Categories
ಕೊಪ್ಪ ಚಿಕ್ಕಮಗಳೂರು ಮಲ್ನಾಡ್ ಶಿವಮೊಗ್ಗ ಶೃಂಗೇರಿ

ಮೊನ್ನೆ ಒಂದು ಕಾಡಾನೆ ಸೆರೆ ಇಂದು ಎರಡು ಕಾಡಾನೆ ಪ್ರತ್ಯಕ್ಷ

ಮೊನ್ನೆ ಒಂದು ಕಾಡಾನೆ ಸೆರೆ ಇಂದು ಎರಡು ಕಾಡಾನೆ ಪ್ರತ್ಯಕ್ಷ

* ಕಾಡಾನೆ ಸೆರೆಯಾಯ್ತು ಎಂದು ನಿಟ್ಟುಸಿರು ಬಿಟ್ಟವರಿಗೆ ಮತ್ತೆ ಭಯ ಶುರು
* ಗುಡ್ಡೇಹಳ್ಳ ಗ್ರಾಮ ಆಯ್ತು ಈಗ ಸಿಂಸೆ ಗ್ರಾಮದಲ್ಲಿ ಕಾಡಾನೆ

NAMMMUR EXPRESS NEWS
ಎನ್ ಆರ್ ಪುರ: ಮೊನ್ನೆಯಷ್ಟೇ ತಾಲೂಕಿನ ಗುಡ್ಡೇಹಳ್ಳ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದ,ರೈತರ ಬೆಳೆ ನಾಶ ಮಾಡುತ್ತಿದ್ದ ಒಂಟಿಸಲಗವನ್ನು ಸೆರೆಹಿಯಲಾಗಿತ್ತು. ಆನೆ ಸೆರೆಹಿಡಿದ ಕಾರಣ ನಿಟ್ಟುಸಿರು ಬಿಟ್ಟ ಅಲ್ಲಿನ ಸಾರ್ವಜನಿಕರು ಸಂತಸಗೊಂಡು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬಂದ್ಧಿಗಳಿಗೆ,ಕಾಡಾನೆ ಸೆರೆಗೆ ಸಹಕರಿಸಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡರಿಗೆ ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದ್ದರು.

ಕಾಡಾನೆ ಸೆರೆಹಿಡಿದು ಒಂದು ದಿನವಾಗುವುದರೊಳಗೆ ಆ ಸಂತಸಕ್ಕೆ ತಣ್ಣೀರೆರಚಿದಂತಾಗಿದೆ. ಹೌದು,ಅತ್ತ ಗುಡ್ಡೇಹಳ್ಳದಲ್ಲಿ ಕಾಡಾನೆ ಸೆರೆಯಾಗುತ್ತಿದಂತೆ ಇತ್ತ ತಾಲೂಕಿನ ಸಿಂಸೆ ಗ್ರಾಮದ ಕುಂಬ್ರಿ ಸಮೀಪದ ಮಹೇಶ್ ಹಾಗೂ ಇತರರ ತೋಟದ ಹತ್ತಿರ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಇದು ಅಲ್ಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಠಿಸಿದೆ. ತೊಂದರೆಯಾಗುವ ಮುಂಚೆ ಇಲಾಖೆ ಹಾಗೂ ಶಾಸಕರು ಎಚ್ಚೆತ್ತು ಈ ಕಾಡಾನೆಗಳನ್ನೂ ಸೆರೆ ಹಿಡಿಸುವಂತೆ ಅಲ್ಲಿನ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.