Categories
ತೀರ್ಥಹಳ್ಳಿ ಮಲ್ನಾಡ್

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿಯಲ್ಲಿ ಕಣಜ – 2025

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿಯಲ್ಲಿ ಕಣಜ – 2025
– ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ ಕಾಲೇಜು ವತಿಯಿಂದ ಆಯೋಜನೆ
– ಅಕ್ಟೋಬರ್ 14ರಂದು ಕ್ರೀಡೆ.. ಆಹಾರ ಪ್ರದರ್ಶನ..ಸಾಂಸ್ಕೃತಿಕ ಹಬ್ಬ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆ ಸಹ್ಯಾದ್ರಿ ಪಾಲಿಟೆಕ್ನಿಕ್ ಅಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ ” ಕಣಜ-2025 ಅ. 14ರಂದು ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಕೆ. ಕೆ ನಾಗರಾಜ್ ಅವರು ವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಗಣೇಶ್ ಅವರು ವಹಿಸಲಿದ್ದಾರೆ. ಈ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಅನಿತಾ ನಾಗರಾಜ್ ಅವರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್ ಶಂಕರಪ್ಪ ಇವರು ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾಲೇಜಿನ ಈ ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಕೂಡ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾಟವನ್ನು ನಡೆಸಲಾಗುತ್ತದೆ. ವಿದ್ಯಾರ್ಥಿನಿಯರಿಗೆ ಥ್ರೋ ಬಾಲ್ ಹಾಗೂ ಶಟಲ್ ಬ್ಯಾಡ್ಮಿಂಟನ್ ನಡೆಸಲಾಗುತ್ತದೆ. ಈ ಕಣಜ ಕಾರ್ಯಕ್ರಮದಲ್ಲಿ ಗೆಲುವನ್ನು ಸಾಧಿಸಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ.

ಅಕ್ಟೋಬರ್ 14ರಂದು ಪ್ರಾದೇಶಿಕವಾದ ಆಹಾರ ಮೇಳ ಕೂಡ ಆಯೋಜನೆ ಮಾಡಲಾಗಿದೆ. ಕರಾವಳಿಯ ಆಹಾರ ಸ್ಟಾಲ್ ಹಾಗೂ ಮಲೆನಾಡು ಆಹಾರ ಸ್ಟಾಲ್, ಉತ್ತರ ಕರ್ನಾಟಕ ಆಹಾರ ಸ್ಟಾಲ್ ಹೀಗೆ ಅನೇಕ ಭಾಗದ ಆಹಾರ ಸ್ಟಾಲ್ ಗಳು ಕೂಡ ಈ ಕಾರ್ಯಕ್ರಮದಲ್ಲಿ ಆಗಮಿಸಲಿದೆ. ಬೆಳಗ್ಗೆ ಸಭಾ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನದ ವೇಳೆ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದಂತವರಿಗೆ ಬಹುಮಾನದ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅನೇಕ ರೀತಿಯ ನಾಟಕಗಳು, ನಗೆ ಹೊಮ್ಮಿಸುವಂತಹ ಹಾಸ್ಯ ಚಟಾಕಿಗಳು, ಯಕ್ಷಗಾನ, ಡೊಳ್ಳು ಕುಣಿತ, ಹೀಗೆ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಧ್ಯಾಹ್ನದ ವೇಳೆ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಕೂಡ ಸ್ವಾಗತಿಸಲಾಗಿದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.