Categories
ಮಲ್ನಾಡ್

ರೋಗಕ್ಕೆ ತುತ್ತಾಗಿರುವ ಮಲೆನಾಡಿನ ಅಡಿಕೆ!

ರೋಗಕ್ಕೆ ತುತ್ತಾಗಿರುವ ಮಲೆನಾಡಿನ ಅಡಿಕೆ!
– ಕ್ಷೀಣಿಸುತ್ತಿರುವ ಅಡಿಕೆ ಇಳುವರಿ: ಬೆಲೆ ಬಂಪರ್
– ಅಡಿಕೆಗೆ ರೋಗ ಕಡಿವಾಣ ಯಾವಾಗ?

NAMMUR EXPRESS NEWS
ಮಲೆನಾಡು: ಬರಗಾಲಕ್ಕೆ ತುತ್ತಾಗಿದ್ದ ಮಲೆನಾಡಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ. ಅಡಿಕೆ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿದೆ. ಆದರೆ ಅಡಿಕೆ ಮರ ಮಾತ್ರ ರೋಗ ಬಾಧೆಯಿಂದ ಒಣಗಿ ನಿಂತಿದೆ. ಮಲೆನಾಡಲ್ಲಿ ಸಾವಿರಾರು ಹೆಕ್ಟೇರ್​ನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸಲು ಕನಸು ಕಂಡಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳು ರೋಗ ಭಾದೆಯಿಂದ ಒಣಗಿ ನಿಲ್ಲುತ್ತಿವೆ.

ಮಲೆನಾಡಲ್ಲಿ ಅಡಿಕೆಗೆ ಬಂಗಾರದ ಬೆಲೆ ಬಂದಿದೆ. ರಾಶಿ ಕ್ವಿಂಟಲ್ ಈಗ 50 ಸಾವಿರ ದಾಟಿದೆ. ಆದರೆ ಅಡಿಕೆಗೆ ಎಲೆ ಚುಕ್ಕಿ, ಬೇರು ಹುಳು ರೋಗ, ಶೃಂಗೇರಿ ಕೊಪ್ಪ ಭಾಗದಲ್ಲಿ ಹಳದಿ ರೋಗ, ಕೊಳೆ ರೋಗ, ಹಳಕು ಉದುರುವ ರೋಗ ಬಿಸಿಲು ಹೆಚ್ಚಾದಂತೆ ಹೆಚ್ಚಾಗಿದೆ.

ಅಡಿಕೆಗೆ ಮರೀಚಿಕೆಯಾದ ಔಷಧಿ: ಸರ್ಕಾರಗಳ ಬೊಗಳೆ!

ಅಡಿಕೆ ರೋಗ ನಿರ್ದಿಷ್ಟ ಫಂಗಸ್‌ಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಕಾರಣ ಎಂದು ಗೊತ್ತಾಗಿದ್ದರೂ, ರೋಗಕ್ಕೆ ಇನ್ನೂ ಔಷಧಿಯನ್ನು ಕಂಡು ಹಿಡಿದಿಲ್ಲ. ಅನೇಕ ಫಂಗಿಸೈಡ್‌ಗಳನ್ನು ಪ್ರಯೋಗಿಸಿ ರೋಗದ ನಿಯಂತ್ರಣ ಪ್ರಯತ್ನ-ಪ್ರಯೋಗ ನೆಡೆಯುತ್ತಿದೆ. ರೋಗ ಬಂದ ಮೇಲೆ ಔಷಧಿ ಕೊಡುವ ಪ್ರಯತ್ನಗಳು ಸಹಜ ಮತ್ತು ಅಗತ್ಯ ಕೂಡ. ಅದರ ಜೊತೆಗೆ ರೋಗಗಳಿಗೆ ಕಾರಣವಾಗುವ ಮೂಲ ಯಾವುದು ಎಂಬ ಅಧ್ಯಯನ ಮತ್ತು ಪ್ರಯೋಗಗಳು ನಡೆಯಬೇಕು. ಆದರೆ ಅಡಿಕೆ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಗಳ ವಿಚಾರದಲ್ಲಿ ಈ ಕಾರಣ ಕಂಡುಹಿಡಿಯುವ ಅಧ್ಯಯನ ಮತ್ತು ಪ್ರಯೋಗಗಳು ತಳ ಮಟ್ಟದಿಂದ ತೀವ್ರಗತಿಯಲ್ಲಿ ನಡೆಯುತ್ತಿಲ್ಲ. ಇದರಿಂದ ರೈತರಿಗೆ ಅಡಿಕೆಗೆ ಬಂಪರ್ ಬೆಲೆ ಬಂದರೂ ಕೂಡ ಅಡಿಕೆ ಮರಗಳೇ ಇಲ್ಲದೆ ಫಸಲು ಕ್ಷೀಣಿಸುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.