೆನಾಡು: ಒಂದಡೆ ಕರೋನಾ ಸೋಂಕು ಹೆಚ್ಚಾಗ್ತಿದೆ. ಮತ್ತೊಂದಡೆ ಕ್ರಿಸ್ಮಸ್, ಹೊಸ ವರ್ಷ ಬರ್ತಿದೆ. ಸೋಂಕು ಹೆಚ್ಚಾಗೋ ಆತಂಕ ಇದ್ದರೂ ಜನ ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕಳೆದ 3 ವರ್ಷದಿಂದಲೂ ಹೊಸ ವರ್ಷಕ್ಕೆ ಕೋವಿಡ್ ಟೆನ್ಶನ್ ಇದ್ದೇ ಇತ್ತು. ಈ ಬಾರಿಯಾದರೂ ಹೊಸ ವರ್ಷ ನೆಮ್ಮದಿಯಿಂದ ಆಚರಿಸೋಣ ಎಂದರೆ ಮತ್ತೆ ಕರೋನಾ ಭೂತ ಆವರಿಸಿದೆ. ಹೀಗಾಗಿ ಕ್ರಿಸ್ಮಸ್, ಹೊಸ ವರ್ಷವನ್ನ ಭಯದಲ್ಲೇ ಆಚರಿಸುವಂತಾಗಿದೆ.

ಸಾಲು ಸಾಲು ರಜೆ..!

ಸಾಲು ಸಾಲು ರಜೆ ಇರುವುದರಿಂದ ಮಲೆನಾಡಿನತ್ತ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರಜೆಯ ಕಾರಣ ಬೆಂಗಳೂರಿನಿಂದ ಮಲೆನಾಡಿನತ್ತ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಬಸ್ ಗಳ ಬುಕಿಂಗ್ ಕೂಡ ಹೆಚ್ಚಾಗಿರುವುದು ಕಂಡುಬರುತ್ತಿದೆ. ಇನ್ನು ಈಗಾಗಲೇ ಹೋಟೆಲ್, ಹೋಂಸ್ಟೇ, ಲಾಡ್ಜ್ ಗಳನ್ನು ಬುಕ್ ಮಾಡಲು ಆರಂಭಿಸಿದ್ದು, ಸಾಲು ಸಾಲು ರಜೆ ಹಾಗೂ ನ್ಯೂ ಇಯರ್ ಕಾರಣ ಹೋಂಸ್ಟೇ, ಲಾಡ್ಜ್ ಗಳು ಫುಲ್ ಆಗುವ ನಿರೀಕ್ಷೆ ಇದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದಲ್ಲಿ ಜನತೆ ಮೈಮರೆಯೋ ಮೊದಲು ಕೋವಿಡ್ ಬಗ್ಗೆಯೂ ಸ್ವಲ್ಪ ಎಚ್ಚರ ವಹಿಸಬೇಕೆಂದು ನಮ್ಮೂರ ಎಕ್ಸ್ಪ್ರೆಸ್ ಮಾಧ್ಯಮ ಈ ಮೂಲಕ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.