ರಾಷ್ಟ್ರೀಯ ವಸತಿ ಶಾಲೆಗೆ ಡೈನಾಮಿಕ್ ಶಾಲೆ ಪ್ರಶಸ್ತಿ
– 2025-26ನೇ ಸಾಲಿನ ಎಜುಕೇಷನ್ ನ್ಯೂಸ್ ನೆಟ್ ವರ್ಕ್ ವತಿಯಿಂದ ಪ್ರಶಸ್ತಿ
– ರಾಷ್ಟ್ರೀಯ ವಸತಿ ಶಾಲೆಗೆ ಸತತ 2ನೇ ಬಾರಿ ಪ್ರಶಸ್ತಿ ಲಭ್ಯ
NAMMUR EXPRESS NEWS
ಕೋಣಂದೂರು: ಕೇಂದ್ರೀಯ ಪಠ್ಯಕ್ರಮದ ರಾಷ್ಟ್ರೀಯ ವಸತಿ ಶಾಲೆಗೆ 2025-26ನೇ ಸಾಲಿನ ಎಜುಕೇಷನ್ ನ್ಯೂಸ್ ನೆಟ್ ವರ್ಕ್ ವತಿಯಿಂದ ನೀಡುವ ‘ಡೈನಾಮಿಕ್ ಸ್ಕೂಲ್’ ಪ್ರಶಸ್ತಿ ಲಭಿಸಿದೆ. ಮಂಗಳವಾರ ಮೈಸೂರಿನ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಂಶುಪಾಲ ಕೆ.ಎಸ್.ವಾಸುದೇವ ಪ್ರಶಸ್ತಿ ಸ್ವೀಕರಿಸಿದರು. ಅಕಾಡೆಮಿಕಾ ಇಂಟರ್ ನ್ಯಾಷನಲ್ ಸ್ಟಡೀಸ್ ನಿರ್ದೇಶಕ ಡಾ.ಸುರೇನ್ ರಾಮ ಸುಬ್ಬು,ಅಡ್ರೆಸ್ ಹೆಲ್ತ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ ಲಕ್ಷ್ಮಣ್ ಇದ್ದರು. ಹಿಂದೆ 2014ರಲ್ಲಿ ಬ್ರಿಟೀಷ್ ಕೌನ್ಸಿಲ್ ಪ್ರಶಸ್ತಿ ಲಭಿಸಿರುವುದನ್ನು ಸ್ಮರಿಸಬಹುದು.
ಗ್ರಾಮಾಂತರ ಪ್ರದೇಶದಲ್ಲಿ ಕೇಂದ್ರೀಯ ಪಠ್ಯಕ್ರಮದ ಗುಣಾತ್ಮಕ ಶಿಕ್ಷಣ, ಕ್ರೀಡಾ ಕ್ಷೇತ್ರ, ಪತ್ಯೇತರ ಚಟುವಟಿಕೆಗಳಲ್ಲಿ ಶಾಲೆ ಈಚೆಗೆ ಮಾಡಿದ ಸಾಧನೆಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ರಾಷ್ಟ್ರೀಯ ವಸತಿ ಶಾಲೆಗೆ ಸತತ 2ನೇ ಬಾರಿ ಪ್ರಶಸ್ತಿ ಲಭಿಸಲು ಸಹಕರಿಸಿದ ಆಡಳಿತ ಮಂಡಳಿ, ಅಧ್ಯಾಪಕ ವೃಂದ,ಸಿಬ್ಬಂದಿ,ಪೋಷಕರನ್ನು ಪ್ರಾಂಶುಪಾಲ ಕೆ.ಎಸ್.ವಾಸುದೇವ ಅಭಿನಂದಿಸಿದ್ದಾರೆ.
