ರೈತರ ಸಮಸ್ಯೆಗೆ ತಾಲೂಕು ಮಟ್ಟದಲ್ಲಿ ಪಕ್ಷಾತೀತ ಹೋರಾಟ
– 11.10.2025ರ ಮೇಗರವಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಸಭೆ
– ತಾಲೂಕಿನ ಮೂಲೆ ಮೂಲೆಯಿಂದ ಜನ ಸೇರ್ಪಡೆಗೊಳ್ಳವ ಚರ್ಚೆ
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ರೈತರ ಹಲವು ಸಮಸ್ಯೆಗಳನ್ನು ಇಟ್ಟುಕೊಂಡು ತಾಲೂಕು ಮಟ್ಟದಲ್ಲಿ ಪಕ್ಷಾತೀತವಾಗಿ ಒಂದು ಹೋರಾಟ ನಡೆಸುವ ಸಲುವಾಗಿ ಪೂರ್ವಭಾವಿಯಾಗಿ ದಿನಾಂಕ 11.10.2025ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಮೇಗರವಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ರಂಗ ಮಂದಿರದಲ್ಲಿ ಪಕ್ಷಾತೀತವಾಗಿ ಸಭೆ ನಡೆಯುತ್ತಿದೆ. ದಯಮಾಡಿ ಎಲ್ಲರೂ ಭಾಗವಹಿಸಬೇಕಾಗಿ ಪ್ರಾರ್ಥನೆ. ಈಗಾಗಲೇ ವಾಟ್ಸಪ್ ಗ್ರೂಪ್ ಕೂಡ ರಚನೆಯಾಗಿದ್ದು ತಾಲೂಕಿನ ಮೂಲೆ ಮೂಲೆಯಿಂದ ಸೇರ್ಪಡೆಗೊಂಡು ಚರ್ಚೆಯಲ್ಲಿ ಸಕ್ರಿಯರಾಗಿದ್ದಾರೆ.
ತಮ್ಮ ಜ್ವಾಲೆಂತ ಸಮಸ್ಯೆಗಳೆಂದರೆ
1) ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಟಾಸ್ಕ್ ಫೋರ್ಸ್ ರಚಿಸಿ ರೈತರನ್ನು ಒಕ್ಕಲಿಬ್ಬಿಸಲು ಹೊರಟಿರುವುದು.
2] ಆರು ತಿಂಗಳುಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದ ರೈತರ ಬೆಳೆಗಳಾದ ಅಡಿಕೆ ಮತ್ತು ಭತ್ತದ ಗದ್ದೆಗಳಿಗಾದ ಹಾನಿಗೆ ಶೀಘ್ರ ಪರಿಹಾರ ಘೋಷಿಸಬೇಕು.
3) ಕಾಡು ಪ್ರಾಣಿಗಳು ಕಾಡಿನಲ್ಲಿರದೆ ನಾಡಿಗೆ ಬಂದು ರೈತರ ಬೆಳೆಗಳನ್ನು ನಾಶ ಮಾಡುವುದನ್ನು ತಡೆಯಲು ಅರಣ್ಯ ಇಲಾಖೆ ಮುಂದಾಗಬೇಕು.
4) ಹೊಲ ಗದ್ದೆ ತೋಟಗಳಲ್ಲಿ ಮತ್ತು ವಸತಿ ಪ್ರದೇಶದಲ್ಲಿ ವಿಪರೀತ ಮಂಗನ ಕಾಟ ಈ ವಿಚಾರವಾಗಿ ಅರಣ್ಯ ಇಲಾಖೆಗೆ ತಿಳಿಸಿದರೆ ಮಂಗಗಳು ನಮ್ಮ ಇಲಾಖೆಗೆ ಸೇರಿದ್ದಲ್ಲ ಎಂದು ಹೇಳುತ್ತಿದ್ದಾರೆ ಹಾಗಾದರೆ ಮಂಗಗಳು ಯಾವ ಇಲಾಖೆಗೆ ಸೇರುತ್ತವೆ ಎಂಬುದು ನಿರ್ಧಾರವಾಗಬೇಕು.
5) ವಿಪರೀತವಾಗಿ ಹರಡುತ್ತಿರುವ ಎಲೆ ಚುಕ್ಕಿ ರೋಗವನ್ನು ತಡೆಯಲು ರೈತರಿಗೆ ಕೂಡಲೇ ಕೃಷಿ ಇಲಾಖೆ ನೆರವಾಗಬೇಕು.
ಇಂಥ ಹತ್ತು ಹಲವು ಸಮಸ್ಯೆಗಳ ನಿಗ್ರಹಕ್ಕೆ ಪಕ್ಷಾತೀತವಾಗಿ ಹೋರಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದು ಒದಗಿದೆ, ಎದ್ದೇಳಿ ರೈತರೇ ಈಗಲಾದರೂ ಪಕ್ಷ ಪಾರ್ಟಿ ಜಾತಿ ಬಿಟ್ಟು ಹೋರಾಟಕ್ಕೆ ಮುಂದಾಗೋಣ.
