Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮಹಿಳಾ ಒಕ್ಕಲಿಗರ ಸಂಘ ಮಾದರಿ ಕಾರ್ಯಕ್ರಮ

ತೀರ್ಥಹಳ್ಳಿ ಮಹಿಳಾ ಒಕ್ಕಲಿಗರ ಸಂಘ ಮಾದರಿ ಕಾರ್ಯಕ್ರಮ
– ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿ
– ಸಮಾಜದ ಜನತೆಗೆ ಮೂರು ವಿಷಯಗಳ ಬಗ್ಗೆ ಚರ್ಚೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ (ರಿ.)ವು
ನಿರ್ಮಲಾನಂದ ಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಮಠ ಹಾಗೂ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪ್ರಧಾನ ಕಾರ್ಯದರ್ಶಿಗಳು, ಶ್ರೀ ಆದಿಚುಂಚನಗಿರಿ ಮಠ ಇವರುಗಳ ಕೃಪಾಶೀರ್ವಾದಗಳೊಂದಿಗೆ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಾಹ ವಿಚ್ಛೇಧನ, ರೈತರ ಮಕ್ಕಳನ್ನು ಮದುವೆಯಾಗಲು ನಿರಾಕರಿಸುವುದು, ವಧು-ವರರ ಸಮಾವೇಶದ ಬಗ್ಗೆ ಚರ್ಚೆ ಮಾಡಲಾಯಿತು. ಜಿಲ್ಲೆಯ ಮತ್ತು ತಾಲ್ಲೂಕಿನ ಸಮಾಜದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಪೋಷಕರು, ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಎಲ್ಲಾ ಸಮಾಜದ ಬಾಂಧವರು ಸಮಯಕ್ಕೆ ಸರಿಯಾಗಿ ಆಗಮಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು. ಶಕುಂತಲಾ ರಮೇಶ್ ತೀರ್ಥಹಳ್ಳಿ ತಾಲೂಕು ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷರು, ಭಾರತೀ ರಾಮಕೃಷ್ಣ ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷರು ಶಿವಮೊಗ್ಗ ಇವರು ರೈತರ ಮಕ್ಕಳ ವಿವಾಹವಾಗಲು ನಿರಾಕರಿಸುವ ಕುರಿತು ಮಾತನಾಡಿದರು. ರಹಮತ್ ಉಲ್ಲಾ ಅಸಾದಿ ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ಅಧ್ಯಕ್ಷರು, ಗೀತಾ ರಮೇಶ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಸುಶೀಲಾ ಶೆಟ್ಟಿ ಪಟ್ಟಣ ಪಂಚಾಯಿತಿ, ಶಶಿಕಲಾ ಪ್ರಶಾಂತ್ ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗ ಸಂಘದ ಕಾರ್ಯದರ್ಶಿ, ಮಾಲಾ ರಾಮಪ್ಪ ಶಿವಮೊಗ್ಗ ಜಿಲ್ಲಾ ಮಹಿಳಾ ಒಕ್ಕಲಿಗ ಸಂಘದ ಖಜಾಂಚಿ, ಜಿ ಎಸ್ ನಟೇಶ್ ಕಗ್ಗ ಉಪನ್ಯಾಸಕರು ಇವರು ವಿವಾಹ ವಿಚ್ಛೇದನದ ಬಗ್ಗೆ ಮಾತನಾಡಿದರು. ಕೆ ಟಿ ಪಾರ್ವತಮ್ಮ ನಿವೃತ್ತಿ ಪ್ರಾಂಶುಪಾಲರು ವಿವಾಹ ವಿಚ್ಛೇದನದ ಬಗ್ಗೆ ಪ್ರಸ್ತಾಪಿಸಿದರು. ಪ್ರತಿಮಾ ಎಸ್.ವಿ. ಕಾರ್ಯದರ್ಶಿ, ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ, ಶಕುಂತಳ ರಮೇಶ್ ಅಧ್ಯಕ್ಷರು, ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.