Categories
ಮಲ್ನಾಡ್

ಡಿಬಿಸಿಗೆ ಪ್ರಮುಖರ ಅಂತಿಮ ನಮನ..!

ಡಿಬಿಸಿಗೆ ಪ್ರಮುಖರ ಅಂತಿಮ ನಮನ..!
– ಮೂಡಿಗೆರೆಯ ದಾರದಹಳ್ಳಿಯಲ್ಲಿ ನಾಳೆ ಅಂತ್ಯಕ್ರಿಯೆ
– ಎಲ್ಲಾ ಪಕ್ಷದ ಪ್ರಮುಖರ ಸಂತಾಪ

NAMMUR EXPRESS NEWS
ಮೂಡಿಗೆರೆ: ರಾಜ್ಯ ಕಂಡ ಅತ್ಯುತ್ತಮ ಸಂಸದೀಯ ಪಟು, ತಮ್ಮ ರಾಜಕೀಯ ಜ್ಞಾನದ ಮೂಲಕ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಮಾಜಿ ಸಚಿವ ಡಿ.ಬಿ. ಚಂದ್ರೆಗೌಡ ಅವರ ಸಾವು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ, ಶಾಸಕರಾಗಿ‌ ಸಚಿವರಾಗಿ ,ಸಂಸದರಾಗಿ‌ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ಚೇತನ ಡಿ.ಬಿ.ಚಂದ್ರೇಗೌಡರಿಗೆ ಅಂತಿಮ ನಮನ ಸಲ್ಲಿಸಲು ರಾಜ್ಯದ ವಿವಿಧ ಕಡೆಗಳಿಂದ ರಾಜಕಾರಣಿಗಳು, ಅವರ ಶಿಷ್ಯ ವರ್ಗ, ಎಲ್ಲಾ ಪಕ್ಷದ ಪ್ರಮುಖರು ಮೂಡಿಗೆರೆಗೆ ಆಗಮಿಸುತ್ತಿದ್ದಾರೆ.
ಮಲೆನಾಡಿನ ತೀರ್ಥಹಳ್ಳಿ, ಶೃಂಗೇರಿ ಶಾಸಕರಾಗಿ, ಚಿಕ್ಕಮಗಳೂರು, ಬೆಂಗಳೂರು ನಗರ ಸಂಸದರಾಗಿದ್ದ ಚಂದ್ರೆಗೌಡರ ಅಂತಿಮ ದರ್ಶನ ನಡೆಯುತ್ತಿದೆ.

ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಅವರು ಸೋಮವಾರ ರಾತ್ರಿ 12.20ಕ್ಕೆ ಮೂಡಿಗೆರೆಯ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 87 ವರ್ಷವಾಗಿತ್ತು.

ತೀರ್ಥಹಳ್ಳಿ, ಶೃಂಗೇರಿ ಪ್ರಮುಖರು ಹಾಜರ್

ಶೃಂಗೇರಿ, ಚಿಕ್ಕಮಗಳೂರು, ತೀರ್ಥಹಳ್ಳಿ, ಬೆಂಗಳೂರು ಭಾಗದ ಪ್ರಮುಖರು ಅಂತಿಮ ದರ್ಶನ ಪಡೆದಿದ್ದಾರೆ. ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಲಯನ್ಸ್ ಪಾಂಡುರಂಗಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದಿದ್ದಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.