ಮಲೆನಾಡಲ್ಲಿ ಕ್ರೈಂ ಸ್ಟೋರಿ.. ಏನೇನ್ ಆಯ್ತು?
ತೀರ್ಥಹಳ್ಳಿ : ಭಾರತೀಪುರ ತಿರುವಿನಲ್ಲಿ ಕಾರು ಹಾಗೂ ಪಿಕಪ್ ನಡುವೆ ಅಪಘಾತ..!
– ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಗರ್ಭ ಧರಿಸಿದ ಬಾಲಕಿ..!
– ಆನಂದಪುರ : ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ರೈತ ಸಾವು..!!
– ಕಡೂರು: ಕಡವೆ ಬೇಟೆ ಮಾಡಿದ ಇಬ್ಬರ ಬಂಧನ..!!
– ಸಾಗರ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ..!!
NAMMUR EXPRESS NEWS
ತೀರ್ಥಹಳ್ಳಿ : ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿರುವ ಘಟನೆ ಭಾರತೀಪುರ ತಿರುವಿನಲ್ಲಿ ನಡೆದಿದೆ.
ಪಟ್ಟಣದ ಸಮೀಪದ ಭಾರತೀಪುರ ತಿರುವಿನಲ್ಲಿ ಕಾರು ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ ಕಡೆ ಬರುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಯಾರಿಗೂ ತೊಂದರೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪಿಕಪ್ ಹಾಗೂ ಕಾರಿನ ನಡುವೆ ಓವರ್ ಟೇಕ್ ಮಾಡಲು ಹೋಗಿ ಅಪಘಾತ ನಡೆದಿದೆ. ಕಾರಿನ ಒಂದು ಭಾಗ ಜಖಂಗೊಂಡಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಗರ್ಭ ಧರಿಸಿದ ಬಾಲಕಿ..!
ಸಾಗರ: ಸಾಗರದಲ್ಲಿ ಅಪ್ರಾಪೆಯೊಬ್ಬಳು ಗರ್ಭ ಧರಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಪ್ರಾಪ್ತನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ 16 ವರ್ಷದ ಬಾಲಕಿಯನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ ಗರ್ಭಿಣಿ ಎಂಬುದು ಗೂತ್ತಾಗಿದೆ. ಕೂಲಂಕಷವಾಗಿ ವಿಚಾರಿಸಿದಾಗ ಪರಿಚಿತ ಅಪ್ರಾಪ್ತನೊಬ್ಬ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಅಪ್ರಾಪ್ತನ ವಿರುದ್ಧ ಪ್ರಕರಣ ದಾಖಲಾಗಿದೆ.
– ಆನಂದಪುರ : ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ರೈತ ಸಾವು..!!
ಆನಂದಪುರ: ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ನಾಗರಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ್ದಾನೆ. ಮೃತ ರೈತನನ್ನು 40 ವರ್ಷದ ವೀರೇಶ್ ಎಂದು ಗುರುತಿಸಲಾಗಿದೆ.
ವೀರೇಶ್ ಅವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದೆ. ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವೈದ್ಯರು ಪರಿಶೀಲಿಸಿದ ನಂತರ ವೀರೇಶ್ ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕಡೂರು: ಕಡವೆ ಬೇಟೆ ಮಾಡಿದ ಇಬ್ಬರ ಬಂಧನ..!!
ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಗನೀ ಬಸವನಹಳ್ಳಿಯಲ್ಲಿ ಸೆ.1ರಂದು ಕಡವೆ ಬೇಟೆಯಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಗನಿ ಬಸವನಹಳ್ಳಿ ಮಂಜುನಾಥ ಹಾಗೂ ಮಂಜಾಭೋವಿ ಬಂಧಿತರು. ಆರೋಪಿಗಳು ಇತರರೊಂದಿಗೆ ಸೇರಿ ಬೇಟೆಯಾಡಿದ್ದು, ಈ ಬಗ್ಗೆ ಸುಳಿವಿ ಸಿಕ್ಕ ಕಾರಣ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಕಡವೆ ಮಾಂಸ, ಚರ್ಮ ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪಮಹಾನಿರೀಕ್ಷಕಿ ಜಿ.ಸಂಗೀತಾ, ಸಿಐಡಿ ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ (ಪ್ರಭಾರ) ಪಿ. ಎಸ್. ಸುದರ್ಶನ್ ಮಾರ್ಗದರ್ಶನದಲ್ಲಿ ಉಪನಿರೀಕ್ಷಕಿ ಕೆ.ಆರ್.ಸುನೀತಾ ನೇತೃತ್ವದಲ್ಲಿ ಸಿಬ್ಬಂದಿ ಡಿ.ಎಚ್.ದಿನೇಶ, ಎಸ್.ಕೆ.ದಿವಾಕರ, ಕೆ.ಎಸ್.ದಿಲೀಪ್, ಎ.ಜಿ.ಹಾಲೇಶ್, ಎಚ್.ದೇವರಾಜ, ವೈ.ಹೇಮಾವತಿ, ಚಾಲಕರಾದ ತಿಮ್ಮ ಶೆಟ್ಟಿ ಹಾಗೂ ಕಡೂರು ವಲಯ ಅರಣ್ಯಾಧಿಕಾರಿ ಎಂ.ಆರ್.ಹರೀಶ್ ಭಾಗಿಯಾಗಿದ್ದರು.
– ಸಾಗರ: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ..!!
ಸಾಗರ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸುತ್ತಿರುವ ಸಾಗರ ನಗರ ಸಭೆ ನಡೆದಿದೆ. ನಾಯಿ ದಾಳಿಯಿಂದಾಗಿ ಬಾಲಕನ ಕಣ್ಣು ಬಾಯಿ ಮುಖ ಸೇರಿದಂತೆ ಅನೇಕ ಭಾಗಗಳಲ್ಲಿ ಗಾಯವಾಗಿದೆ. ಬಾಲಕನಿಗೆ ದಾಳಿ ನಡೆಸಿದ ನಂತರ ಮಹಿಳೆಯ ಮೇಲೂ ಬೀದಿನಾಯಿ ದಾಳಿ ಮಾಡಿದೆ. ನಗರಸಭೆಯ ಆಡಳಿತ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
