Categories
ಚಿಕ್ಕಮಗಳೂರು ತೀರ್ಥಹಳ್ಳಿ ಬೆಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಮಲೆನಾಡಿಗರ ಬಗ್ಗೆ ಡಿಸಿಎಂ ಡಿಕೆಶಿ ಮೆಚ್ಚುಗೆ ಮಾತು!

ಮಲೆನಾಡಿಗರ ಬಗ್ಗೆ ಡಿಸಿಎಂ ಡಿಕೆಶಿ ಮೆಚ್ಚುಗೆ ಮಾತು!
– ಮಲೆನಾಡು ಹಿತರಕ್ಷಣಾ ವೇದಿಕೆ ಕಾರ್ಯಕ್ರಮ ಸೂಪರ್
– ವಿಜಯ್ ದೇವ್ ಅವರಿಗೆ “ಮಲೆನಾಡು ರತ್ನ” ಪ್ರಶಸ್ತಿ ಪ್ರದಾನ
– ಶಿವದೂತ ಗುಳಿಗೆ ನಾಟಕ ನೋಡಿ ಖುಷಿ ಪಟ್ಟ ಜನ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನ “ಮಲೆನಾಡು ಹಿತರಕ್ಷಣಾ ವೇದಿಕೆ (ರಿ.)” 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ “ಮಲೆನಾಡು ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ ಸಾವಿರಾರು ಮಲೆನಾಡಿಗರ ಸಮ್ಮುಖದಲ್ಲಿ ಅದ್ದೂರಿಯಾಗಿ ಭಾನುವಾರ ಸಂಜೆಯಿಂದ ರಾತ್ರಿವರೆಗೆ ನಡೆಯಿತು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ಶ್ರೀ ಅವಧೂತ ವಿನಯ ಗುರೂಜಿ, ದತ್ತಾಶ್ರಮ, ಗೌರಿಗದ್ದೆ ಇವರು ಮಲೆನಾಡು ಸುಂದರ ಭೂಮಿ. ಇಲ್ಲಿ ದೇವರು ನೆಲೆಸಿದ್ದಾರೆ. ತೀರ್ಥಹಳ್ಳಿ, ಶೃಂಗೇರಿ ಪುಣ್ಯ ಭೂಮಿ. ಎಲ್ಲಾ ಮಲೆನಾಡಿಗರು ಸೇರಿ ಸಮಾಜ ಸೇವೆಗೆ ಮುಂದಾಗಬೇಕು. ಡಿಕೆಶಿ ಅಂತ ನೇರ ನಡೆಯ ವ್ಯಕ್ತಿ ಮುಖ್ಯಮಂತ್ರಿ ಆಗಬೇಕು. ಸಂಘದ ಅಚ್ಚುಕಟ್ಟಿನ ಆಯೋಜನೆ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಮಲೆನಾಡಿನ ಜನ ಒಳ್ಳೆಯವರು, ಬುದ್ದಿವಂತರು. ಈ ನಾಡಿಗೆ ಮಲೆನಾಡಿನವರ ಕೊಡುಗೆ ಅಪಾರ. ಈಗಲೂ ಅಲ್ಲಿ ಸಾಧಕರಿದ್ದಾರೆ. ನಾನು ಯಾವಾಗಲೂ ಮಲೆನಾಡಿನ ಪರ ಇದ್ದೇನೆ. ನನ್ನ ಮಗಳಿಗೆ ಮಲೆನಾಡ ಸಂಬಂಧ ಮಾಡಿದ್ದೇನೆ. ನೀವೆಲ್ಲ ನೀಡುತ್ತಿರುವ ಪ್ರೀತಿ ದೊಡ್ಡದು ಎಂದು ಮಲೆನಾಡ ಮಣ್ಣಿನ ಬಗ್ಗೆ ಮೆಚ್ಚುಗೆ ಮಾತನಾಡಿದರು.

ಶೃಂಗೇರಿ ಶಾಸಕ ರಾಜೇಗೌಡ ಮಾತನಾಡಿ, ಮಲೆನಾಡಿನ ಎಲ್ಲರ ಸಮಾಗಮ ಸಂತೋಷ ತಂದಿದೆ. ಮಲೆನಾಡ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ನಾವೆಲ್ಲರೂ ಜತೆ ಆಗೋಣ ಎಂದರು.
ಭೂ. ಒತ್ತುವರಿ ಬಗ್ಗೆ ಟಾಸ್ಕ್ ಫೋರ್ಸ್ ರಚನೆ ಆಗುತ್ತಿದೆ. ಇದರಿಂದ ಎಲ್ಲರಿಗೂ ನ್ಯಾಯ ಕೊಡುತ್ತೇವೆ. ಜತೆಗೆ ಮಳೆ ಮುಗಿದ ತಕ್ಷಣ ಹೊಂಡ ಬಿದ್ದ ಗುಂಡಿ ಸರಿ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು.
ನೂತನ ಎಂ ಎಲ್ಸಿ ಡಾ.ಆರತಿ ಕೃಷ್ಣ ಮಾತನಾಡಿ, ನಾನು ನಿಮ್ಮ ಸೇವೆಗೆ ಸದಾ ಸಿದ್ಧ. ಮಲೆನಾಡಿನ ಅಭಿವೃದ್ಧಿಗೆ, ಸೇವೆಗಾಗಿ ದುಡಿಯುತ್ತೇನೆ ಎಂದರು. ಮಾಜಿ ಸಚಿವ, ಶಾಸಕ ಗೋಪಾಲಯ್ಯ ಮಲೆನಾಡಿಗರ ಒಳ್ಳೆಯತನದ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಅಧ್ಯಕ್ಷತೆಯನ್ನು ಮಲೆನಾಡು ಹಿತರಕ್ಷಣಾ ವೇದಿಕೆ (ರಿ.)ಅಧ್ಯಕ್ಷರಾದ ಅಜಿತ್ ಡಿ. ಕಲ್ಕುಳಿ ವಹಿಸಿ ಎಲ್ಲರನ್ನು ಸ್ವಾಗತಿಸಿ ಸಹಕಾರ ನೀಡಿದವರಿಗೆ ಧನ್ಯವಾದ ಅರ್ಪಿಸಿದರು. ಸಮಾಜ ಸೇವಕ ಮಣಿ ಹೆಗ್ಡೆ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.

ಮಲೆನಾಡ ಸಾಧಕರಿಗೆ ಮಲೆನಾಡು ರತ್ನ ಪ್ರಶಸ್ತಿ

ಶ್ರೀ ವಿಜಯದೇವ್ ಬಸವಾನಿ( ಸಹಕಾರ ರತ್ನ ಪುರಸ್ಕೃತರು & ಅಧ್ಯಕ್ಷರು, ಸಹ್ಯಾದ್ರಿ ಕೋ- ಅಪರೇಟಿವ್ ಬ್ಯಾಂಕ್, ತೀರ್ಥಹಳ್ಳಿ ಇವರಿಗೆ ಗಣ್ಯರು ಮಲೆನಾಡು ರತ್ನ” ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ವಿಜಯದೇವ್, ಮಲೆನಾಡಿಗರು ತಮ್ಮಊರು ತೊರೆಯದಿರಿ ಎಂದು ಕರೆ ನೀಡಿದರು.
ಶ್ರೀ ವಿಶ್ವನಾಥ್ ಗದ್ದೆಮನೆ( ಯುವ ಉದ್ಯಮಿಗಳು ಹಾಗೂ ಮಾಲೀಕರು, ನೇಟಸ್ ವುಮೆನ್ ಅಂಡ್ ಚೈಲ್ಡ್ ಮಲ್ಟಿಸ್ಪೇಷಲಿಟಿ ಹಾಸ್ಪಿಟಲ್, ಸಮಾಜ ಸೇವಕರು) ಇವರು ತುರ್ತು ಕೆಲಸ ಇದ್ದಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಮಲೆನಾಡಿನ ಉದ್ಯಮ, ಸಂಘಟನೆ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

ಗಮನ ಸೆಳೆದ ಶಿವದೂತ ಗುಳಿಗೆ, ಭರ್ಜರಿ ಊಟ

ಸಭಾಕಾರ್ಯಕ್ರಮ ಬಳಿಕ “ಕಲಾಸಂಗಮ ಕಲಾವಿದರಿಂದ”
ಶಿವದೂತ ಗುಳಿಗೆ ಕಾರ್ಯಕ್ರಮ ಜನಮನ ಸೆಳೆಯಿತು. ತಡರಾತ್ರಿವರೆಗೆ ನಾಟಕ ನೋಡಿ ಎಲ್ಲರೂ ಅಭಿ ಅವರ ದೊನ್ನೆ ಬಿರಿಯಾನಿ ಊಟ ಎಲ್ಲರಿಗೂ ಸಂತಸ ನೀಡಿತು.
ಸಂಜೆಯಿಂದ ಏಷಿಯನ್ ಡಯಾಗ್ನೋಸ್ಟಿಕ್ಸ್, ಬೆಂಗಳೂರು ಇವರ ವತಿಯಿಂದ ಉಚಿತ ರಕ್ತ ಪರೀಕ್ಷೆ ಮತ್ತು ಬಿ.ಪಿ ತಪಾಸಣಾ ಶಿಬಿರ ನಡೆಯಿತು. ನಿರೂಪಣೆಯನ್ನು ಶ್ರೀ ಮಂಜುನಾಥ್ ಶೃಂಗೇರಿ & ಕುಮಾರಿ ಜೆ. ವಿ. ನಿಸರ್ಗಗೌಡ ನಿರ್ವಹಣೆ ಮಾಡಿದರು.
ಅಜಿತ್ ಡಿ. ಕಲ್ಕುಳಿ, ಅಧ್ಯಕ್ಷರು, ನವೀನ್ ಕಮ್ತಾಳ್, ಕಾರ್ಯಾಧ್ಯಕ್ಷರು, ಕೆ.ಟಿ. ರಮೇಶ್, ಉಪಾಧ್ಯಕ್ಷರು, ಶಶಿಕಾಂತ್ ಅತ್ತಿಕೊಡಿಗೆ ಉಪಾಧ್ಯಕ್ಷರು, ರವೀಶ್, ಹರಾವರಿ, ಉಪಾಧ್ಯಕ್ಷರು, ನಟೇಶ್ ಟಿ. ಜಿ. ತಟ್ಟೆಹಕ್ಕಲು, ಕಾರ್ಯದರ್ಶಿ, ಸಚ್ಚಿನ್‌ ಧರ್ಮಪ್ಪ, ಸಹ-ಕಾರ್ಯದರ್ಶಿ, ಮೋಹನ್ ಹೆಗ್ಡೆ ಖಜಾಂಚಿ, ಅರವಿಂದ್ ಹರಡಮನೆ, ಸಹ-ಖಜಾಂಜಿ, ದಿನೇಶ್, ಖಾಂಡ್ಯ, ಸಂ. ಕಾರ್ಯದರ್ಶಿ, ಮಂಜುನಾಥ್ ಶೃಂಗೇರಿ, ಸಂ. ಕಾರ್ಯದರ್ಶಿ, ಸುನೀಲ್ ಶೆಟ್ಟಿ. ಸಂ. ಕಾರ್ಯದರ್ಶಿ, ಮಾಲತೇಶ್ ಸಿಗಸೆ, ನಿರ್ದೇಶಕರು, ಕಾಫಿ ಗಿರೀಶ್, ನಿರ್ದೇಶಕರು, ಮಿಥುನ್, ನಿರ್ದೇಶಕರು, ಸತೀಶ್ ಜಿ. ಡಿ. ನಿರ್ದೇಶಕರು, ಕಿಶನ್, ನಿರ್ದೇಶಕರು ಇದ್ದರು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.