Categories
ಕರಾವಳಿ ಮಲ್ನಾಡ್

ಕರಾವಳಿ, ಮಲೆನಾಡ ಮಕ್ಕಳ ಬಗ್ಗೆ ಹುಷಾರ್..!

ಕರಾವಳಿ, ಮಲೆನಾಡ ಮಕ್ಕಳ ಬಗ್ಗೆ ಹುಷಾರ್..!
– ಹೆಚ್ಚಾದ ಮಳೆ: ತುಂಬಿರುವ ಹಳ್ಳ, ಕೊಳ್ಳ, ನದಿಗಳು
– ಮಕ್ಕಳ ಪೋಷಕರು, ಶಿಕ್ಷಕರ ಬಗ್ಗೆ ಗಮನ ಇರಲಿ..

NAMMUR EXPRESS NEWS
ಮಲೆನಾಡು ಹಾಗೂ ಕರಾವಳಿ ಪ್ರದೇಶ ಭಾರೀ ಮಳೆಯ ಕಾರಣ ನೀರಿನ ತಾಣವಾಗಿದೆ. ಜಲಧಾರೆಯಿಂದ ಹಳ್ಳ ಕೊಳ್ಳಗಳು, ಜಲಪಾತಗಳು ತುಂಬಿ ಕಣ್ಮನ ಸೆಳೆಯುತ್ತಿದೆ
ನಿಜ, ಆದರೆ ಇದರಿಂದ ಅಪಾಯ ತಪ್ಪಿದ್ದಲ್ಲ. ಈ ವಿಚಾರದಲ್ಲಿ ಮುಖ್ಯವಾಗಿ ಮಕ್ಕಳು ಹಾಗೂ ಮಕ್ಕಳ ಪೋಷಕರು ಬಹಳ ಜಾಗೃತರಾಗಬೇಕಾಗಿದೆ.
ಹಳ್ಳ ದಾಟುವಾಗ ಕಾಲು ಜಾರುವುದು, ಇಲ್ಲವೆ ಮಳೆಯನ್ನು ಕಂಡು ಖುಷಿಖುಷಿಯಾಗಿ ಕುಣಿದಾಡಿಕೊಂಡು ಬರುವಾಗ ಹಳ್ಳ, ನದಿಗಳಿಗೆ ಆಯಾ ತಪ್ಪಿ ಜಾರಿ ಬೀಳುವ ಅಪಾಯ ಎದುರಾಗಬಹುದು. ಇದಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಶಾಲೆಯವರು ಹೆಚ್ಚಿನ ಗಮನ ಹರಿಸಬೇಕಾಗಿದೆ. ಮಕ್ಕಳಿಗೆ ಇವುಗಳ ಕುರಿತು ಸೂಕ್ತ ಮಾಹಿತಿ ನೀಡಿ ಅವರಲ್ಲಿ ಕೊಂಚ ಜವಾಬ್ದಾರಿಯನ್ನು ಮೂಡಿಸಬೇಕಾದುದು ಅಗತ್ಯ. ಇಂತಹ ಆತಂಕಗಳು ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಎದುರಾಗುತ್ತದೆ‌. ಕೇವಲ ಪೋಷಕರು, ಶಾಲೆಯವರಷ್ಟೇ ಅಲ್ಲದೆ ಊರಿನ ನಾಗರಿಕರೂ ಕೂಡ ಈ ವಿಚಾರಗಳತ್ತ ಗಮನಹರಿಸಿದರೆ ಇನ್ನೂ ಉತ್ತಮ. ಮುಂದಾಗುವ ಅಪಾಯವನ್ನು ತಪ್ಪಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.