ಮುಗಿದಿಲ್ಲ ಹಿಜಾಬ್ ಗಲಾಟೆ..!
– ಹಿಜಾಬ್ ನಿಷೇಧ ಆದೇಶ ವಾಪಸ್ ಎಂದ ಸಿಎಂ
– ಬಿಜೆಪಿ ಪಕ್ಷದಿಂದ ಭಾರೀ ಆಕ್ರೋಶ
NAMMUR EXPRESS NEWS
ಬೆಂಗಳೂರು: ಎರಡು ವರ್ಷಗಳ ನಂತರವೂ ಹಿಜಾಬ್ ಗೆ ಸಂಬಂಧಿಸಿದ ಕೋರ್ಟ್ ಆದೇಶಗಳು, ಅದರ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಉಡುಪಿಯಿಂದ ಶುರುವಾದ ಹಿಜಾಬ್ ಗಲಾಟೆ ರಾಷ್ಟ್ರಾದ್ಯಂತ ವ್ಯಾಪಿಸಿ ಭಾರೀ ಪ್ರತಿಭಟನೆ, ಹೋರಾಟ ರಾಜಕೀಯ ಗುದ್ದಾಟಗಳಿಗೆ ಕಾರಣವಾಗಿದ್ದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಮೈಸೂರಿನಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಯಾರು ಯಾವ ಡ್ರೆಸ್ ಹಾಕಿಕೊಂಡರೆ ಏನು? ಯಾವ ಊಟ ಮಾಡಿದರೆ ನಮಗೇನು? ಇದು ಅವರವರ ಇಚ್ಛೆ ಎಂದಿದ್ದಾರೆ. ಈ ಮೂಲಕ ಹಿಜಾಬ್ ನಿಷೇಧ ಆದೇಶವನ್ನು ಸರ್ಕಾರ ವಾಪಸ್ ಪಡೆಯಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕೂಡ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ
ಇದನ್ನೂ ಓದಿ : ಇನ್ಮುಂದೆ ಸುಲಭವಾಗಿ ಸಿಗಲ್ಲ ಆಧಾರ್ ಕಾರ್ಡ್..!